Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬೆಂಗಳೂರಲ್ಲಿ ಹೈಟೆಕ್ ಕಾರ್ ಡ್ರಿಫ್ಟಿಂಗ್ : ಅಪರಿಚಿತ ಚಾಲಕನ ವಿರುದ್ಧ FIR ದಾಖಲು | Video Viral

21/03/2026 4:34 PM

BIG NEWS : IPL 2026 ಪಂದ್ಯಾವಳಿ : ಚಿನ್ನಸ್ವಾಮಿ ಸ್ಟೇಡಿಯಂ ಜನಜಂಗುಳಿ ನಿಯಂತ್ರಿಸಲು ‘AI’ ಬಳಕೆ

21/03/2026 4:20 PM

Good News ; ಆಭರಣ ಪ್ರಿಯರಿಗೆ ಭರ್ಜರಿ ನ್ಯೂಸ್ ; ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ

21/03/2026 4:08 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಉತ್ತರ ಕನ್ನಡದ ಕ್ಯಾದಗಿ ವಲಯದಲ್ಲಿ ಅಕ್ರಮವಾಗಿ ಮರ ಕಡಿತಲೆ ಮಾಡುವವರಿಗೆ RFO, ವಾಚರ್ ಸಾಥ್: ಸೂಕ್ತ ಕ್ರಮಕ್ಕೆ ಒತ್ತಾಯ
KARNATAKA

BIG NEWS: ಉತ್ತರ ಕನ್ನಡದ ಕ್ಯಾದಗಿ ವಲಯದಲ್ಲಿ ಅಕ್ರಮವಾಗಿ ಮರ ಕಡಿತಲೆ ಮಾಡುವವರಿಗೆ RFO, ವಾಚರ್ ಸಾಥ್: ಸೂಕ್ತ ಕ್ರಮಕ್ಕೆ ಒತ್ತಾಯ

By kannadanewsnow0918/12/2025 1:19 PM

ಉತ್ತರ ಕನ್ನಡ: ಜಿಲ್ಲೆಯಲ್ಲಿ ಅಕ್ರಮವಾಗಿ ಮರ ಕಡಿತಲೆ ಮಾಡಿದರೂ, ನಾಮಕಾವಸ್ಥೆಗೆ ಪರಿಶೀಲನೆ ಮಾಡಿ, ಪ್ರಕರಣ ಮುಚ್ಚಿ ಹಾಕಿರುವಂತ ಆರೋಪವು ಕ್ಯಾದಗಿಯ RFO ಹಾಗೂ ವಾಚರ್ ಉದಯ ನಾಯ್ಕ್ ವಿರುದ್ಧ ಕೇಳಿ ಬಂದಿದೆ. ಮೂಗರ್ಜಿಯನ್ನು ಗಂಭೀರವಾಗಿ ಪರಿಗಣಿಸದಂತ ಅರಣ್ಯ ಇಲಾಖೆಯು, ವಾಚರ್, ಮರ ಕಡಿತಲೆ ಮಾಡಿದವರಿಗೆ ಬೆಂಬಲವಾಗಿ ನಿಂತಿರುವುದಾಗಿ ಹೇಳಲಾಗುತ್ತಿದೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲ್ಲೂಕಿನ ಕ್ಯಾದಗಿ ವಲಯ ಅರಣ್ಯಾಧಿಕಾರಿಗಳ ಸಮೀಪದ ಗ್ರಾಮವಾಗಿರುವಂತ ಹೊನ್ನೆಬಿಡಾರದಲ್ಲಿ ಬೃಹತ್ ಗಾತ್ರದ ಮರಗಳನ್ನು ಕಟ್ಟಿಂಗ್ ಮಿಷಿನ್ ಬಳಸಿ ಬಾಬು ನಾಯ್ಕ್ ಎಂಬುವರು ಕಡಿತಲೆ ಮಾಡಿದಂತ ಆರೋಪ ಕೇಳಿ ಬಂದಿದೆ. ಖುದ್ದು ಮರ ಕಡಿತಲೆ ಮಾಡೋದಕ್ಕೆ ಆ ಭಾಗದ ವಾಚರ್ ಉದಯ ನಾಯ್ಕ್ ಎಂಬಾತ ಸಾಥ್ ನೀಡಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ RFOಗೆ ಸಾರ್ವಜನಿಕರೊಬ್ಬರು ಮೂಗರ್ಜಿ ಬರೆದಿದ್ದಾರೆ. ಅದನ್ನು ಗೌಪ್ಯವಾಗಿಟ್ಟು ಸ್ಥಳಕ್ಕೆ ತೆರಳಿ ಲಕ್ಷಾಂತರ ಬೆಲೆ ಬಾಳುವಂತ ಕಡಿತಲೆ ಮಾಡಿದಂತ ಮರಗಳನ್ನು ವಶಕ್ಕೆ ಪಡೆಯೋದು ಬಿಟ್ಟು, ವಾಚರ್ ಉದಯ ನಾಯ್ಕ್ ಗೆ ದೂರು ಅರ್ಜಿಯ ವಿಷಯವನ್ನೇ ತಿಳಿಸಿದ್ದಾರೆ. ಜೊತೆಗೆ ತಾನು ಪರಿಶೀಲನೆಗೆ ಬರುವುದಾಗಿ, ಆ ವೇಳೆಗೆ ಮರಗಳನ್ನು ಸಾಗಿಸುವಂತೆಯೂ ಮುನ್ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಕ್ಯಾದಗಿ ಆರ್ ಎಫ್ ಓ ಹೊನ್ನೆಬಿಡಾರ ಗ್ರಾಮಕ್ಕೆ ತೆರಳಿದಾಗ ಕಡಿತಲೆ ಮಾಡಿದಂತ ಮರಗಳೇ ಸಿಕ್ಕಲ್ಲ. ಕಾಟಾಚಾರಕ್ಕೆ ಪರಿಶೀಲಿಸಿ, ಮರ ಕಡಿತಲೆಯ ತುಂಡುಗಳು ಸಿಕ್ಕಿಲ್ಲ ಎಂಬುದಾಗಿ ಮೇಲಧಿಕಾರಿಗಳಿಗೆ ವರದಿ ನೀಡಿದ್ದಾಗಿ ಹೇಳಲಾಗುತ್ತಿದೆ.

ಇನ್ನೂ ಆರ್ ಎಫ್ ಒ ಅವರೇ ಮರ ಕಡಿತಲೆ ಮಾಡಿದವರಿಗೆ ಬೆಂಬಲಿಸಿದ್ದರಿಂದ ಗ್ರಾಮಸ್ಥರು ದೂರು ಅರ್ಜಿಯನ್ನು ಶಿರಸಿ ಡಿಎಫ್ಓ, ಆ ಬಳಿಕ ಉತ್ತರ ಕನ್ನಡ ಸಿಸಿಎಫ್ ಹಾಗೂ ಬೆಂಗಳೂರಿನ ಅರಣ್ಯ ಭವನದಲ್ಲಿನ ಮುಖ್ಯ ಅರಣ್ಯಾಧಿಕಾರಿಗಳಿಗೂ ಪತ್ರವನ್ನು ಗ್ರಾಮಸ್ಥರೊಬ್ಬರು ಬರೆದಿರೋದಾಗಿ ತಿಳಿದು ಬಂದಿದೆ. ಇಷ್ಟೆಲ್ಲ ಮೂಗರ್ಜಿಗಳು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಹೋದ್ರೂ, ಈವರೆಗೆ ಮರ ಕಡಿತಲೆ ಮಾಡಿದಂತ ಬಾಬು ನಾಯ್ಕ್, ವಾಚರ್ ಉದಯ ನಾಯ್ಕ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಅಂದಹಾಗೇ ಹೊನ್ನೆಬಿಡಾರ ಗ್ರಾಮದಲ್ಲಿ ಇಡೀ ಊರಿಗೆ ಕೇಳುವಂತೆ ಮಿಶಿನ್ ಬಳಸಿ ಜಂಗಲ್ ಮರವನ್ನು ಕಡಿತಲೆ ಮಾಡಲಾಗಿದೆ. ಹೀಗೆ ಕಡಿತಲೆ ಮಾಡಿದಂತ ಮರವನ್ನು ತುಂಡರಿಸಿ ಬೇರೆಡೆಗೆ ಸಾಗಿಸಿದರೂ, ಅದರ ಬುಡ ಕಡಿತಲೆ ಮಾಡಿದಲ್ಲೇ ಇದ್ದರೂ ಮರ ಕಡಿತಲೆ ಮಾಡಿದವರ ವಿರುದ್ಧ ಅರಣ್ಯ ಇಲಾಖೆ ಕ್ರಮ ಏಕಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಈ ಕೂಡಲೇ ಮರ ಕಡಿತಲೆಗೆ ಅವಕಾಶ ಮಾಡಿಕೊಟ್ಟ ವಾಚರ್ ಉದಯ ನಾಯ್ಕ್, ಮರ ಕಡಿದಂತ ಬಾಬು ನಾಯ್ಕ್ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಅರಣ್ಯ ಇಲಾಖೆ ಕೈಗೊಳ್ಳಬೇಕು ಎಂಬುದು ಹೊನ್ನೆಬಿಡಾರ ಗ್ರಾಮಸ್ಥರ ಒತ್ತಾಯವಾಗಿದೆ. ಆ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕ್ರಮ ಕೈಗೊಳ್ಳುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ವರದಿ; ವಸಂತ ಬಿ ಈಶ್ವರಗೆರೆ… ಸಂಪಾದಕರು

Share. Facebook Twitter LinkedIn WhatsApp Email

Related Posts

BREAKING : ಬೆಂಗಳೂರಲ್ಲಿ ಹೈಟೆಕ್ ಕಾರ್ ಡ್ರಿಫ್ಟಿಂಗ್ : ಅಪರಿಚಿತ ಚಾಲಕನ ವಿರುದ್ಧ FIR ದಾಖಲು | Video Viral

21/03/2026 4:34 PM1 Min Read

BIG NEWS : IPL 2026 ಪಂದ್ಯಾವಳಿ : ಚಿನ್ನಸ್ವಾಮಿ ಸ್ಟೇಡಿಯಂ ಜನಜಂಗುಳಿ ನಿಯಂತ್ರಿಸಲು ‘AI’ ಬಳಕೆ

21/03/2026 4:20 PM1 Min Read

BREAKING : ಇಂದು ಅಥವಾ ನಾಳೆ ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಟಿಕೆಟ್ ಘೋಷಣೆ : ರಣದೀಪ್ ಸುರ್ಜೆವಾಲಾ

21/03/2026 4:05 PM1 Min Read
Recent News

BREAKING : ಬೆಂಗಳೂರಲ್ಲಿ ಹೈಟೆಕ್ ಕಾರ್ ಡ್ರಿಫ್ಟಿಂಗ್ : ಅಪರಿಚಿತ ಚಾಲಕನ ವಿರುದ್ಧ FIR ದಾಖಲು | Video Viral

21/03/2026 4:34 PM

BIG NEWS : IPL 2026 ಪಂದ್ಯಾವಳಿ : ಚಿನ್ನಸ್ವಾಮಿ ಸ್ಟೇಡಿಯಂ ಜನಜಂಗುಳಿ ನಿಯಂತ್ರಿಸಲು ‘AI’ ಬಳಕೆ

21/03/2026 4:20 PM

Good News ; ಆಭರಣ ಪ್ರಿಯರಿಗೆ ಭರ್ಜರಿ ನ್ಯೂಸ್ ; ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ

21/03/2026 4:08 PM

BREAKING : ಇಂದು ಅಥವಾ ನಾಳೆ ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಟಿಕೆಟ್ ಘೋಷಣೆ : ರಣದೀಪ್ ಸುರ್ಜೆವಾಲಾ

21/03/2026 4:05 PM
State News
KARNATAKA

BREAKING : ಬೆಂಗಳೂರಲ್ಲಿ ಹೈಟೆಕ್ ಕಾರ್ ಡ್ರಿಫ್ಟಿಂಗ್ : ಅಪರಿಚಿತ ಚಾಲಕನ ವಿರುದ್ಧ FIR ದಾಖಲು | Video Viral

By kannadanewsnow0521/03/2026 4:34 PM KARNATAKA 1 Min Read

ಬೆಂಗಳೂರು : ಎಂ.ಜಿ. ರಸ್ತೆಯ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಇಂದು ಬೆಳಗಿನಜಾವ ಐಷಾರಾಮಿ ಲಾಂಬೊರ್ಗಿನಿ ಕಾರು ಡ್ರಿಫ್ಟಿಂಗ್ ಮಾಡಿ…

BIG NEWS : IPL 2026 ಪಂದ್ಯಾವಳಿ : ಚಿನ್ನಸ್ವಾಮಿ ಸ್ಟೇಡಿಯಂ ಜನಜಂಗುಳಿ ನಿಯಂತ್ರಿಸಲು ‘AI’ ಬಳಕೆ

21/03/2026 4:20 PM

BREAKING : ಇಂದು ಅಥವಾ ನಾಳೆ ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಟಿಕೆಟ್ ಘೋಷಣೆ : ರಣದೀಪ್ ಸುರ್ಜೆವಾಲಾ

21/03/2026 4:05 PM

ಸಿಲಿಂಡರ್, ಪೆಟ್ರೋಲ್, ಡೀಸೆಲ್ ದರ ಏರಿಕೆ ವಿರೋಧಿಸಿ ಪ್ರತಿಭಟನೆ : ಬೆಂಗಳೂರಲ್ಲಿ ವಾಟಾಳ್ ನಾಗರಾಜ್ ಪೊಲೀಸರ ವಶಕ್ಕೆ!

21/03/2026 3:42 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.