ತುಮಕೂರು : ತುಮಕೂರಿನಲ್ಲಿ ಭೀಕರವಾದ ಕೊಲೆಯಾಗಿದ್ದು, ತೋಟದ ಮನೆಯಲ್ಲಿ ಮಹಿಳೆಯ ಕತ್ತು ಸೀಳಿ ಭೀಕರ ಕೊಲೆ ಮಾಡಲಾಗಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹೆಂಡಸಗೆರೆ ಗ್ರಾಮದಲ್ಲಿ ಮಹಿಳೆಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಮಂಜುಳಾ ಕೊಲೆಯಾದ ಮಹಿಳೆ ಎಂದು ತಿಳಿದುಬಂದಿದೆ.
ರಾತ್ರಿ ಮಂಜುಳಾ ಒಂಟಿಯಾಗಿ ಮಲಗಿದ್ದಾಗ ದುಷ್ಕರ್ಮಿಗಳು ಮನೆಗೆ ನುಗ್ಗಿ ಮಂಜುಳಾ ಕತ್ತು ಸೀಳಿ, ಭೀಕರ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಮಂಜುಳಾ ಪತಿ ನಿಧನರಾಗಿದ್ದು ನಂತರ ತೋಟದ ಮನೆಯಲ್ಲಿ ಮಂಜುಳಾ ಮಗನ ಜೊತೆ ವಾಸ ಮಾಡುತ್ತಿದ್ದರು. ಇತ್ತೀಚಿಗೆ ಅಷ್ಟೆ ಮಗನ ಮದುವೆ ಕೂಡ ಮಾಡಿದ್ದರು.
ಮಗ ಪತ್ನಿಮನೆಗೆ ತೆರಳಿದ ವೇಳೆ ಮಂಜುಳಾ ಬರ್ಬರ ಕೊಲೆಯಾಗಿದೆ. ಬೆಳಿಗ್ಗೆ ಮೈದುನ ತೋಟದ ಮನೆಯ ಬಳಿ ತೆರಳಿದಾಗ ಕೊಲೆ ಆಗಿರುವ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಮೈದುನ ಘಟನೆಯ ಬಗ್ಗೆ ಸಿಎಸ್ ಪುರ ಠಾಣೆಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಸಿಎಸ್ ಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.








