Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇರಾನ್ ಅನಿಲ ಘಟಕಗಳ ಮೇಲೆ ಭೀಕರ ದಾಳಿ:’ಮಹಾ ಸಂಘರ್ಷಕ್ಕೆ ನಾಂದಿ’ ಎಂದು ಕತಾರ್ ಗಂಭೀರ ಎಚ್ಚರಿಕೆ!

19/03/2026 8:47 AM

ALERT : ಸರಿಯಾದ ನಿದ್ರೆಯಿಲ್ಲದಿದ್ದರೆ ಕಾಡಲಿವೆ ಗಂಭೀರ ಆರೋಗ್ಯ ಸಮಸ್ಯೆಗಳು!

19/03/2026 8:44 AM

BIG NEWS : 2033ರ ವೇಳೆಗೆ ದೇಶದ ಪ್ರತಿ ಪ್ರಜೆಗೂ `ಆರೋಗ್ಯ ವಿಮೆ’ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ

19/03/2026 8:38 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮದ್ದೂರು ತಾಲೂಕಿನ ಭಾರತೀನಗರ (ಕೆ.ಎಂ.ದೊಡ್ಡಿ) ಗ್ರಾ.ಪಂ.ಗೆ ಗಾಂಧಿ ಗ್ರಾಮ ಪುರಸ್ಕಾರ
KARNATAKA

ಮದ್ದೂರು ತಾಲೂಕಿನ ಭಾರತೀನಗರ (ಕೆ.ಎಂ.ದೊಡ್ಡಿ) ಗ್ರಾ.ಪಂ.ಗೆ ಗಾಂಧಿ ಗ್ರಾಮ ಪುರಸ್ಕಾರ

By kannadanewsnow0902/12/2025 6:15 AM

ಮಂಡ್ಯ : ಮದ್ದೂರು ತಾಲೂಕಿನ 42 ಗ್ರಾಮ ಪಂಚಾಯಿತಿಗಳ ಪೈಕಿ ಭಾರತೀನಗರ ( ಕೆ.ಎಂ.ದೊಡ್ಡಿ ) ಗ್ರಾಮ ಪಂಚಾಯಿತಿ 2023-24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ.

ಗ್ರಾಮ ಪಂಚಾಯಿತಿಯ ಎಲ್ಲಾ ಗ್ರಾಮಗಳಲ್ಲೂ ಸರ್ವತೋಮುಖ ಅಭಿವೃದ್ಧಿ, ಆರ್ಥಿಕ ಶಿಸ್ತು, ನೈರ್ಮಲ್ಯ ನಿರ್ವಹಣೆಯೊಂದಿಗೆ ಹಲವಾರು ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಉತ್ತಮ ಆಡಳಿತ ಮತ್ತು ಕಾರ್ಯಸಾಧನೆ ಮಾಡಿರುವ ಗ್ರಾಮ ಪಂಚಾಯಿತಿಗಳಿಗೆ ರಾಜ್ಯ ಸರ್ಕಾರ ನೀಡುವ 2023-24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ.

ಗ್ರಾಮ ಪಂಚಾಯಿತಿಗಳು ಸ್ಥಳೀಯ ಮಟ್ಟದಲ್ಲಿ ಸ್ವಯಂ ಆಡಳಿತ ಸಂಸ್ಥೆಗಳಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕೆಂಬ ಉದ್ದೇಶದಿಂದ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಗ್ರಾಮ ಪಂಚಾಯಿತಿಗಳನ್ನು ಪ್ರೋತ್ಸಾಹಿಸಲು 2013–14ನೇ ಸಾಲಿನಿಂದ ಪ್ರತಿ ತಾಲ್ಲೂಕಿಗೆ ಒಂದು ಗ್ರಾಮ ಪಂಚಾಯಿತಿಯನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗುತ್ತಿದ್ದು, ಹೀಗಾಗಿ 2023-24 ನೇ ಸಾಲಿನಲ್ಲಿ ಮದ್ದೂರು ತಾಲೂಕಿನ ಭಾರತೀನಗರ ಗ್ರಾಮ ಪಂಚಾಯಿತಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ. ಸೋಮವಾರ ವಿಧಾನಸೌಧದ ಬ್ಯಾಂಕೇಟ್ ಹಾಲ್‌ನಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅಧ್ಯಕ್ಷರಾದ ಅನಿತಾ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಧಾ ಅವರುಗಳು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಪಂಚಾಯತ್ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ಪ್ರೋತ್ಸಾಹ ಧನ ನೀಡಿ ಗೌರವಿಸಿದರು.

ಗಾಂಧಿ ಗ್ರಾಮ ಪುರಸ್ಕಾರಕ್ಕೆ ಮದ್ದೂರು ತಾಲೂಕಿನಿಂದ ಮೂರು ಗ್ರಾಪಂಗಳನ್ನು ಆರಂಭದಲ್ಲಿ ಗುರುತಿಸಲಾಗಿತ್ತು. ಅಂತಿಮವಾಗಿ ಆಯಾಯ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ, ಶುದ್ಧ ನೀರು, ಸ್ವಚ್ಛತೆ, ದಾಖಲು ನಿರ್ವಹಣೆ, ತೆರಿಗೆ ಸಂಗ್ರಹ, ಬೀದಿ ದೀಪ ನಿರ್ವಹಣೆ ಹೀಗೆ ಹಲವಾರು ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಹಾಗೂ ಕೈಗೊಂಡಿರುವ ಅಭಿವೃದ್ಧಿ, ಯೋಜನೆ ಅನುಷ್ಠಾನಗಳ ಪ್ರಗತಿ ಅವಲೋಕಿಸಿ ನಿರ್ದಿಷ್ಟ ಮಾನದಂಡಗಳ ಅಂಕಗಳಿಕೆಯನ್ನಾಧರಿಸಿ ಪ್ರತಿ ತಾಲೂಕಿನಿಂದ ಒಂದೊಂದು ಪಂಚಾಯಿತಿಯನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಜಿಪಂ ಸಿಇಒ ಅಧ್ಯಕ್ಷತೆಯ ಸಮಿತಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಶಿಫಾರಸು ಮಾಡಿತ್ತು. ಅದರಂತೆ ಮದ್ದೂರು ತಾಲೂಕಿನ ಭಾರತೀನಗರ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ ಎಂದು ತಾಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ರಾಮಲಿಂಗಯ್ಯ ತಿಳಿಸಿದರು.

ವರದಿ : ಗಿರೀಶ್ ರಾಜ್, ಮಂಡ್ಯ

Share. Facebook Twitter LinkedIn WhatsApp Email

Related Posts

ALERT : ಸರಿಯಾದ ನಿದ್ರೆಯಿಲ್ಲದಿದ್ದರೆ ಕಾಡಲಿವೆ ಗಂಭೀರ ಆರೋಗ್ಯ ಸಮಸ್ಯೆಗಳು!

19/03/2026 8:44 AM1 Min Read

ALERT : ಸಾರ್ವಜನಿಕರೇ ಗಮನಿಸಿ : ಗುಡುಗು, ಸಿಡಿಲಿನಿಂದ ಪಾರಾಗಲು ತಪ್ಪದೇ ಈ ಸಲಹೆಗಳನ್ನು ಪಾಲಿಸಿ !

19/03/2026 8:06 AM2 Mins Read

ALERT : ಬಿಗಿಯಾದ `ಜೀನ್ಸ್ ಪ್ಯಾಂಟ್’ ಧರಿಸುವ ಪುರುಷರೇ ಎಚ್ಚರ : ಇದು ಬಂಜೆತನಕ್ಕೆ ಕಾರಣವಾಗಬಹುದು !

19/03/2026 8:00 AM1 Min Read
Recent News

ಇರಾನ್ ಅನಿಲ ಘಟಕಗಳ ಮೇಲೆ ಭೀಕರ ದಾಳಿ:’ಮಹಾ ಸಂಘರ್ಷಕ್ಕೆ ನಾಂದಿ’ ಎಂದು ಕತಾರ್ ಗಂಭೀರ ಎಚ್ಚರಿಕೆ!

19/03/2026 8:47 AM

ALERT : ಸರಿಯಾದ ನಿದ್ರೆಯಿಲ್ಲದಿದ್ದರೆ ಕಾಡಲಿವೆ ಗಂಭೀರ ಆರೋಗ್ಯ ಸಮಸ್ಯೆಗಳು!

19/03/2026 8:44 AM

BIG NEWS : 2033ರ ವೇಳೆಗೆ ದೇಶದ ಪ್ರತಿ ಪ್ರಜೆಗೂ `ಆರೋಗ್ಯ ವಿಮೆ’ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ

19/03/2026 8:38 AM

BIG NEWS : ಭಾರತದಲ್ಲಿ ಶೇ. 40% ಪದವೀಧರರು ನಿರುದ್ಯೋಗಿಗಳು : ವರದಿ

19/03/2026 8:34 AM
State News
KARNATAKA

ALERT : ಸರಿಯಾದ ನಿದ್ರೆಯಿಲ್ಲದಿದ್ದರೆ ಕಾಡಲಿವೆ ಗಂಭೀರ ಆರೋಗ್ಯ ಸಮಸ್ಯೆಗಳು!

By kannadanewsnow5719/03/2026 8:44 AM KARNATAKA 1 Min Read

ಮನುಷ್ಯನ ಜೀವನದಲ್ಲಿ ಆಹಾರ ಮತ್ತು ನೀರು ಎಷ್ಟು ಮುಖ್ಯವೋ, ಅಷ್ಟೇ ಪ್ರಾಮುಖ್ಯತೆಯನ್ನು ನಿದ್ರೆಯೂ ಹೊಂದಿದೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ, ರಾತ್ರಿಯಿಡೀ…

ALERT : ಸಾರ್ವಜನಿಕರೇ ಗಮನಿಸಿ : ಗುಡುಗು, ಸಿಡಿಲಿನಿಂದ ಪಾರಾಗಲು ತಪ್ಪದೇ ಈ ಸಲಹೆಗಳನ್ನು ಪಾಲಿಸಿ !

19/03/2026 8:06 AM

ALERT : ಬಿಗಿಯಾದ `ಜೀನ್ಸ್ ಪ್ಯಾಂಟ್’ ಧರಿಸುವ ಪುರುಷರೇ ಎಚ್ಚರ : ಇದು ಬಂಜೆತನಕ್ಕೆ ಕಾರಣವಾಗಬಹುದು !

19/03/2026 8:00 AM

ALERT : `ಸಾಕ್ಸ್’ ಇಲ್ಲದೆ ಶೂ ಹಾಕಿಕೊಂಡರೆ ಈ ಗಂಭೀರ ಸಮಸ್ಯೆಗಳು ಕಾಡಬಹುದು ಎಚ್ಚರ !

19/03/2026 8:00 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.