ನವದೆಹಲಿ : ಬುಧವಾರ ಸಿಬಿಎಸ್ಇ ತೆಗೆದುಕೊಂಡ ದೊಡ್ಡ ನಿರ್ಧಾರದಲ್ಲಿ, 2026 ರಿಂದ ವರ್ಷಕ್ಕೆ ಎರಡು ಬಾರಿ 10 ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನ ನಡೆಸಲು ಮಂಡಳಿಯು ಅನುಮೋದನೆ ನೀಡಿದೆ. 10ನೇ ತರಗತಿಯ ವಿದ್ಯಾರ್ಥಿಗಳು ಮೊದಲ ಹಂತದ ಪರೀಕ್ಷೆಗಳಿಗೆ ಹಾಜರಾಗುವುದು ಕಡ್ಡಾಯವಾಗಿದೆ ಎಂದು ಪರೀಕ್ಷಾ ನಿಯಂತ್ರಕ ಸನ್ಯಾಮ್ ಭಾರದ್ವಾಜ್ ಹೇಳಿದ್ದಾರೆ. ಮಂಡಳಿಯ ಪ್ರಕಾರ ಎರಡನೇ ಹಂತವು ಐಚ್ಛಿಕವಾಗಿದೆ.
ಹೊಸ ಮಾದರಿಯನ್ನ ಅನುಸರಿಸಿ, 10ನೇ ತರಗತಿಯ ಮೊದಲ ಹಂತದ ಪರೀಕ್ಷೆಯನ್ನು ಫೆಬ್ರವರಿಯಲ್ಲಿ ಮತ್ತು ಎರಡನೇ ಹಂತದ ಪರೀಕ್ಷೆಯನ್ನು ಮೇ ತಿಂಗಳಲ್ಲಿ ನಡೆಸಲಾಗುವುದು.
CBSE approves norms to conduct Class-10 board exams twice a year from 2026: Examination Controller Sanyam Bhardwaj.
Mandatory for Class-10 students to appear in first phase of board exams, second phase optional: CBSE.
Twice-a-year CBSE Class-10 board exams: First phase results… pic.twitter.com/zwmxhoLMef
— Press Trust of India (@PTI_News) June 25, 2025
ಮೊದಲ ಹಂತದ ಬೋರ್ಡ್ ಪರೀಕ್ಷೆಯ ಫಲಿತಾಂಶವನ್ನ ಏಪ್ರಿಲ್’ನಲ್ಲಿ ಮತ್ತು ಎರಡನೇ ಹಂತದ ಫಲಿತಾಂಶವನ್ನು ಜೂನ್ನಲ್ಲಿ ಪ್ರಕಟಿಸಲಾಗುವುದು. ಆಂತರಿಕ ಮೌಲ್ಯಮಾಪನವನ್ನು ಒಮ್ಮೆ ಮಾತ್ರ ನಡೆಸಲಾಗುತ್ತದೆ.
ಸಮಸ್ಯೆಗಳನ್ನ ಚರ್ಚಿಸಲು ನಮ್ಮನ್ನು ಭೇಟಿ ಮಾಡ್ಬೋದು, ಚರ್ಚಿಸ್ಬೋದು : ‘ರಾಹುಲ್ ಗಾಂಧಿ’ಗೆ ‘ಚುನಾವಣಾ ಆಯೋಗ’ ಸಲಹೆ