ಬೆಂಗಳೂರು: ನಗರದಲ್ಲಿ ಬೀದಿ ನಾಯಿಗಳ ಮಾರಣಹೋಮವೇ ನಡೆದಿದೆ. ಬೀದಿಯಲ್ಲೇ ರಕ್ತಕಾರಿ ರಾತ್ರೋರಾತ್ರಿ ನಾಯಿಗಳು ಪ್ರಾಣಬಿಟ್ಟಿರುವಂತ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೆಂಗಳೂರಿನ ಕೆ ಆರ್ ಪುರಂ ಬಳಿಯ ಭಟ್ಟರಹಳ್ಳಿಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಬೀದಿನಾಯಿಗಳು ರಾತ್ರೋ ರಾತ್ರಿ ರಕ್ತವಾಂದಿ ಮಾಡಿ ದಿಢೀರ್ ರಸ್ತೆಯಲ್ಲೇ ಸಾವನ್ನಪ್ಪಿದ್ದಾವೆ.
ಸುಮಾರು ಐದಾರು ನಾಯಿಗಳು ಈ ರೀತಿಯಾಗಿ ಸಾವನ್ನಪ್ಪಿದ್ದು, ಸ್ಥಳೀಯರು ಒಂದು ಬೀದಿನಾಯಿಯನ್ನು ರಕ್ಷಣೆ ಮಾಡಿದ್ದಾರೆ. ರಸ್ತೆಯಲ್ಲೇ ನರಳಿ ನರಳಿ ಐದು ನಾಯಿಗಳು ಪ್ರಾಣ ಬಿಟ್ಟಿರೋದಾಗಿ ತಿಳಿದು ಬಂದಿದೆ.
ಬೀದಿ ನಾಯಿಗಳಿಗೆ ಆಹಾರದಲ್ಲಿ ವಿಷ ಬೆರಸಿ ನೀಡಿದ್ದೇ, ಈ ರೀತಿಯಾಗಿ ಸಾಯೋದಕ್ಕೆ ಕಾರಣ ಎನ್ನಲಾಗುತ್ತಿದೆ. ಈ ಸಂಬಂಧ ಪಶು ವೈದ್ಯರು ಸ್ಥಳಕ್ಕೆ ಧಾವಿಸಿ ಮಾದರಿ ಸಂಗ್ರಹಿಸಿದ್ದು, ನಾಯಿಗಳ ಸಾವಿಗೆ ಕಾರಣ ಇನ್ನಷ್ಟೇ ತಿಳಿಯಬೇಕಿದೆ.