ಬೆಂಗಳೂರು : ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಜೋರಾಗಿದ್ದು, ಇದರ ನಡುವೆ ದಲಿತ ಸಿಎಂ ಕೂಗು ಕೇಳಿ ಬರುತ್ತಿದೆ ಇನ್ನು ನಾಯಕತ್ವ ವಿಚಾರವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿ, ಎರಡೂವರೆ ವರ್ಷ ಅಂತ ಏನಿಲ್ಲ, ನನ್ನ ವೈಯಕ್ತಿಕ ಏನಿಲ್ಲ, ಪಕ್ಷದ ತೀರ್ಮಾನ. ನಾನು ಸಿಎಂ ಎಲ್ಲರೂ ಸೇರಿ ಸರ್ಕಾರವನ್ನು ತಂದಿದ್ದೇವೆ ಎಂದರು.
ಕೆಪಿಸಿಸಿ ಕಚೇರಿಯಲ್ಲಿಂದು ಮಾತನಾಡಿದ ಅವರು, ದೆಹಲಿಗೆ ಹೋಗೋದು ನನಗೆ ಗೊತ್ತಿಲ್ಲ. ನ.28ರಂದು ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಾರ್ಯಕ್ರಮ ಇದೆ. ನ.29 ಇನ್ನೂ ದೂರ ಇದೆ. ನಾನು ಒಕ್ಕಲಿಗ ನಾಯಕ ಅಂತ ಹೇಳಿಲ್ಲ. ನಾನು ಕಾಂಗ್ರೆಸ್ ನಾಯಕ. ನಾನು ಒಕ್ಕಲಿಗನಾಗಿ ಹುಟ್ಟಿದ್ದೇನೆ. ನಾವು ಬಿಟ್ಟರೂ ಜಾತಿ, ಧರ್ಮ ಬಿಡಲ್ಲ. ಅಶೋಕಣ್ಣ ಚಕ್ರವರ್ತಿ, ಸಾಮ್ರಾಟ್ ಎಂದು ಬೇಕಾದರೆ ಬೋರ್ಡ್ ಹಾಕಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ನಾನು ಸತೀಶ್ ಒಳ್ಳೆ ಸ್ನೇಹಿತರು, ನಮ್ಮಿಬ್ಬರ ಬಾಂಧವ್ಯ ಚೆನ್ನಾಗಿದೆ. ಇಬ್ಬರೂ ದುಡಿಯುತ್ತಿದ್ದೇವೆ. ಪಕ್ಷಕ್ಕೆ ಅವರು ಆಸ್ತಿ. ರಾಹುಲ್ ನನಗೆ ಏನು ಹೇಳಿದ್ದಾರೆ ಎಂಬುದನ್ನು ಮಾಧ್ಯಮಗಳ ಮುಂದೆ ಹೇಳೋಕಾಗಲ್ಲ. ನಾನು ಮಾಧ್ಯಮಗಳ ಮುಂದೆ ಏನನ್ನೂ ಚರ್ಚೆ ಮಾಡಲ್ಲ. ಯಾವುದೇ ರಾಜಕೀಯ ಚರ್ಚೆ ಮಾಡಲ್ಲ. ನನ್ನದು ಯಾವ ಬಣವೂ ಇಲ್ಲ, ಕಾಂಗ್ರೆಸ್ ಬಣ. ನನ್ನ ಸಂಖ್ಯೆ 140 ಎಂದು ಹೇಳಿದರು.








