ಬೆಂಗಳೂರು : ನಿನ್ನೆ ಬೆಂಗಳೂರಿನಲ್ಲಿ 11 ಬಾರಿ ಚಾಕು ಇರಿದು ವಿವಾಹಿತ ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಹಂತಕ ಲೋಹಿತಾಶ್ವ ಅಲಿಯಾಸ್ ಲೊಕೇಶನನ್ನು ಅರೆಸ್ಟ್ ಮಾಡಿದ್ದಾರೆ. ನಿನ್ನೆ ಬೆಂಗಳೂರಿನ ಸುಂಕದಕಟ್ಟೆಯಲ್ಲಿ ವಿವಾಹಿತ ಮಹಿಳೆ ರೇಖಾಳನ್ನು ಆರೋಪಿ ಲೋಹಿತಾಶ್ವ 11 ಬಾರಿ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದ.
ತುಮಕೂರು ಜಿಲ್ಲೆಯ ಶಿರಾ ಮೂಲದ ರೇಖಾ (35) ಎನ್ನುವ ವಿವಾಹಿತ ಮಹಿಳೆಯನ್ನು ಲೋಹಿತಾಶ್ವ ಕೊಲೆ ಮಾಡಿದ್ದಾನೆ. ಕೊಲೆಯಾದ ರೇಖಾಳಿಗೆ 12 ವರ್ಷದ ಮಗಳು ಇದ್ದಾಳೆ. ಇನ್ನೂ ಲೋಹಿತಾಶ್ವನಿಗೂ ಕೂಡ ಮದುವೆಯಾಗಿ ಪತ್ನಿಯಿಂದ ಆತ ವಿಚ್ಛೇದನ ಪಡೆದುಕೊಂಡಿದ್ದ. ಬಳಿಕ ರೇಖಾ ಜತೆಗೆ ಆರೋಪಿ ಲೋಹಿತಾಶ್ವ ಮದುವೆಯಾಗಿದ್ದ. ಪೊಲೀಸರ ವಿಚಾರಣೆ ವೇಳೆ ಆಕೆಯ ಮೇಲೆ ಅನುಮಾನಪಟ್ಟು ಕೊಲೆಗೈದಿದ್ದಾಗಿ ಮಾಹಿತಿ ನೀಡಿದ್ದಾನೆ.
ರೇಖಾ ಮದುವೆ ಬಳಿಕ ಶಿರಾದಿಂದ ಬೆಂಗಳೂರಿಗೆ ಕರೆಸಿಕೊಂಡಿದ್ದರು. ಆಕೆ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿಯೇ ಲೋಹಿತಾಶ್ವನಿಗೆ ಡ್ರೈವರ್ ಕೆಲಸ ಕೊಡಿಸಿದ್ದಳು. ಎರಡನೇ ಮದುವೆ ಆಗಿದ್ದರು ಕೂಡ ಇಬ್ಬರು ಒಂದೇ ಮನೆಯಲ್ಲಿ ವಾಸವಿರಲಿಲ್ಲ ಮಗಳನ್ನು ಬೇರೆ ಕಡೆ ಕಳುಹಿಸುವಂತೆ ಲೋಹಿತಾಶ್ವ ರೇಖಾಗೆ ಹೇಳಿದ್ದ ಆದರೆ ರೇಖಾ ನಾನು ಮಗಳನ್ನು ಬೇರೆಡೆ ಕಳುಹಿಸಲು ಸಾಧ್ಯವಿಲ್ಲ. L ಎಂದಿದ್ದಾಳೆ.
ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿದೆ ಆಗಾಗ ರೇಖಾಳ ಮನೆಗೆ ಬಂದು ಹೋಗುತ್ತಿದ್ದ. ನಿನ್ನೆ ಸುಂಕದಕಟ್ಟೆ ಬಸ್ ನಿಲ್ದಾಣದಲ್ಲಿ 11 ಬಾರಿ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದಾನೆ . ಮಗಳ ಎದುರಿನಲ್ಲಿಯೇ ಚಾಕು ಇರಿದು ಕೊಲೆ ಮಾಡಿದ್ದಾನೆ. ನೀನು ಮೋಸ ಮಾಡುತ್ತೀಯ ಎಂದು ಕೂಗಾಡಿ ಚಾಕು ಇರಿದಿದ್ದಾನೆ. ಇದೀಗ ಪೊಲೀಸರು ಹಂತನನ್ನು ಅರೆಸ್ಟ್ ಮಾಡಿದ್ದಾರೆ. ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.