ಬೆಂಗಳೂರು : ಐಪಿಎಲ್ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಮೊದಲ ಚಾಂಪಿಯನ್ಶಿಪ್ ಗೆದ್ದಿರುವ ಹಿನ್ನೆಲೆಯಲ್ಲಿ, ಬೆಂಗಳೂರಿನಲ್ಲಿ ಯೋಜಿತವಾಗಿರುವ ವಿಜಯೋತ್ಸವದ ಪರೇಡ್ಗೆ ಪೊಲೀಸ್ ಇಲಾಖೆಯಿಂದ ಅನುಮತಿ ದೊರೆತಿದ್ದು, ಸಂಜೆ 5 ಗಂಟೆಗೆ ವಿಧಾನಸೌಧದಿಂದ ವಿಕ್ಟರಿ ಪರೇಡ್ ಆರಂಭವಾಗಿ ಚಿನ್ನಸ್ವಾಮಿ ಕ್ರೀಡಾಂಗಣದ ವರೆಗೆ ನಡೆಯಲಿದೆ.
ವಿಧಾನಸೌಧದಿಂದ ಎಂ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ಪರೇಡ್ ನಡೆಸಲು ಆರ್ಸಿಬಿ ತಂಡವು ಅನುಮತಿ ಕೋರಿದೆ. ವರದಿಗಳ ಪ್ರಕಾರ, ಈ ವಿಜಯೋತ್ಸವದ ಪರೇಡ್ ಜೂನ್ 4, ಅಂದರೆ ಇಂದು 2025ರಂದು ಮಧ್ಯಾಹ್ನ 5 ಗಂಟೆಗೆ ವಿಧಾನಸೌಧದಿಂದ ಆರಂಭವಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊನೆಗೊಳ್ಳಲಿದೆ.
ಇಂದು ಬೆಳಿಗ್ಗೆ 11 ಗಂಟೆಗೆ ಗೆ ಅಹಮದಾಬಾದ್ ನಿಂದ ಆರ್ಸಿಬಿ ತಂಡ ಮಧ್ಯಾಹ್ನ 1:30ಕ್ಕೆ ಬೆಂಗಳೂರಿನ ಎಚ್ ಎ ಎಲ್ ಗೆ ಬಂದು ಇಳಿಯಲಿದೆ. ಬಳಿಕ ತಾಜ್ ವೆಸ್ಟ್ ಅಂಡ್ ಹೋಟೆಲ್ ನಲ್ಲಿ ವಿಶ್ರಾಂತಿ ಪಡೆದು ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತಂಡ ಭೇಟಿಯಾಗಲಿದೆ ತದನಂತರ ಸಂಜೆ 5 ಗಂಟೆಗೆ ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ವಿಕ್ಟರಿ ಪರೇಡ್ ನಡೆಯಲಿದೆ ಎಂದು ಬಲ್ಲಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.