ಬೆಂಗಳೂರು : ಇಂದಿನಿಂದ ರಾಜ್ಯಾದ್ಯಂತ ಓಲಾ ಉಬರ್ ಬೈಕ್ ಟ್ಯಾಕ್ಸಿ ಸಂಚಾರ ನಿಷೇಧಿಸಲಾಗಿದ್ದು, ಇದರ ಬೆನ್ನಲ್ಲೇ ಕಳೆದ ಜೂನ್ 14ರಂದು ಬೆಂಗಳೂರಲ್ಲಿ ರ್ಯಾಶ್ ಡ್ರೈವಿಂಗ್ ಮಾಡ್ತಿದ್ದ ರ್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕನನ್ನು ಪ್ರಶ್ನೆ ಮಾಡಿದ ಮಹಿಳೆ ಮೇಲೆ ಚಾಲಕ ಹಲ್ಲೆ ನಡೆಸಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.
ಹೌದು ಬೆಂಗಳೂರಲ್ಲಿ ರ್ಯಾಪಿಡೋ ಚಾಲಕನಿಂದ ಮಹಿಳೆಯ ಮೇಲೆ ಹಲ್ಲೆ ನಡೆದಿದೆ. ಕಳೆದ ಮೂರು ದಿನಗಳ ಹಿಂದೆ ಈ ಒಂದು ಘಟನೆ ನಡೆದಿದೆ ರ್ಯಾಶ್ ಆಗಿ ಡ್ರೈವಿಂಗ್ ಮಾಡುತ್ತಿದ್ದ ರ್ಯಾಪಿಡೋ ಚಾಲಕನನ್ನು ಮಹಿಳೆ ಪ್ರಶ್ನಿಸಿದ್ದಾಳೆ. ಈ ವೇಳೆ ಚಾಲಕನ ಜೊತೆಗೆ ಮಹಿಳೆ ಮಾತಿಗೆ ಮಾತು ಬೆಳೆದು ಹಲ್ಲೆ ನಡೆಸಿದ್ದಾನೆ. ಜಯನಗರದ ಬಾಟಾ ಶೋರೂಮ್ ಬಳಿ ಈ ಒಂದು ಘಟನೆ ನಡೆದಿದೆ. ಸುಹಾಸ್ ಎಂಬ ರ್ಯಾಪಿಡೋ ಚಾಲಕನಿಂದ ಈ ಒಂದು ಕೃತ್ಯ ನಡೆದಿದೆ.