ಬಳ್ಳಾರಿ : ಆತನ ಬಳಿ ಸುಮಾರು 90ಕ್ಕೂ ಹೆಚ್ಚು ಇಮೇಲ್ ಐಡಿ ಇತ್ತು. 10 ನಕಲಿ ಕಾರ್ಡ್ ಗಳು ಸಹ ಇದ್ದವು ಅಲ್ಲದೇ ಕಾಮುಕನ ಮೊಬೈಲ್ ನಲ್ಲಿ 13500 ಮಹಿಳೆಯರ ಅಶ್ಲೀಲ ಫೋಟೋ ಇತ್ತು. ಹೌದು ಬಳ್ಳಾರಿಯಲ್ಲಿ ಇದೀಗ ಮೋಸ್ಟ್ ವಾಂಟೆಡ್ ಕಾಮುಕನನ್ನು ಅರೆಸ್ಟ್ ಮಾಡಲಾಗಿದೆ. ಬಂಧಿತ ಆರೋಪಿಯನ್ನು ಸಂಡೂರು ಪಟ್ಟಣದಲ್ಲಿ ಖಾಸಗಿ ಕಂಪನಿಯ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಕಾಮುಕ ಶುಭಂ ಕುಮಾರ್ ಎಂದು ತಿಳಿದುಬಂದಿದೆ.
ಬಂಧಿತ ಶುಭಂ ನಗ್ನ ವಿಡಿಯೋ ಕರೆ ಮಾಡುವಂತೆ ಮಹಿಳೆಯರಿಗೆ ಆತ ಕಿರುಕುಳ ನೀಡುತ್ತಿದ್ದ. ಒಪ್ಪದಿದ್ದಾಗ ನಕಲಿ ಖಾತೆ ಸೃಷ್ಟಿಸಿ ಮಾನ ಹಾನಿ ಮಾಡುತ್ತಿದ್ದ. ಮಹಿಳೆಯರಿಗೆ ವಿಡಿಯೋ ಕರೆ ಮಾಡಿ ಎಡಿಟ್ ಮಾಡುತ್ತಿದ್ದ. ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದ. ಶುಭ ಕುಮಾರ್ ನನ್ನು ಇದೀಗ ಅರೆಸ್ಟ್ ಮಾಡಲಾಗಿದೆ.ಕಳೆದ ಎರಡು ವರ್ಷದಿಂದ ಮುಂಬೈ ಪೊಲೀಸರು ಈತನ ಹಿಂದೆ ಬಿದ್ದಿದ್ದರು.
ಬಂಧಿತ ಆರೋಪಿ ದೆಹಲಿಯಲ್ಲಿ ಆರೋಪಿ ಶುಭಂ ಕುಮಾರ್ ಡಿಪ್ಲೋಮಾ ಓದಿದ್ದ. ಬಳಿಕ ಬಳ್ಳಾರಿಯ ಸಂಡೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಈತ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಶುಭಂ ಕುಮಾರ್ ವಿರುದ್ಧ ಮುಂಬೈನಲ್ಲಿ ದೂರು ದಾಖಲಾಗಿದೆ. ಓರ್ವ ವಿದ್ಯಾರ್ಥಿನಿಗೆ ಕಿರುಕುಳ ಕೊಟ್ಟಿದ್ದಾನೆ. ಹಾಗಾಗಿ ವಿದ್ಯಾರ್ಥಿನಿ ಮುಂಬೈನಲ್ಲಿ ಪೊಲೀಸರಿಗೆ ದೂರು ಕೊಟ್ಟಿದ್ದಳು. ವಿದ್ಯಾರ್ಥಿನಿ ದೂರನ್ನು ಆಧರಿಸಿ ಈತನ ಮೊಬೈಲ್ ಟ್ರಾಕ್ ಮಾಡಿದ ಪೊಲೀಸರು ಸಂಡೂರಿನಲ್ಲಿ ಈತನನ್ನು ಇದೀಗ ಅರೆಸ್ಟ್ ಮಾಡಿದ್ದಾರೆ. ಪೊಲೀಸರು ಮೊಬೈಲ್ ವಶಪಡಿಸಿಕೊಂಡಿದ್ದಾಗ ಸುಮಾರು 13,500ಕ್ಕೂ ಹೆಚ್ಚು ಅಶ್ಲೀಲ ಫೋಟೋ ಮತ್ತು ವಿಡಿಯೋಗಳು ಪತ್ತೆಯಾಗಿವೆ.