ಬೆಂಗಳೂರು : ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಡೆಡ್ ಲೈನ್ ವಿಚಾರವಾಗಿ ಪ್ರತಿನಿತ್ಯ ಜಿಬಿಎ ನವರು ದಿನಕ್ಕೆ 1000 ಗುಂಡಿಗಳನ್ನು ಮುಚ್ಚುತ್ತಿದ್ದಾರೆ. ಮಳೆಗಾಲ ಹಿನ್ನೆಲೆಯಲ್ಲಿ ಗುಂಡಿ ಮುಚ್ಚುವ ಕಾರ್ಯವಿಧಾನ ಆಗುತ್ತಿದೆ. ಗ್ರೇಟರ್ ಬೆಂಗಳೂರು ಅಥಾರಿಟಿಯವರು ಗುಂಡಿ ಮುಚ್ಚುತ್ತಿದ್ದಾರೆ.
ಕೇವಲ ಬೆಂಗಳೂರಿನಲ್ಲಿ ಮಾತ್ರ ರಸ್ತೆಗಳು ಗುಂಡಿಗಳಿವೆಯ? ಎಲ್ಲಾ ರಾಜ್ಯಗಳಲ್ಲೂ ರಸ್ತೆಗಳಲ್ಲಿ ಗುಂಡಿಗಳ ಸಮಸ್ಯೆ ಇದೆ. ದೆಹಲಿಯಲ್ಲಿ ಪ್ರಧಾನ ಮಂತ್ರಿ ನಿವಾಸದ ರಸ್ತೆ ನೋಡಿದ್ದೀರಾ? ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಸರಿಯಾಗಿ ರಸ್ತೆ ಮಾಡಿದ್ರಾ? ಚುನಾವಣೆ ಬರುತ್ತಿದೆ ಅಂತ ಹೇಗೆ ಮಾಡ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು








