ಬೆಂಗಳೂರು : ರಾಜ್ಯದಲ್ಲೊಂದು ಮನಕಲಕುವ ಘಟನೆಯೊಂದು ನಡೆದಿದ್ದು ಬೆಂಗಳೂರಲ್ಲಿ ದಂಪತಿಗಳ ನಿರ್ಲಕ್ಷಕ್ಕೆ ಮೂರು ನವಜಾತ ಶಿಶುಗಳು ಬಲಿಯಾಗಿವೆ. ಹೌದು ಬನ್ನೇರುಘಟ್ಟ ಗೊಲ್ಲಹಳ್ಳಿಯಲ್ಲಿ ಈ ಒಂದು ಮನಕಲಕುವ ಘಟನೆ ನಡೆದಿದೆ. ಸೂಕ್ತ ಸಪಾಸಣೆ ಮತ್ತು ಪೋಷಣೆ ಇಲ್ಲದೆ ಮೂವರು ನವಜಾತ ಶಿಶುಗಳು ಇದೀಗ ಸಾವನ್ನಪ್ಪಿವೆ.
ಮಂಜುಳಾ ಮತ್ತು ಆನಂದ ದಂಪತಿಗಳ ಮೂವರು ನವಜಾತಶಿಗಳು ಇದೀಗ ಬಲಿಯಾಗಿವೆ. ಮೊದಲು ಹೊಟ್ಟೆ ನೋವು ಕಾಣಿಸಿಕೊಂಡಾಗ ಇವರು ಜಿಗಣಿ ಆಸ್ಪತ್ರೆಗೆ ದಾಖಲಾಗಿದ್ದರು. ಅದಾದ ನಂತರ ಜಿಗಣಿ ಬಳಿಕ ಆನೇಕಲ್ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೊಟ್ಟೆಯಲ್ಲಿ ಎರಡು ಶಿಶುಗಳು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.
ಎರಡು ಶಿಶುಗಳನ್ನು ಹೊರ ತೆಗೆದು ವೈದ್ಯರು ಮಹಿಳೆಗೆ ಚಿಕಿತ್ಸೆ ನೀಡಿದ್ದಾರೆ. ಸದ್ಯ ತಾಯಿ ಮಂಜುಳಾ ಆರೋಗ್ಯವಾಗಿದ್ದಾರೆ. ಆನಂದ್ ಮತ್ತು ಮಂಜುಳಾ ದಂಪತಿ ಪ್ರೀತಿಸಿ ಮದುವೆಯಾಗಿದ್ದರು. ಏಪ್ರಿಲ್ ತಿಂಗಳಿನಲ್ಲಿ ದಂಪತಿಗಳು ತಾಯಿ ಕಾರ್ಡ್ ಮಾಡಿಸಿದ್ದಾರೆ. ಅಣ್ಣನ ಜೊತೆ ಗಲಾಟೆ ಮಾಡಿದ ಬಳಿಕ ಆನಂದ್ ದಂಪತಿ ಮನೆ ಬಿಟ್ಟಿದ್ದಾರೆ. ಇತ್ತ ಮಂಜುಳಾ ಪೋಷಕರಿಂದಲೂ ಕೂಡ ಇವರಿಬ್ಬರೂ ನಿರ್ಲಕ್ಷಕ್ಕೆ ಒಳಗಾಗಿದ್ದಾರೆ.








