Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಇದು ಮೋದಿ ಸರ್ಕಾರ, ಶಸ್ತ್ರಾಸ್ತ್ರ ಹಿಡಿದವರು ಯಾರೇ ಆಗಲಿ ಬೆಲೆ ತೆರಬೇಕಾಗುತ್ತೆ’ : ಲೋಕಸಭೆಯಲ್ಲಿ ಅಮಿತ್ ಶಾ ಗುಡುಗು

30/03/2026 7:22 PM

BREAKING : ಲೋಕಸಭೆಯಲ್ಲಿ ಅಮಿತ್ ಶಾ ಗುಡುಗು, ಮಾವೋವಾದಿಗಳಿಗೆ ಖಡಕ್ ಎಚ್ಚರಿಕೆ

30/03/2026 7:14 PM

ಸಿಬಿಲ್ ಸ್ಕೋರ್ ಚೆನ್ನಾಗಿದ್ದರೂ ಲೋನ್ ರಿಜೆಕ್ಟ್ ಆಗೋದ್ಯಾಕೆ? ಬ್ಯಾಂಕ್‌ ಸಾಲ ನೀಡುವ ಮುನ್ನ ಗಮನಿಸುವ 5 ಪ್ರಮುಖ ಅಂಶಗಳಿವು!

30/03/2026 7:13 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ರಾಜ್ಯದ ಶಾಲೆಗಳಲ್ಲಿ `ಕೋವಿಡ್’ ಮುನ್ನೆಚ್ಚರಿಕೆ : ಜ್ವರ, ಶೀತ ಇದ್ದರೆ ಮಕ್ಕಳಿಗೆ ರಜೆ ಘೋಷಣೆ.!
KARNATAKA

BREAKING : ರಾಜ್ಯದ ಶಾಲೆಗಳಲ್ಲಿ `ಕೋವಿಡ್’ ಮುನ್ನೆಚ್ಚರಿಕೆ : ಜ್ವರ, ಶೀತ ಇದ್ದರೆ ಮಕ್ಕಳಿಗೆ ರಜೆ ಘೋಷಣೆ.!

By kannadanewsnow5727/05/2025 10:30 AM

ಬೆಂಗಳೂರು : ರಾಜ್ಯದಲ್ಲಿ‌ ವಿಶೇಷವಾಗಿ ಬೆಂಗಳೂರಿನಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಕೊಂಚ ಪ್ರಮಾಣದಲ್ಲಿ ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಂಡಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಕೋವಿಡ್ ನಿಯಂತ್ರಣ ಸಂಬಂಧ ಬೆಂಗಳೂರಿನ ಸಿಎಂ ನಿವಾಸ ಕಾವೇರಿಯಲ್ಲಿ  ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಕೋವಿಡ್ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಸಿಎಂ ನಿರ್ದೇಶನ ನೀಡಿದ್ದಾರೆ ಎಂದರು.‌

ಈಗಾಗಲೇ ಆರೋಗ್ಯ ಇಲಾಖೆ ಕೋವಿಡ್ ಮಾರ್ಗಸೂಚಿಯನ್ನ ಹೊರಡಿಸಿದೆ.‌ ಕೇಂದ್ರ ಸರ್ಕಾರದ ಜೊತೆ ಇಲಾಖೆ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದು, ಮಾನಿಟರ್ ಮಾಡುತ್ತಿದ್ದಾರೆ. ಮಕ್ಕಳಿಗೆ ಕೋವಿಡ್ ಹರಡದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಈ ಹಿನ್ನೆಲೆಯಲ್ಲಿ ಜ್ವರ, ಶೀತ ಕಂಡುಬಂದ ಮಕ್ಕಳನ್ನ ಶಾಲೆಗೆ ಕಳಿಸದಂತೆ ಪೊಷಕರು ಎಚ್ಚರಿಕೆ ವಹಿಸಬೇಕು. ಅಲ್ಲದೇ ಶಾಲಾ ಆಡಳಿತ ಮಂಡಳಿಯವರು ಕೂಡಾ, ಜ್ವರ ಬಂದ ಮಕ್ಕಳಿಗೆ ರಜೆ ನೀಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ಮಾರ್ಗಸೂಚಿ ಹೊರಡಿಸಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಟೆಸ್ಟಿಂಗ್ ಕಿಟ್ ಗಳು ರಾಜ್ಯಾದ್ಯಂತ ಆಸ್ಪತ್ರೆಗಳಿಗೆ ವಿತರಿಸಲಾಗಿದೆ. 5 ಸಾವಿರ RTPCR ಟೆಸ್ಟಿಂಗ್ ಕಿಟ್ ಗಳನ್ನ ತೆಗೆದೊಳ್ಳಲಾಗಿದ್ದು ನಾಳೆಯೊಳಗೆ RTPCR ಟೆಸ್ಟಿಂಗ್ ಕಿಟ್ ಗಳು ಕೂಡಾ ತಲುಪಲಿವೆ. ಸದ್ಯಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆ ಇರುವುದರಿಂದ VRDL ಟೆಸ್ಟಿಂಗ್ ಕೇಂದ್ರಗಳಲ್ಲಿ ಉಸಿರಾಟ, ಮತ್ತು ಹೃದಯ ಕಾಯಿಲೆ ಇರುವವರಿಗೆ ಕಡ್ಡಾಯವಾಗಿ ಟೆಸ್ಟಿಂಗ್ ಮಾಡಲಾಗುತ್ತಿದೆ.

ಮುನ್ನೆಚ್ಚರಿಕೆ ದೃಷ್ಟಿಯಿಂದ ರೆಮ್ಡಿಸೀವರ್ ಇಂಜೆಕ್ಷನ್ ಅನ್ನು ಖರೀದಿಸಲು ಸೂಚನೆ ನೀಡಲಾಗಿದೆ. ಇದು ಕೋವಿಡ್ ಒಮೆಕ್ರಾನ್ ಜೆ.ಎನ್ 1 ತಳಿಯಾಗಿದ್ದು, ಸೌಮ್ಯ ಸ್ವಭಾವದ ಲಕ್ಷಣಗಳನ್ನ ಹೊಂದಿದೆ. ಕೋವಿಡ್ ಪಾಸಿಟಿವ್ ಪ್ರಕರಣಗಳಲ್ಲಿ ಸ್ವಲ್ಪ ಏರಿಕೆ ಕಂಡರು, ಗಂಭೀರವಾಗಿಲ್ಲ. ಹೀಗಾಗಿ ಜನರು ಆತಂಕ ಪಡುವ ಅಗತ್ಯವಿಲ್ಲ. ಆದರೆ ಎಚ್ಚರಿಕೆ ವಹಿಸುವುದು ಮುಖ್ಯ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಆತಂಕ ಪಡುವ ಪರಿಸ್ಥಿತಿ ಬಂದಿಲ್ಲವಾದರೂ ವೆಂಟಿಲೇಟರ್, ಆಕ್ಸಿಜನ್, ಔಷಧ ಸೇರಿ ಇತ್ಯಾದಿ ಅಗತ್ಯಗಳನ್ನು ಸಿದ್ದಪಡಿಸಿಟ್ಟುಕೊಳ್ಳಲು ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ. ವಯಸ್ಸಾದವರು, ಗರ್ಭಿಣಿಯರು, ಹೃದಯ ಸಂಬಂಧಿ, ಶ್ವಾಸಕೋಶ ಸಮಸ್ಯೆ ಇರುವವರು ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಧರಿಸುವುದು ಒಳ್ಳೆಯದು. ಪ್ರತೀ ವಾರಕ್ಕೊಮ್ಮೆ ತಂತ್ರಜ್ಞರ ಸಮಿತಿ ಸಭೆ ನಡೆಸಿ ಅಗತ್ಯ ನಿರ್ದೇಶನಗಳನ್ನ ನೀಡಲು ಸೂಚಿಸಲಾಗಿದೆ.

ಗರ್ಭಿಣಿಯರಲ್ಲಿ ಆರೋಗ್ಯ ಸಮಸ್ಯೆ ಕಂಡುಬಂದರೆ, ಅವರನ್ನು ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ವರ್ಗಾಯಿಸುವುದನ್ನು ನಿಲ್ಲಿಸಿ, ಎಲ್ಲಾ ಆಸ್ಪತ್ರೆಗಳಲ್ಲೂ ಅಗತ್ಯ ವ್ಯವಸ್ಥೆ ಮಾಡಿಕೊಂಡಿರಬೇಕು ಎಂದು ತಿಳಿಸಲಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೊರೋನಾ ಸಹಾಯವಾಣಿ ಪ್ರಾರಂಭ ಮಾಡುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

BREAKING: `Covid' precautions in state schools: Holiday declared for children if they have fever or cold!
Share. Facebook Twitter LinkedIn WhatsApp Email

Related Posts

ಇದು ರಾಯರ ಸನ್ನಿಧಿಯಲ್ಲಿ ನಡೆದ ಸತ್ಯ ಘಟನೆ.! ಇದು ಆ ರಾತ್ರಿ ಮಂತ್ರಾಲಯದಲ್ಲಿ ನಡೆದ ಪವಾಡ.!

30/03/2026 7:04 PM4 Mins Read

ಸಾಗರದ ‘ಮೀನು ಮಾರುಕಟ್ಟೆ’ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರದಿಂದ 129.90 ಲಕ್ಷ ಬಿಡುಗಡೆ

30/03/2026 6:28 PM1 Min Read

ಪತಿಯ ನಿಧನದ ನಂತ್ರ ಅತ್ತೆ-ಮಾವನ ಆಸ್ತಿಯಲ್ಲಿ ಸೊಸೆಗೆ ಸಂಪೂರ್ಣ ಹಕ್ಕಿದೆಯೇ? ಕಾನೂನು ಏನು ಹೇಳುತ್ತೆ?

30/03/2026 6:04 PM2 Mins Read
Recent News

‘ಇದು ಮೋದಿ ಸರ್ಕಾರ, ಶಸ್ತ್ರಾಸ್ತ್ರ ಹಿಡಿದವರು ಯಾರೇ ಆಗಲಿ ಬೆಲೆ ತೆರಬೇಕಾಗುತ್ತೆ’ : ಲೋಕಸಭೆಯಲ್ಲಿ ಅಮಿತ್ ಶಾ ಗುಡುಗು

30/03/2026 7:22 PM

BREAKING : ಲೋಕಸಭೆಯಲ್ಲಿ ಅಮಿತ್ ಶಾ ಗುಡುಗು, ಮಾವೋವಾದಿಗಳಿಗೆ ಖಡಕ್ ಎಚ್ಚರಿಕೆ

30/03/2026 7:14 PM

ಸಿಬಿಲ್ ಸ್ಕೋರ್ ಚೆನ್ನಾಗಿದ್ದರೂ ಲೋನ್ ರಿಜೆಕ್ಟ್ ಆಗೋದ್ಯಾಕೆ? ಬ್ಯಾಂಕ್‌ ಸಾಲ ನೀಡುವ ಮುನ್ನ ಗಮನಿಸುವ 5 ಪ್ರಮುಖ ಅಂಶಗಳಿವು!

30/03/2026 7:13 PM

ಇದು ರಾಯರ ಸನ್ನಿಧಿಯಲ್ಲಿ ನಡೆದ ಸತ್ಯ ಘಟನೆ.! ಇದು ಆ ರಾತ್ರಿ ಮಂತ್ರಾಲಯದಲ್ಲಿ ನಡೆದ ಪವಾಡ.!

30/03/2026 7:04 PM
State News
KARNATAKA

ಇದು ರಾಯರ ಸನ್ನಿಧಿಯಲ್ಲಿ ನಡೆದ ಸತ್ಯ ಘಟನೆ.! ಇದು ಆ ರಾತ್ರಿ ಮಂತ್ರಾಲಯದಲ್ಲಿ ನಡೆದ ಪವಾಡ.!

By kannadanewsnow0930/03/2026 7:04 PM KARNATAKA 4 Mins Read

ಮಂತ್ರಾಲಯಕ್ಕೆ ಹೋಗುವ ಯೋಜನೆಯಾಗಲಿ ಯೋಚನೆಯಾಗಲಿ ನನಗಿರಲಿಲ್ಲ.. ನಿಜ ಹೇಳಬೇಕೆಂದರೆ ಮುಂಚೆ ರಾಘವೇಂದ್ರ ಸ್ವಾಮಿಗಳ ಮೇಲೆ ಅಷ್ಟು ಭಕ್ತಿಯೂ ನನಗಿರಲಿಲ್ಲ.. ಕಾರಣ…

ಸಾಗರದ ‘ಮೀನು ಮಾರುಕಟ್ಟೆ’ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರದಿಂದ 129.90 ಲಕ್ಷ ಬಿಡುಗಡೆ

30/03/2026 6:28 PM

ಪತಿಯ ನಿಧನದ ನಂತ್ರ ಅತ್ತೆ-ಮಾವನ ಆಸ್ತಿಯಲ್ಲಿ ಸೊಸೆಗೆ ಸಂಪೂರ್ಣ ಹಕ್ಕಿದೆಯೇ? ಕಾನೂನು ಏನು ಹೇಳುತ್ತೆ?

30/03/2026 6:04 PM

ಒಂದು ವರ್ಷದೊಳಗೆ ವಿದ್ಯುತ್, ನೀರಾವರಿ ಸಮಸ್ಯೆಗೆ ಶಾಶ್ವತ ಪರಿಹಾರ: ಮದ್ದೂರು ಶಾಸಕ ಕೆ.ಎಂ.ಉದಯ್

30/03/2026 6:01 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.