ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಭೀಕರವಾದ ಕೊಲೆಯಾಗಿದ್ದು, ಮೈಕ್ ಸೆಟ್ ಬಾಕ್ಸ್ ನಿಂದ ಹೊಡೆದು ಬಿಕ್ಷುಕನನ್ನು ಕೊಲೆ ಮಾಡಲಾಗಿದೆ.ಬಿಹಾರ ಮೂಲದ ವಿಕಲಚೇತನ ಮಿತೇಶ್ (36) ಎನ್ನುವ ವ್ಯಕ್ತಿಯನ್ನು ರಾಜೇಶ್ ಹತ್ಯೆಗೈದಿದ್ದಾನೆ. ಹತ್ಯೆಯಾದ ಮಿತೇಶ್ ಹಾಗು ಕೊಲೆ ಆರೋಪಿ ರಾಜೇಶ್ ಕುಮಾರ್ ಇಬ್ಬರು ಬಿಹಾರ ಮೂಲದವರು ಎಂದು ತಿಳಿದು ಬಂದಿದೆ.
ಒಂದೇ ಬಾಡಿಗೆ ಮನೆಯಲ್ಲಿ ಮೀತೇಶ್ ಮತ್ತು ರಾಜೇಶ್ ವಾಸವಿದ್ದರು. ಇಬ್ಬರು ವಿಶೇಷ ಚೇತನರಾಗಿದ್ದು, ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದರು. ನಿನ್ನೆ ಮದ್ಯ ಸೇವಿಸಿ ಬಂದು ರಾಜೇಶ್ ತಾಯಿಗೆ ಮಿತೇಶ್ ಬೈದಿದ್ದ. ಇದರಿಂದ ಕೋಪಗೊಂಡು ರಾಜೇಶ್ ಮಿತೇಶ್ ತಲೆಗೆ ಹೊಡೆದಿದ್ದಾನೆ. ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮಿತೇಶ ಸಾವನಪ್ಪಿದ್ದಾನೆ, ಆರೋಪಿ ರಾಜೇಶ್ ಕುಮಾರ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.