ಬೆಂಗಳೂರು: ರಾಜ್ಯ ಸರ್ಕಾರದಿಂದ 1,250 ಶಾಲೆಗಳಲ್ಲಿ 1,582 ಶೌಚಾಲಯಗಳನ್ನು ನಿರ್ಮಾಣ ಮಾಡೋದಕ್ಕೆ 6,328 ಲಕ್ಷ ಹಣವನ್ನು ಬಿಡುಗಡೆ ಮಾಡಿ ಆದೇಶಿಸಿದೆ.
ಈ ಕುರಿತಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವಿಶೇಷಾಧಿಕಾರಿ ಹಾಗೂ ಪದನಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ ಶುಭಮಂಗಳ ಆರ್.ವಿ ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ ಮುಖ್ಯಮಂತ್ರಿಯವರು ವಿಧಾನ ಮಂಡಲದಲ್ಲಿ ಮಂಡಿಸಿದ 2025-26ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಗೆ ಸಂಬಂಧಿಸಿದಂತೆ ಕಂಡಿಕೆ-116 ರಲ್ಲಿ ಈ ಕೆಳಕಂಡಂತೆ ಘೋಷಿಸಿರುತ್ತಾರೆ ಎಂದಿದ್ದಾರೆ.
“ರಾಜ್ಯದ ಸರ್ಕಾರಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಹೆಚ್ಚುವರಿ ಕೊಠಡಿ, ಶೌಚಾಲಯಗಳ ನಿರ್ಮಾಣ ಮತ್ತು ದುರಸ್ತಿ ಕಾರ್ಯಗಳಿಗೆ ರೂ.725.00 ಕೋಟಿ ಹಾಗೂ ಅಗತ್ಯ ಪೀಠೋಪಕರಣಗಳನ್ನು ಒದಗಿಸಲು 50 ಕೋಟಿ ರೂ. ನೀಡಲಾಗಿದೆ. 2025-26ನೇ ಸಾಲಿನ ಆಯವ್ಯಯ ಘೋಷಿತ ಕಂಡಿಕೆ-95 ರಂತೆ ಲೆಕ್ಕಶೀರ್ಷಿಕೆವಾರು ಕಾರ್ಯಕ್ರಮವಾರು ಅನುದಾನ ನಿಗದಿಪಡಿಸಿ ಆದೇಶಿಸಿದೆ ಎಂದು ಹೇಳಿದ್ದಾರೆ.
ಪುಸ್ತಾವನೆಯಲ್ಲಿ ಆಯುಕ್ತರು ಶಾಲಾ ಶಿಕ್ಷಣ ಇಲಾಖೆ, ಇವರು ರಾಜ್ಯದಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಕಾಮಗಾರಿಗಳಿಗೆ ಕ್ರಿಯಾಯೋಜನೆ ಸಲ್ಲಿಸಿ ಅನುಮೋದನೆ ನೀಡಿ ಅನುದಾನ ಬಿಡುಗಡೆ ಮಾಡುವಂತೆ ಕೋರಿರುತ್ತಾರೆ. ಈ ಹಿಂದಿನ ಸಾಲುಗಳ ಶೌಚಾಲಯ ನಿರ್ಮಾಣಕ್ಕೆ ಹಂಚಿಕೆಯಾದ ರೂ.2671.00 ಲಕ್ಷಗಳ ಅನುದಾನಕ್ಕೆ ಯಾವುದೇ ಕ್ರಿಯಾ ಯೋಜನೆ ಸಲ್ಲಿಕೆಯಾಗದೇ ಇರುವುದರಿಂದ ಹಿಂದಿನ ಸಾಲುಗಳ ಶೌಚಾಲಯ ನಿರ್ಮಾಣಕ್ಕೆ ಹಂಚಿಕೆಯಾದ ರೂ.2671.00 ಅನುದಾನಕ್ಕೂ ಕ್ರಿಯಾ ಯೋಜನೆಯನ್ನು ಸಲ್ಲಿಸುವಂತೆ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಇವರಿಗೆ ಕೋರಲಾಗಿದೆ.
2025-26ನೇ ಸಾಲಿನ ಆಯವ್ಯಯ ಘೋಷಣೆಯ ಕಂಡಿಕೆ ಸಂಖ್ಯೆ: 116 ರನ್ವಯ ಸರ್ಕಾರಿ ಶಾಲೆಗಳ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಶಾಲಾ ಶೌಚಾಲಯ ನಿರ್ಮಾಣಕ್ಕೆ 2025- 26 F 4202-01-201-1-04-139 Insfrastructure for Primary Schools and High Schools on 4202-01-201-1-07-139 Toilet facilities for schools ನಿಗದಿಪಡಿಸಿರುವ ಅನುದಾನದಿಂದ 6328.00 ಲಕ್ಷಗಳ ವೆಚ್ಚದಲ್ಲಿ ರಾಜ್ಯವಲಯ ಮುಂದುವರೆದ ಯೋಜನೆಯಡಿ 1250 ಸರ್ಕಾರಿ ಶಾಲೆಗಳ 1582 (1582 for Boys and Girls) ಶಾಲಾ ಶೌಚಾಲಯ ನಿರ್ಮಾಣ ಕಾಮಗಾರಿಗಳಿಗೆ ಅನುಬಂಧ-1 ರಿಂದ 5 ರಲ್ಲಿರುವಂತೆ ಕ್ರಿಯಾ ಯೋಜನೆ ಅನುಷ್ಟಾನಗೊಳಿಸಲು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಇವರಿಗೆ ಅನುಮೋದನೆ ನೀಡಿ ಆದೇಶಿಸಿದೆ.
2025-26ನೇ ಸಾಲಿನ ರಾಜ್ಯವಲಯ ಮುಂದುವರೆದ ಯೋಜನೆಯಡಿ 1275 ಸರ್ಕಾರಿ ಶಾಲೆಗಳ 1582 (1582 for Boys and 1582 for Girls) ಶಾಲಾ ಶೌಚಾಲಯ ನಿರ್ಮಾಣ ಕಾಮಗಾರಿಗಳಿಗೆ ರೂ.6328.00 ಲಕ್ಷಗಳಿಗೆ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು…

ಸಂಕ್ರಾಂತಿ ಹಬ್ಬದ ಪ್ರಯುಕ್ತ ಮೈಸೂರು-ಬೆಳಗಾವಿ ನಡುವೆ ವಿಶೇಷ ರೈಲು ಸಂಚಾರ
ನಾಳೆ, ನಾಡಿದ್ದು ತುಮಕೂರಿನ ಶಿರಾದಲ್ಲಿ ‘ಕಾಡುಗೊಲ್ಲ ಬುಡಕಟ್ಟ, ಸಾಹಿತ್ಯ, ಸಂಸ್ಕೃತಿ ಅಧ್ಯಯನ ಶಿಬಿರ’ ಆಯೋಜನೆ








