ತುಮಕೂರು : ರಾಜ್ಯದಲ್ಲಿ ಸುಳ್ಳುಸುದ್ದಿ ಪ್ರಕಟಿಸುವ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಲು ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡನೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಫೇಕ್ ನ್ಯೂಸ್ ಹಾವಳಿ ತಡೆಗಟ್ಟಲು ವಿಶೇಷ ಕಾಯ್ದೆ ಜಾರಿ ಅಗತ್ಯವಾಗಿದೆ. ಪೇಯ್ಡ್ ನ್ಯೂಸ್ ಸಹ ಪತ್ರಿಕಾ ರಂಗದಲ್ಲಿ ತೂರಿಕೊಂಡಿದೆ. ದೊಡ್ಡ ದೊಡ್ಡ ಚಾನೆಲ್ ಗಳು, ಪತ್ರಿಕೆಗಳ ಒಡೆತನ ಕೈಗಾರಿಕೋದ್ಯಮಿಗಳ, ಬಂಡವಾಳ ಶಾಹಿಗಳ ಕೈಗಳಲ್ಲಿದ್ದು ಅವರ ಹಿತಾಸಕ್ತಿ ನಿಟ್ಟಿನಲ್ಲಿ ಕಾರ್ ನಿರ್ವಹಿಸುತ್ತಿವೆ.
ಸಾಮಾಜಿಕ ಕಳಕಳಿ ಗಿಂತ ಸ್ವಹಿತಾಸಕ್ತಿ ಹೆಚ್ಚಾಗಿದೆ. ಸುದ್ದಿ ಮಾಧ್ಯಮಗಳಲ್ಲಿ ಗ್ರಾಮೀಣ ವರದಿಗಳಿಗಿಂತ ನಗರಮುಖಿ ಸುದ್ದಿಗಳು ಹೆಚ್ಚಿರುತ್ತವೆ. ಹಾಗಾಗಿ ಸುಳ್ಳುಸುದ್ದಿ ಪ್ರಕಟಿಸುವ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಲು ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡನೆ ಮಾಡಲಾಗುವುದು ಎಂದು ಪರಮೇಶ್ವರ್ ಹೇಳಿಕೆ ನೀಡಿದರು