ಚಿಕ್ಕಮಗಳೂರು : ಪ್ರಸಿದ್ಧ ದೇವಿರಮ್ಮ ಬೆಟ್ಟದಲ್ಲಿ ಮಹಿಳೆಯ ಅಸ್ತಿ ಪಂಜರ ಪತ್ತೆಯಾಗಿದೆ. ದೇವಿರಮ್ಮ ಬೆಟ್ಟ ದಾರಿ ಸ್ವಚ್ಛ ವೇಳೇ ಈ ಒಂದು ಅಸ್ತಿ ಪಂಜರ ಪತ್ತೆಯಾಗಿದೆ. ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಇರುವ ದೇವಿರಮ್ಮ ಬೆಟ್ಟದಲ್ಲಿ ಮಹಿಳೆಯ ಅಸ್ತಿ ಪಂಜರ ಪತ್ತೆಯಾಗಿದ್ದು, ವರ್ಷದಲ್ಲಿ ಒಮ್ಮೆ ಮಾತ್ರ ಗ್ರಾಮಸ್ಥರು ಮತ್ತು ಭಕ್ತರು ಈ ಒಂದು ದೇವಿರಮ್ಮ ಬೆಟ್ಟಕ್ಕೆ ತೆರಳುತ್ತಾರೆ.
ದೇವಿರಮ್ಮ ದೇವಾಲಯಕ್ಕೆ ತೆರಳುವ ಮಾರ್ಗದಲ್ಲಿ ಇದೀಗ ಮಹಿಳೆಯ ಅಸ್ತಿ ಪಂಜರ ಪತ್ತೆಯಾಗಿದೆ. ದೀಪಾವಳಿ ಹಬ್ಬದ ದಿನ ಬೆಟ್ಟ ಏರಿ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಪ್ರತಿ ವರ್ಷ ಬೆಟ್ಟಕ್ಕೆ ತೆರಳಿ ಲಕ್ಷಾಂತರ ಭಕ್ತರು ದರ್ಶನ ಪಡೆಯುತ್ತಾರೆ. ಈ ಕುರಿತು ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಯುಡಿಆರ್ ದಾಖಲಾಗಿದೆ. ಪೊಲೀಸರು ಅಸ್ತಿಪಂಜರ ಪತ್ತೆ ಕುರಿತು ತನಿಖೆ ನಡೆಸುತ್ತಿದ್ದಾರೆ.