ಕಲಬುರ್ಗಿ : ಕಲ್ಬುರ್ಗಿ ವಿಜಯಪುರ, ಸೇರಿದಂತೆ ರಾಜ್ಯದ ಹಲವೆಡೆ ಭಾರಿ ಮಳೆ ಸುರಿಯುತ್ತಿದ್ದು, ಈ ಹಿನ್ನಲೆಯಲ್ಲಿ ಕಲಬುರ್ಗಿಯಲ್ಲಿ ನದಿ ದಡದಲ್ಲಿರುವ ಗ್ರಾಮಗಳು ಸಂಪೂರ್ಣವಾಗಿ ಜಲಾವೃತವಾಗಿದ್ದು, ಇದೀಗ ಕಲ್ಬುರ್ಗಿಯಲ್ಲಿ ಪ್ರವಾಹದ ನೀರು ಕೊಟ್ಟಿಗೆಗೆ ನುಗ್ಗಿ ಸುಮಾರು 42ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿರುವ ಘೋರ ದುರಂತ ಜಿಲ್ಲೆಯ ಚಿಂಚೋಳಿ ತಾಲೂಕಿನ ಜಟ್ಟೂರ್ ಗ್ರಾಮದಲ್ಲಿ ನಡೆದಿದೆ.
ಹೌದು ಹಳ್ಳದ ನೀರು ಕೊಟ್ಟಿಗೆಗೆ ನುಗ್ಗಿ ಸುಮಾರು 42ಕ್ಕೂ ಹೆಚ್ಚು ಜಾನುವಾರುಗಳು ಸಾವನಪ್ಪಿರುವ ಘಟನೆ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ. ಭಾರಿ ಮಳೆಯಿಂದಾಗಿ ಹಳ್ಳದ ನೀರು ಕೊಟ್ಟಿಗೆಗೆ ನೀರಿಗೆ ನುಗ್ಗಿದೆ.
ಚಿಂಚೋಳಿ ತಾಲೂಕಿನ ಜಟ್ಟೂರ್ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಕೊಟ್ಟಿಗೆ ಭಾರಿ ಪ್ರಮಾಣದಲ್ಲಿ ನೀರು ನುಗ್ಗಿ ಸುಮಾರು 42ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿವೆ. ಏಕಾಏಕಿ ಪ್ರವಾಹದ ರೀತಿಯಲ್ಲಿ ನೀರು ನುಗ್ಗಿದ್ದರಿಂದ ಜಾನುವಾರುಗಳನ್ನ ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ. 42ಕ್ಕೂ ಹೆಚ್ಚು ಹಸುಗಳು ಎತ್ತುಗಳು ಸಾವನ್ನಪ್ಪಿರುವ ಹಿನ್ನೆಲೆ ರೈತ ಕಂಗಾಲಾಗಿದ್ದಾನೆ.