ನವದೆಹಲಿ : ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ಇದೀಗ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಲಿದೆ. ಜನಸಾಮಾನ್ಯರ ಬದುಕು ಮತ್ತಷ್ಟು ದುಬಾರಿಯಾಗಲಿದೆ. ವಿದೇಶಿ ವಿನಿಮಯ ಕೊರತೆಯಿಂದ ಹಣದುಬ್ಬರ ಸಮಸ್ಯೆಗಳು ತಲೆದೋರಿದೆ. ಇದರ ಬೆನ್ನಲ್ಲೇ ಹಲವು ಕಾರ್ಮಿಕ ಸಂಘಟನೆಗಳು ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಇಂದು ಗಿಗ್ ಕಾರ್ಮಿಕರು ಮುಷ್ಕರ ನಡೆಸುತ್ತಿದ್ದಾರೆ.
ಗಿಗ್ ಕಾರ್ಮಿಕರು ಇಂದು ಐದು ಗಂಟೆಗಳ ಕಾಲ ಮುಷ್ಕರ ನಡೆಸುತ್ತಿದ್ದಾರೆ. ಮಧ್ಯಾಹ್ನ 12:00 ರಿಂದ ಸಂಜೆ 5:00 ರವರೆಗೆ, ಗಿಗ್ ಕಾರ್ಮಿಕರು ತಮ್ಮ ಅಪ್ಲಿಕೇಶನ್‌ಗಳನ್ನು ಆಫ್‌ಲೈನ್‌ನಲ್ಲಿ ಇಡಲಿದ್ದಾರೆ. ಈ ಮೂಲಕ ಗ್ರಾಹಕರು ಆರ್ಡರ್ ಮಾಡಲು, ಡೆಲಿವರಿ ಸಾಧ್ಯವಾಗುವುದಿಲ್ಲ.
ಸ್ವಿಗ್ಗಿ, ಜೊಮಾಟೊ, ಬ್ಲಿಂಕಿಟ್ , ಜೆಪ್ಟೊದಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಡೆಲಿವರಿ ಮಾಡುವ ಎಜೆಂಟ್‌ಗಳು ಮುಷ್ಕರದ ವೇಳೆ ಕಾರ್ಯನಿರ್ವಹಿಸುವುದಿಲ್ಲ. ಎಲ್ಲಾ ಆನ್‌ಲೈನ್ ಡೆಲಿವರಿ ಎಜೆಂಟ್‌ಗಳು ಮುಷ್ಕರ ನಡೆಸಲಿದ್ದಾರೆ. ಹೀಗಾಗಿ ಮುಷ್ಕರಿಂದ ಆನ್‌ಲೈನ್ ಡೆಲಿವರಿ ಸೇವೆಗಳು ಸಂಪೂರ್ಣ ಅಸ್ತವ್ಯಸ್ತವಾಗಲಿದೆ.
ಗಿಗ್ ಮತ್ತು ಪ್ಲಾಟ್‌ಫಾರ್ಮ್ ಸೇವಾ ಕಾರ್ಮಿಕರ ಸಂಘ (GIPSWU) ಮುಷ್ಕರ ಘೋಷಣೆ ಮಾಡಿದೆ. ಮುಷ್ಕರದ ವೇಳೆ ಗಿಗ್ ಕಾರ್ಮಿಕರು ತಮ್ಮ ಅಪ್ಲಿಕೇಶನ್ ಆಫ್ ಲೈನ್ ಮೂಡ್ ನಲ್ಲಿ ಇರಿಸಲಿದ್ದಾರೆ. ಇದರಿಂದ ಗ್ರಾಹಕರು ಬುಕ್ ಮಾಡಿದರೂ ಯಾವುದೇ ಆರ್ಡರ್ ಡೆಲಿವರಿ ಆಗುವುದಿಲ್ಲ. ಇದು ದೇಶಾದ್ಯಂತ ಹಮ್ಮಿಕೊಂಡಿರುವ ಮುಷ್ಕರವಾಗಿದ್ದು, ತೀವ್ರ ಕೋಲಾಹಲ ಸೃಷ್ಟಿಸುವ ಸಾಧ್ಯತೆ ಇದೆ.








