Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​’ಇದು ಕೆಲಸವಲ್ಲ, ಚಿತ್ರಹಿಂಸೆ!’: ಹತ್ತು ನಿಮಿಷಕ್ಕೊಮ್ಮೆ ಸ್ಕ್ರೀನ್‌ಶಾಟ್, ಸದಾ ವೆಬ್‌ಕ್ಯಾಮ್ ಆನ್; ಕಠಿಣ ನಿಯಮದ ಕೆಲಸಕ್ಕೆ ಮಹಿಳೆ ‘ನೋ’

‘ನೋ ಟಚ್, ನೋ ಡಸ್ಟ್’: CBSE ಇತಿಹಾಸದಲ್ಲೇ ಮೊದಲ ಬಾರಿಗೆ ‘ಡಿಜಿಟಲ್ ಮೌಲ್ಯಮಾಪನ’ ಆರಂಭ!

ಅಸ್ಸಾಂನಲ್ಲಿ ಹ್ಯಾಟ್ರಿಕ್ ಗೆಲುವಿನ ಸಂಭ್ರಮ: ಮೇ 12ರ ಮುಖ್ಯಮಂತ್ರಿ ಪದಗ್ರಹಣ ಸಮಾರಂಭ ‘ಐತಿಹಾಸಿಕ ಕ್ಷಣ’ ಎಂದ ದಿಲೀಪ್ ಸೈಕಿಯಾ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಭಾಷೆ ಕಡೆಗಣನೆಗೆ ವಿಶ್ವವಿದ್ಯಾನಿಲಯಗಳು ಹಾಗೂ ಅಧ್ಯಾಪಕರು ಕಾರಣ: ಶತಾವಧಾನಿ ಆರ್ ಗಣೇಶ್
KARNATAKA

ಭಾಷೆ ಕಡೆಗಣನೆಗೆ ವಿಶ್ವವಿದ್ಯಾನಿಲಯಗಳು ಹಾಗೂ ಅಧ್ಯಾಪಕರು ಕಾರಣ: ಶತಾವಧಾನಿ ಆರ್ ಗಣೇಶ್

By ವಸಂತ್‌ ಬಿ ಈಶ್ವರಗೆರೆ

ಮಂಗಳೂರು: ‘ಭಾಷೆಯ ಕಡೆಗಣನೆಗೆ ವಿಶ್ವವಿದ್ಯಾಲಯಗಳು ಹಾಗೂ ಅಧ್ಯಾಪಕರು ಕಾರಣ. ವಿಶ್ವವಿದ್ಯಾಲಯಗಳ ಪಠ್ಯಗಳಲ್ಲಿ ಕಥೆ ಹಾಗೂ ಕವಿತೆಗಳ ಸಾರಾಂಶದ ಬಗ್ಗೆ ಅಷ್ಟೇ ಪಾಠ ಮಾಡಲಾಗುತ್ತದೆ ಹೊರತು ಅದನ್ನು ಆಳವಾಗಿ ವಿವರಿಸುವ ಕೆಲಸ ಆಗುವುದಿಲ್ಲ. ಆ ಕೆಲಸ ಹೆಚ್ಚಾದಾಗ ಮೌಲ್ಯಗಳು ಹಾಗೂ ಭಾಷೆ ಎರಡೂ ಅರಿವಿಗೆ ಬರಲು ಸಾಧ್ಯʼ ಎಂದು ಶತಾವಧಾನಿ ಆರ್. ಗಣೇಶ್ ಹೇಳಿದರು.

ಮಂಗಳೂರು ಲಿಟ್ ಫೆಸ್ಟ್ 8ನೇ ಆವೃತ್ತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅನ್ಯಥಾ ಭಾವಿಸಬೇಡಿ ಎಂದು ಹೇಳಿಯೇ ಮಾತನಾಡಿದ ಅವರು, ʼಪಂಪ, ಡಿವಿಜಿ, ಕುವೆಂಪು ಕಾವ್ಯಗಳ ಸಾರಾಂಶ ಹೇಳಲಾಗುತ್ತದೆಯೇ ಹೊರತು. ಆಳವಾದ ಅಧ್ಯಯನ ಆಗುವುದಿಲ್ಲ. ನಮಗೆ ಮೌಲ್ಯಗಳು ತಿಳಿಯಬೇಕು. ಮೌಲ್ಯಗಳು ಎಂದರೆ ನಮ್ಮನ್ನು ನಾವು ತಿಳಿದುಕೊಳ್ಳುವುದು. ಫ್ಯಾಕ್ಟ್ಸ್‌ ಹೇಳಲು ಆಗದಿರುವುದನ್ನು ಮೌಲ್ಯಗಳು ಹೇಳುತ್ತವೆ’ ಎಂದು ಹೇಳಿದರು.

ಅದಕ್ಕೂ ಮುನ್ನ ಮಂಗಳೂರು ಲಿಟ್ ಫೆಸ್ಟ್ 8ನೇ ಆವೃತ್ತಿಗೆ ಸರಸ್ವತಿ ರಥ ಎಳೆಯುವ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು. ಪ್ರಧಾನ ಭಾಷಣಕಾರರಾಗಿ ಮಾತನಾಡಿದ ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ರವಿ ಎಸ್. ಅವರು, ʼಸಮಾಜವನ್ನು ರೂಪಿಸುವಲ್ಲಿ ಸಾಹಿತ್ಯದ ಮಹತ್ವದ ಪಾತ್ರವಿದೆ. ಓದು ಮತ್ತು ಚಿಂತನೆಯ ಮೂಲಕ ವ್ಯಕ್ತಿಯ ಬೌದ್ಧಿಕ ಬೆಳವಣಿಗೆ ಸಾಧ್ಯವಾಗುತ್ತದೆ. ಯುವಜನರಲ್ಲಿ ವಿಮರ್ಶಾತ್ಮಕ ಚಿಂತನೆ ಮತ್ತು ಸೃಜನಶೀಲತೆಯನ್ನು ಬೆಳೆಸುವಲ್ಲಿ ಲಿಟ್ ಫೆಸ್ಟ್‌ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆʼ ಎಂದರು.

ಕಾರ್ಯಕ್ರಮದಲ್ಲಿ ಪದ್ಮಶ್ರೀ ಡಾ.ಮೀನಾಕ್ಷಿ ಜೈನ್, ಭಾರತ್ ಫೌಂಡೇಶನ್ ಟ್ರಸ್ಟಿ ಬ್ರಿಜೇಶ್ ಚೌಟ ಅವರು ಉಪಸ್ಥಿತರಿದ್ದರು. ಇತ್ತೀಚೆಗೆ ನಿಧನರಾದ ಡಾ. ಎಸ್.ಎಲ್. ಭೈರಪ್ಪ ಮತ್ತು ಡಾ. ವಿನಯ ಹೆಗ್ಡೆ ಅವರಿಗೆ ಗೌರವ ನಮನ ಸಲ್ಲಿಸಲಾಯಿತು. ಲಕ್ಷ್ಮೀ ಮಠದಮೂಳೆ ಅವರು ಪ್ರಾರ್ಥನಾ ಗೀತೆಯನ್ನು ಹಾಡಿದರು. ಡಾ. ವಿದ್ಯಾ ಅವರು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮವನ್ನು ಶೈನಾ ಡಿಸೋಜಾ ಮತ್ತು ಆರ್‌ಜೆ ಅಭಿಷೇಕ್ ಶೆಟ್ಟಿ ನಿರೂಪಿಸಿದರು.

ಸಾಹಿತ್ಯದ ಮುಖಾಂತರ ಮೌಲ್ಯಗಳ ಅನ್ವೇಷಣೆ:

ಉದ್ಘಾಟನಾ ಗೋಷ್ಠಿಯಲ್ಲಿ ಸಾಹಿತ್ಯದ ಮುಖಾಂತರ ಮೌಲ್ಯಗಳ ಅನ್ವೇಷಣೆ ಎಂಬ ವಿಷಯದ ಕುರಿತು ಅಜಕ್ಕಳ ಗಿರೀಶ್‌ ಭಟ್‌ ಹಾಗೂ ಶತಾವಧಾನಿ ಆರ್‌ ಗಣೇಶ್‌ ಸಂವಾದ ನಡೆಸಿದರು. ಮೌಲ್ಯಗಳ ಬಗ್ಗೆ ಮಾತನಾಡಿದ ಆರ್.‌ ಗಣೇಶ್‌, ‘ಅಖಂಡ ಭಾರತದ ಸಂವೇದನೆಯಲ್ಲಿ ಮೌಲ್ಯ ಎನ್ನುವಂಥದ್ದು ಸಾಹಿತ್ಯ ಮಾತ್ರವಲ್ಲದೆ ಎಲ್ಲಾ ಕಲೆಗಳಲ್ಲೂ ಇದೆ. ಸಾಹಿತ್ಯದ ಮುಖಾಂತರ ಬರುವ ಮೌಲ್ಯಗಳು ಧ್ವನಿ ಹಾಗೂ ರಸ ಮಾರ್ಗದಲ್ಲಿ ಇರುತ್ತದೆ. ಸಂವೇದನೆಯನ್ನು ಬುದ್ಧಿಯ ಮೂಲಕ ಹೆಚ್ಚು ಮಾಡಲು ಆಗವುದಿಲ್ಲ, ಅದಕ್ಕೆ ಭಾವ ಬೇಕುʼ ಎಂದು ಹೇಳಿದರು.

ಹಾಗೆಯೇ ಸಾಹಿತ್ಯದ ರಚನೆಯ ಕುರಿತು ಮಾತನಾಡುತ್ತ ಅವರು, ʼಸಮಸ್ಯೆಯನ್ನೇ ಕೇಂದ್ರವಾಗಿಟ್ಟುಕೊಂಡು ರಚಿಸಿರುವ ಯಾವ ಸಾಹಿತ್ಯವೂ ನಿಲ್ಲುವುದಿಲ್ಲ. ಸಮಸ್ಯೆಯ ಆಳದಲ್ಲಿರುವ ಮಾನವನ ಮನಸ್ಥಿತಿಯನ್ನು ಗಮನಿಸಬೇಕುʼ ಎಂದರು.

ಸರಸ್ವತಿ ರಥ ಎಳೆಯುವ ಮೂಲಕ ಚಾಲನೆ:

ಮಂಗಳೂರು ಲಿಟ್ ಫೆಸ್ಟ್‌ ನ 8ನೇ ಆವೃತ್ತಿಗೆ ಹೊತ್ತಿಗೆಗಳು ತುಂಬಿದ್ದ ಸರಸ್ವತಿ ರಥವನ್ನು ಎಳೆಯುವ ಮೂಲಲಕ ವಿಧ್ಯುಕ್ತ ಚಾಲನೆ ನೀಡಿದ್ದು ವಿಶೇಷ. ಭಾಗವಹಿಸಿದ್ದ ಅತಿಥಿ ಗಣ್ಯರು ವೇದಿಕೆಗೆ ಸರಸ್ವತಿ ರಥವನ್ನು ಎಳೆದುಕೊಂಡು ಬರುವ ಮೂಲಕ ಮಂಗಳೂರು ಲಿಟ್ ಫೆಸ್ಟ್ ಉದ್ಘಾಟಿಸಿದ್ದು ನೆರೆದವರ ಗಮನ ಸೆಳೆಯಿತು.

Share. Facebook Twitter LinkedIn WhatsApp Email

Related Posts

ಸಚಿವ ಡಿ.ಸುಧಾಕರ್ ಅಂತಿಮ ದರ್ಶನದ ವೇಳೆ ಬಿಕ್ಕಿ ಬಿಕ್ಕಿ ಅತ್ತ ಡಿಸಿಎಂ ಡಿ.ಕೆ ಶಿವಕುಮಾರ್

1 Min Read

ಸಚಿವ ಡಿ. ಸುಧಾಕರ್ ನಿಧನ ಹಿನ್ನಲೆ: ನೂತನ ಶಾಸಕರ ಪ್ರಮಾಣವಚನ ಕಾರ್ಯಕ್ರಮ ಮುಂದೂಡಿಕೆ

1 Min Read

ಮಲೆನಾಡು ಭಾಗದ ಜನರಿಗೆ ಉನ್ನತ ಶಿಕ್ಷಣ ಒದಗಿಸುವುದೇ ಎಂ.ಡಿ.ಎಫ್ ಗುರಿ: ಅಧ್ಯಕ್ಷ ಬಿ.ಆರ್.ಜಯಂತ್

2 Mins Read
Recent News

​’ಇದು ಕೆಲಸವಲ್ಲ, ಚಿತ್ರಹಿಂಸೆ!’: ಹತ್ತು ನಿಮಿಷಕ್ಕೊಮ್ಮೆ ಸ್ಕ್ರೀನ್‌ಶಾಟ್, ಸದಾ ವೆಬ್‌ಕ್ಯಾಮ್ ಆನ್; ಕಠಿಣ ನಿಯಮದ ಕೆಲಸಕ್ಕೆ ಮಹಿಳೆ ‘ನೋ’

‘ನೋ ಟಚ್, ನೋ ಡಸ್ಟ್’: CBSE ಇತಿಹಾಸದಲ್ಲೇ ಮೊದಲ ಬಾರಿಗೆ ‘ಡಿಜಿಟಲ್ ಮೌಲ್ಯಮಾಪನ’ ಆರಂಭ!

ಅಸ್ಸಾಂನಲ್ಲಿ ಹ್ಯಾಟ್ರಿಕ್ ಗೆಲುವಿನ ಸಂಭ್ರಮ: ಮೇ 12ರ ಮುಖ್ಯಮಂತ್ರಿ ಪದಗ್ರಹಣ ಸಮಾರಂಭ ‘ಐತಿಹಾಸಿಕ ಕ್ಷಣ’ ಎಂದ ದಿಲೀಪ್ ಸೈಕಿಯಾ

ಸಚಿವ ಡಿ.ಸುಧಾಕರ್ ಅಂತಿಮ ದರ್ಶನದ ವೇಳೆ ಬಿಕ್ಕಿ ಬಿಕ್ಕಿ ಅತ್ತ ಡಿಸಿಎಂ ಡಿ.ಕೆ ಶಿವಕುಮಾರ್

State News
KARNATAKA

ಸಚಿವ ಡಿ.ಸುಧಾಕರ್ ಅಂತಿಮ ದರ್ಶನದ ವೇಳೆ ಬಿಕ್ಕಿ ಬಿಕ್ಕಿ ಅತ್ತ ಡಿಸಿಎಂ ಡಿ.ಕೆ ಶಿವಕುಮಾರ್

By ವಸಂತ್‌ ಬಿ ಈಶ್ವರಗೆರೆ KARNATAKA 1 Min Read

ಚಿತ್ರದುರ್ಗ: ದಶಕಗಳ ಕಾಲದ ಆತ್ಮೀಯ ಸ್ನೇಹಿತ, ಸಂಪುಟ ಸಹೋದ್ಯೋಗಿ ಡಿ. ಸುಧಾಕರ್ ಅವರ ಅಕಾಲಿಕ ನಿಧನದಿಂದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…

ಸಚಿವ ಡಿ. ಸುಧಾಕರ್ ನಿಧನ ಹಿನ್ನಲೆ: ನೂತನ ಶಾಸಕರ ಪ್ರಮಾಣವಚನ ಕಾರ್ಯಕ್ರಮ ಮುಂದೂಡಿಕೆ

ಮಲೆನಾಡು ಭಾಗದ ಜನರಿಗೆ ಉನ್ನತ ಶಿಕ್ಷಣ ಒದಗಿಸುವುದೇ ಎಂ.ಡಿ.ಎಫ್ ಗುರಿ: ಅಧ್ಯಕ್ಷ ಬಿ.ಆರ್.ಜಯಂತ್

ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯದ್ದು ಗೆಲುವಲ್ಲ, ಅದು ವ್ಯವಸ್ಥಿತ ಷಡ್ಯಂತ್ರ; ಸಾಗರದಲ್ಲಿ ಬಿ.ಕೆ. ಹರಿಪ್ರಸಾದ್ ಹೇಳಿಕೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.