ಚೆನ್ನೈ : ಮಲಯಾಳಂ ನಟ ಶೈನ್ ಟಾಮ್ ಚಾಕೊ ಮತ್ತು ಅವರ ಕುಟುಂಬ ಶುಕ್ರವಾರ ಬೆಳಿಗ್ಗೆ ತಮಿಳುನಾಡು ಬಳಿ ಕಾರು ಅಪಘಾತಕ್ಕೀಡಾಗಿದೆ. ಅವರ ತಂದೆ ಸಿಪಿ ಚಾಕೊ ಸ್ಥಳದಲ್ಲೇ ಸಾವನ್ನಪ್ಪಿದರೆ, ನಟ ಮತ್ತು ಅವರ ತಾಯಿಗೆ ತೀವ್ರ ಗಾಯಗಳಾಗಿವೆ.
ಅಪಘಾತದ ಸಮಯದಲ್ಲಿ, ಶೈನ್ ಅವರ ತಾಯಿ, ಸಹೋದರ, ತಂದೆ ಮತ್ತು ಚಾಲಕನೊಂದಿಗೆ ಪ್ರಯಾಣಿಸುತ್ತಿದ್ದರು.ಸೈನ್ ಮತ್ತು ಅವರ ತಾಯಿಯನ್ನು ಧರ್ಮಪುರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ವರದಿಗಳ ಪ್ರಕಾರ, ಅವರ ಸಹೋದರ ಮತ್ತು ಕಾರು ಚಾಲಕ ಕೂಡ ಗಾಯಗೊಂಡಿದ್ದಾರೆ.