ಬೆಂಗಳೂರು : ಬೆಂಗಳೂರಿನ ಶ್ರೀನಿವಾಸಪುರದ ಬಳಿ ಇರುವ ಕೋಗಿಲು ಲೇಔಟ್ ನಲ್ಲಿ ಅನಧಿಕೃತ ಮನೆಗಳ ತೆರವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಗ್ರೇಟರ್ ಬೆಂಗಳೂರು ಅಥಾರಿಟಿ ಕೈ ಸೇರಿದ ನಿರಾಶ್ರಿತರ ಮಾಹಿತಿ ಒಟ್ಟು 188 ಮನೆಗಳನ್ನು ಗುರುತಿಸಿ ಜಿಬಿಎಗೆ ವರದಿ ಸಲ್ಲಿಸಲಾಗಿದೆ.
ಕಂದಾಯ ಇಲಾಖೆ ಮತ್ತು ಉತ್ತರ ನಗರ ಪಾಲಿಕೆಯಿಂದ ಜಿಬಿಎಗೆ ವರದಿ ಸಲ್ಲಿಕೆ ಮಾಡಲಾಯಿತು. ಮತ್ತೊಮ್ಮೆ ಪರಿಶೀಲನೆ ಬಳಿಕ ಜಿಬಿಎ ಸರ್ಕಾರಕ್ಕೆ ಈ ವರದಿಯನ್ನು ಸಲ್ಲಿಸಲಿದೆ. ಬೆಂಗಳೂರಿನ ಯಲಹಂಕ ಬಳಿಯ ಫಕೀರ ಲೇಔಟ್, ಹೊಸ ಫಕಿರ್ ಲೇಔಟ್, ವಾಸಿಂ ಲೇಔಟ್ ನಿರಾಶ್ರಿತರ ಮಾಹಿತಿ ಈ ಒಂದು ವರದಿಯಲ್ಲಿದೆ. 167 ಮನೆಗಳ ತೆರವಿನಲ್ಲಿ 188 ಕುಟುಂಬಗಳು ನಿರಾಶ್ರಿತರಾಗಿದ್ದಾರೆ.
188 ಕುಟುಂಬಗಳ ಒಟ್ಟು 1007 ಜನ ಸದಸ್ಯರು ಸದ್ಯದ ಅಧಿಕೃತ ನಿರಾಶ್ರಿತರಾಗಿದ್ದಾರೆ. 188 ಕುಟುಂಬದ ಮುಖ್ಯಸ್ಥರು 475 ಜನ ವಯಸ್ಕರು, 34 ಮಕ್ಕಳು ಮುಸ್ಲಿಂ ಕುಟುಂಬಗಳು 156, ಹಿಂದೂ 31 ಹಾಗೂ ಕ್ರಿಶ್ಚಿಯನ್ 1 ಕುಟುಂಬ ನಿರಾಶ್ರಿತರಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.








