ಬೆಂಗಳೂರು : ಸೆಪ್ಟಂಬರ್ ನಂತರ ಭಾರಿ ಬದಲಾವಣೆ ಆಗಲಿದೆ ಎಂಬ ಸಚಿವ ಕೆ.ಎನ್. ರಾಜಣ್ಣ ಹೇಳಿಕೆ ವಿಚಾರವಾಗಿ, ರಾಜಣ್ಣ ಅವರಿಗೆ ಯಾವ ಮಾಹಿತಿ ಇದೆ ಗೊತ್ತಿಲ್ಲ. ಸೆಪ್ಟೆಂಬರ್ನಲ್ಲಿ ಕ್ರಾಂತಿಯಾಗುತ್ತೆ ಅಂದಿದ್ದಾರೆ. ಅವರಿಗೆ ಯಾವುದೋ ಮಾಹಿತಿ ಇರಬೇಕು. ಇಲ್ಲದಿದ್ದರೆ ಆ ರೀತಿ ಅವರು ಜವಾಬ್ದಾರಿ ಸ್ಥಾನದಲ್ಲಿ ಇದ್ದು ಹೇಳುತ್ತಿರಲಿಲ್ಲ. ಯಾವ ಕ್ರಾಂತಿ ಅನ್ನೋದನ್ನು ಅವರನ್ನೇ ಕೇಳಿ. ಅದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದರು.
ಸದಾಶಿವನಗರದ ನಿವಾಸದ ಬಳಿ ಮಾತನಾಡಿದ ಅವರು, ಯಾವ ಪವರ್ ಸೆಂಟರ್ ನೋ ಇಲ್ಲ ಯಾವುದೇ ಕ್ರಾಂತಿ ಸಹ ಆಗಲ್ಲ. ಸೆಪ್ಟೆಂಬರ್ನಲ್ಲಿ ಕ್ರಾಂತಿ ನಡೆಯುವ ಬಗ್ಗೆ ಕೆ.ಎನ್.ರಾಜಣ್ಣಗೆ ಮಾಹಿತಿ ಇರಬೇಕು. ಇಲ್ಲದಿದ್ದರೆ ಹಾಗೆ ಹೇಳುತ್ತಿರಲಿಲ್ಲಎಂದು ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದರು.
ಸಿಎಂ ಗ್ರಿಪ್ ಕಳೆದುಕೊಂಡಿದ್ದಾರೆಂಬ ಆರೋಪ ವಿಚಾರವಾಗಿ ಮಾತನಾಡಿ, ಸಿಎಂ ಯಾವುದೇ ಗ್ರಿಪ್ ಕಳೆದುಕೊಂಡಿಲ್ಲ. ಸಿಎಂ ಈಗ ಆಡಳಿತ ನಡೆಸ್ತಾ ಇಲ್ವಾ?. ಸಣ್ಣಪುಟ್ಟ ವಿಚಾರಗಳಿರುತ್ತವೆ, ಬಗೆಹರಿಸುತ್ತಾರೆ. ಬಿಜೆಪಿಯವರು ಹಿಂದೆಯೂ ಟೀಕೆ ಮಾಡುತ್ತಿದ್ದರು. ಈಗಲೂ ಮಾಡುತ್ತಾನೆ ಇದ್ದಾರೆ. ಸಿಎಂ ಅವರಿಗೆ ಸ್ವಲ್ಪ ವಯಸ್ಸಾಗಿರಬಹುದು. ಹಾಗಾಗಿ ಅವರು ಸ್ವಲ್ಪ ಸಾಫ್ಟ್ ಆಗಿರಬಹುದು. ಅವರು ಎಲ್ಲಿಯೂ ಗ್ರಿಪ್ ಕಳೆದುಕೊಂಡಿಲ್ಲ ಎಂದು ಹೇಳಿದರು.