Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಜಮಿನ್ ನೆತನ್ಯಾಹು ಸಾವು ಕೇವಲ ವದಂತಿ: ವೈರಲ್ ಆದ ಫೋಟೋಗಳು ‘AI ಸೃಷ್ಟಿ’, ಸುಳ್ಳು ಸುದ್ದಿ ನಂಬಬೇಡಿ: ಮೂಲಗಳು

14/03/2026 9:36 AM

ಗೃಹಿಣಿಯರೇ ಗಮನಿಸಿ: ಸಿಲಿಂಡರ್ ಬೇಗ ಖಾಲಿಯಾಗ್ತಿದೆಯೇ? ಗ್ಯಾಸ್ ಉಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!

14/03/2026 9:34 AM

BIG NEWS : ಬೆಂಗಳೂರಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿದ್ದ 80 ಕೋಟಿ ಮೌಲ್ಯದ ಸರಕಾರಿ ಜಮೀನು ಮರು ವಶ

14/03/2026 9:26 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ ಈವರೆಗೆ 3 ಕೋಟಿ ಜನಸಂಖ್ಯೆಯ ಸಮೀಕ್ಷೆ ಪೂರ್ಣ : CM ಸಿದ್ದರಾಮಯ್ಯ ಮಾಹಿತಿ
KARNATAKA

ರಾಜ್ಯದಲ್ಲಿ ಈವರೆಗೆ 3 ಕೋಟಿ ಜನಸಂಖ್ಯೆಯ ಸಮೀಕ್ಷೆ ಪೂರ್ಣ : CM ಸಿದ್ದರಾಮಯ್ಯ ಮಾಹಿತಿ

By kannadanewsnow5704/10/2025 6:15 AM

ಮೈಸೂರು : ರಾಜ್ಯದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ. ಈಗಾಗಲೇ ಸುಮಾರು 80 ಲಕ್ಷ ಮನೆಗಳಿಂದ 3 ಕೋಟಿ ಜನಸಂಖ್ಯೆಯ ಸಮೀಕ್ಷೆ ಪೂರ್ಣಗೊಂಡಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸುಮಾರು 80 ಲಕ್ಷ ಮನೆಗಳಿಂದ 3 ಕೋಟಿ ಜನಸಂಖ್ಯೆಯ ಸಮೀಕ್ಷೆ ಪೂರ್ಣಗೊಂಡಿದ್ದು, ಅಕ್ಟೋಬರ್ 7ರೊಳಗೆ ಸಮೀಕ್ಷೆ ಕಾರ್ಯ ಮುಗಿಯುವ ಭರವಸೆಯಿದೆ. 1.80 ಕೋಟಿ ಕುಟುಂಬಗಳ ಸಮೀಕ್ಷೆ ನಡೆಯಬೇಕಿದೆ. ಸಮೀಕ್ಷೆಯ ಪ್ರಗತಿಯನ್ನು ಗಮನಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಮತಾಂತರ ಹಾಗೂ ಜಾತಿಗಳನ್ನು ಒಡೆಯುವ ದೃಷ್ಠಿಯಿಂದ ರಾಜ್ಯ ಸರ್ಕಾರ ಸಮೀಕ್ಷೆ ಮಾಡುತ್ತಿದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರ ಹೇಳಿಕೆ ಅವರ ಅಜ್ಞಾನಕ್ಕೆ ಹಿಡಿದ ಕನ್ನಡಿಯಾಗಿದೆ. ಪ್ರಹ್ಲಾದ್ ಜೋಷಿಯವರು ಕೇಂದ್ರ ಸಚಿವರಾಗಿದ್ದು, ಕೇಂದ್ರ ನಡೆಸಲಿರುವ ಜಾತಿಸಮೀಕ್ಷೆಯ ಉದ್ದೇಶವನ್ನು ತಿಳಿಸಬೇಕು. ಕೇಂದ್ರ ಸರ್ಕಾರಕ್ಕೆ ಜಾತಿ, ಧರ್ಮ ಒಡೆಯುವ ಉದ್ದೇಶವಿದೆಯೇ? ಕರ್ನಾಟಕದಲ್ಲಿ ಆರ್ಥಿಕ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದ್ದು, ಜನರ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆಯುವ ಉದ್ದೇಶವಿದೆ ಎಂದರು.

ಕಾಂತರಾಜು ವರದಿಯಲ್ಲಿ ಬ್ರಾಹ್ಮಣ ಕ್ರಿಶ್ಚಿಯನ್ ಎಂಬಿತ್ಯಾದಿ ಜಾತಿಗಳನ್ನು ನಮೂದಿಸಲಾಗಿತ್ತು. ಜನರು ತಮ್ಮ ಜಾತಿಯನ್ನು ಸ್ವಯಂಪ್ರೇರಿತರಾಗಿ ನಮೂದಿಸಿದರೆ ಅದಕ್ಕೆ ಸರ್ಕಾರ ಜವಾಬ್ದಾರವಾಗುವುದಿಲ್ಲ. ಆದರೆ ಆಯೋಗ ಈ ಜಾತಿಗಳನ್ನು ಪಟ್ಟಿಯಿಂದ ತೆಗೆದುಹಾಕಿದೆ. ಆದ್ದರಿಂದ ಜನರು ಸ್ವಯಂಪ್ರೇರಿತವಾಗಿ ಹೇಳುವ ಜಾತಿಯ ಮಾಹಿತಿಯನ್ನು ಆಯೋಗ ಪಡೆಯಲಿದೆ. ಇದರಲ್ಲಿ ಜಾತಿ ಒಡೆಯುವ ಪ್ರಶ್ನೆಯಿಲ್ಲ. ಜನರನ್ನು ರಾಜಕೀಯ ಉದ್ದೇಶದಿಂದ ದಾರಿತಪ್ಪಿಸುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ. ಈಗಾಗಲೇ ಸುಮಾರು 80 ಲಕ್ಷ ಮನೆಗಳಿಂದ 3 ಕೋಟಿ ಜನಸಂಖ್ಯೆಯ ಸಮೀಕ್ಷೆ ಪೂರ್ಣಗೊಂಡಿದ್ದು, ಅಕ್ಟೋಬರ್ 7ರೊಳಗೆ ಸಮೀಕ್ಷೆ ಕಾರ್ಯ ಮುಗಿಯುವ ಭರವಸೆಯಿದೆ. 1.80 ಕೋಟಿ ಕುಟುಂಬಗಳ ಸಮೀಕ್ಷೆ ನಡೆಯಬೇಕಿದೆ. ಸಮೀಕ್ಷೆಯ ಪ್ರಗತಿಯನ್ನು ಗಮನಿಸಿ ಮುಂದಿನ ನಿರ್ಧಾರ… pic.twitter.com/ZZ1wYAkvI1

— Siddaramaiah (@siddaramaiah) October 3, 2025

Survey of 3 crore population completed in the state so far: CM Siddaramaiah
Share. Facebook Twitter LinkedIn WhatsApp Email

Related Posts

ಗೃಹಿಣಿಯರೇ ಗಮನಿಸಿ: ಸಿಲಿಂಡರ್ ಬೇಗ ಖಾಲಿಯಾಗ್ತಿದೆಯೇ? ಗ್ಯಾಸ್ ಉಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!

14/03/2026 9:34 AM2 Mins Read

BIG NEWS : ಬೆಂಗಳೂರಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿದ್ದ 80 ಕೋಟಿ ಮೌಲ್ಯದ ಸರಕಾರಿ ಜಮೀನು ಮರು ವಶ

14/03/2026 9:26 AM1 Min Read

BREAKING : ಬೆಂಗಳೂರಲ್ಲಿ ಭೀಕರ ಮರ್ಡರ್ : ವೈರ್ ನಿಂದ ಕುತ್ತಿಗೆ ಬಿಗಿದು, ಪ್ರಿಯತಮೆಯನ್ನ ಹತ್ಯೆಗೈದ ಪ್ರಿಯತಮ ಅರೆಸ್ಟ್!

14/03/2026 9:17 AM1 Min Read
Recent News

ಬೆಂಜಮಿನ್ ನೆತನ್ಯಾಹು ಸಾವು ಕೇವಲ ವದಂತಿ: ವೈರಲ್ ಆದ ಫೋಟೋಗಳು ‘AI ಸೃಷ್ಟಿ’, ಸುಳ್ಳು ಸುದ್ದಿ ನಂಬಬೇಡಿ: ಮೂಲಗಳು

14/03/2026 9:36 AM

ಗೃಹಿಣಿಯರೇ ಗಮನಿಸಿ: ಸಿಲಿಂಡರ್ ಬೇಗ ಖಾಲಿಯಾಗ್ತಿದೆಯೇ? ಗ್ಯಾಸ್ ಉಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!

14/03/2026 9:34 AM

BIG NEWS : ಬೆಂಗಳೂರಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿದ್ದ 80 ಕೋಟಿ ಮೌಲ್ಯದ ಸರಕಾರಿ ಜಮೀನು ಮರು ವಶ

14/03/2026 9:26 AM

Alert: ಬರುತ್ತಿದೆ ‘ಸೂಪರ್ ಎಲ್ ನಿನೋ’: ಈ ಬಾರಿ ಭಾರತಕ್ಕೆ ಎದುರಾಗಲಿದೆ ಹಿಂದೆಂದೂ ಕಾಣದ ಭೀಕರ ಬೇಸಿಗೆ!

14/03/2026 9:19 AM
State News
KARNATAKA

ಗೃಹಿಣಿಯರೇ ಗಮನಿಸಿ: ಸಿಲಿಂಡರ್ ಬೇಗ ಖಾಲಿಯಾಗ್ತಿದೆಯೇ? ಗ್ಯಾಸ್ ಉಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!

By kannadanewsnow0514/03/2026 9:34 AM KARNATAKA 2 Mins Read

ಬೆಂಗಳೂರು : ದಿನದಿಂದ ದಿನಕ್ಕೆ ಏರುತ್ತಿರುವ ಎಲ್‌ಪಿಜಿ ದರದಿಂದಾಗಿ ಸಾಮಾನ್ಯ ಜನರ ಬಜೆಟ್ ಏರುಪೇರಾಗುತ್ತಿದೆ. ಆದರೆ, ಅಡುಗೆ ಮಾಡುವಾಗ ನಾವು…

BIG NEWS : ಬೆಂಗಳೂರಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿದ್ದ 80 ಕೋಟಿ ಮೌಲ್ಯದ ಸರಕಾರಿ ಜಮೀನು ಮರು ವಶ

14/03/2026 9:26 AM

BREAKING : ಬೆಂಗಳೂರಲ್ಲಿ ಭೀಕರ ಮರ್ಡರ್ : ವೈರ್ ನಿಂದ ಕುತ್ತಿಗೆ ಬಿಗಿದು, ಪ್ರಿಯತಮೆಯನ್ನ ಹತ್ಯೆಗೈದ ಪ್ರಿಯತಮ ಅರೆಸ್ಟ್!

14/03/2026 9:17 AM

ಗ್ಯಾಸ್ ಸಮಸ್ಯೆ ಇಲ್ಲ ಅಂದಮೇಲೆ ಎಸ್ಮಾ ಏಕೆ ಜಾರಿ ಮಾಡಿದರು? : ಕೇಂದ್ರದ ವಿರುದ್ಧ ಸಚಿವ ಪ್ರಿಯಾಂಕ ಖರ್ಗೆ ವಾಗ್ದಾಳಿ!

14/03/2026 9:10 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.