ಬೆಳಗಾವಿ : ರಾಜ್ಯದಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಈಗಾಗಲೇ ಮಳೆಯಿಂದಾಗಿ ಹಲವು ಜಿಲ್ಲೆಗಳಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ಮಳೆಯಿಂದಾಗಿ ಹಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಮಹಾರಾಷ್ಟ್ರ ಮತ್ತು ಬೆಳಗಾವಿ ಜಿಲ್ಲೆಯ ಗಡಿ ಭಾಗದಲ್ಲಿರುವ ಅಂಬೋಲಿ ಫಾಲ್ಸ್ ಬಳಿ ಫಾಲ್ಸ್ ನೋಡುವಾಗ ಕಾಲು ಜಾರಿ 300 ಅಡಿ ಆಳಕ್ಕೆ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಹೌದು ಕಾಲು ಜಾರಿ 300 ಅಡಿ ಆಳದ ಕಣಿವೆಗೆ ಬಿದ್ದ ವ್ಯಕ್ತಿ ದುರ್ಮರಣ ಹೊಂದಿದ್ದಾರೆ. ಅಂಬೋಲಿ ಫಾಲ್ಸ್ ಬಳಿಯ ಕವಲಿದಾಸ್ ಪಾಯಿಂಟ್ ನಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ. ಮಹಾರಾಷ್ಟ್ರ ಮತ್ತು ಬೆಳಗಾವಿ ಗಡಿಯಲ್ಲಿರುವಂತಹ ಅಂಬೋಲಿ ಫಾಲ್ಸ್ ವೀಕ್ಷಣೆಗೆ ಎಂದು ತೆರಳಿದ್ದಾಗ, ಕೊಲ್ಹಾಪುರದ ನಿವಾಸಿ ಬಾಲಸೋ ಸಂಗರ್ (45) ಮೃತ ದುರ್ದೈವಿ ಎಂದು ತಿಳಿದುಬಂದಿದೆ. 300 ಅಡಿ ಆಳದಿಂದ ಪೊಲೀಸರು ಮತ್ತು ಸ್ಥಳೀಯರು ಶವವನ್ನು ಮೇಲಕ್ಕೆ ಎತ್ತಿದ್ದಾರೆ.