ಬೆಂಗಳೂರು : ನಟಿ ರಶ್ಮಿಕಾ ಮಂದಣ್ಣ ಈ ಹಿಂದೆ ಕನ್ನಡಿಗರನ್ನು ಕೆಣಕಿ ಹಲವು ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದರು. ಇದೀಗ ರಶ್ಮಿಕ ಮಂದಣ್ಣ ಮತ್ತೊಂದು ಹೇಳಿಕೆ ನೀಡಿದ್ದು, ಕೊಡವ ಸಮುದಾಯದಿಂದ ಫಿಲಂ ಇಂಡಸ್ಟ್ರಿಗೆ ಯಾರು ಬಂದಿಲ್ಲ. ಕೊಡವ ಸಮುದಾಯದ ಮೊದಲ ನಟಿ ನಾನು ಎಂದು ಸಂದರ್ಶನ ಒಂದರಲ್ಲಿ ನಟಿ ರಶ್ಮಿಕ ಮಂದಣ್ಣ ಹೀಗೆ ಹೇಳಿ ಮತ್ತೊಂದು ವಿವಾದ ಸೃಷ್ಟಿ ಮಾಡಿದ್ದಾರೆ.
ಹೌದು ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಕಂಟ್ರೋವರ್ಸಿ ಹೇಳಿಕೆ ನೀಡಿದ್ದು, ಕೊಡವ ಸಮುದಾಯದಿಂದ ಇದುವರೆಗೂ ಇಂಡಸ್ಟ್ರಿಗೆ ಯಾರು ಬಂದಿಲ್ಲ. ಕೊಡುವ ಸಮುದಾಯದ ಮೊದಲ ನಟಿ ನಾನೇ ಬರ್ಕದತ್ ನಡೆಸಿದ ಸಂದರ್ಶನದಲ್ಲಿ ನಟಿ ರಶ್ಮಿಕ ಮಂದಣ್ಣ ಈ ಹೇಳಿಕೆ ನೀಡಿದ್ದಾರೆ. ಇಂಡಸ್ಟ್ರಿಯಲ್ಲಿ ಈಗಾಗಲೇ ಕೊಡವ ಸಮುದಾಯದ ಹಲವಾರು ನಟಿಯರು ಇದ್ದಾರೆ. ನಟಿ ಪ್ರೇಮಾ, ನಿಧಿ ಸುಭಯ್ಯ, ಹರ್ಷಿಕಾ ಪೂಣಚ್ಚ, ಶುಭ್ರಾ ಅಯ್ಯಪ್ಪ ಸೇರಿದಂತೆ ಹಲವು ನಟಿಯರು ಈಗಾಗಲೇ ಕನ್ನಡ ಇಂಡಸ್ಟ್ರಿಯಲ್ಲಿ ಇದ್ದು, ಪ್ರೇಮಾ ಹಲವು ಭಾಷೆಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದಾರೆ.
ಇದೀಗ ನಟಿ ರಶ್ಮಿಕ ಮಂದಣ್ಣ ನಾನೇ ಕೊಡುವ ಸಮುದಾಯದ ಮೊದಲ ನಟಿ ಎಂದು ಹೇಳಿಕೆ ನೀಡುವ ಮೂಲಕ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ಸಂದರ್ಶನ ಬರ್ಖದತ್ ಸಂದರ್ಶನದಳ್ಳಿ ನಿಮಗೆ ಗೊತ್ತಾ ಕೂರ್ಗ ಸಮುದಾಯದಿಂದ ಇದುವರೆಗೂ ಯಾರೂ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿಲ್ಲ ನನ್ನ ಯೋಚನೆ ಪ್ರಕಾರ ನಾನೇ ಮೊದಲ ಬಾರಿಗೆ ಇಡೀ ಸಮುದಾಯದಿಂದಲೇ ಫಿಲಂ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದು ಎಂದು ಹೇಳಿಕೆ ನೀಡಿದ್ದಾರೆ.