ಶ್ರೀನಗರ : ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಕಾರವಾಗಿ ಭಾರತ ಇದೀಗ ಪಾಕಿಸ್ತಾನದ ಮೇಲೆ ದಾಳಿ ನಡೆಸಿದ್ದು, ಪಾಕಿಸ್ತಾನ ಕೂಡ ಭಾರತದ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದೆ. ಆದರೆ ಭಾರತ ಪಾಕಿಸ್ತಾನದ ಎಲ್ಲಾ ಕ್ಷಿಪಣಿಗಳನ್ನು ಪುಡಿಗಟ್ಟಿದೆ. ಆದರೂ ಪಾಕಿಸ್ತಾನ ತನ್ನ ಹಳೆ ಚಟವನ್ನು ಬಿಡದೆ ಗಡಿಯಲ್ಲಿ ಮತ್ತೆ ಶೆಲ್ ದಾಳಿ ನಡೆಸಿದೆ.
ಇದೀಗ ಜಮ್ಮು ಕಾಶ್ಮೀರದ ರಜೌರಿ ಸೆಕ್ಟರ್ ನಲ್ಲಿ ಪಾಕಿಸ್ತಾನದಿಂದ ಮತ್ತೆ ಶೆಲ್ ದಾಳಿ ನಡೆದಿದ್ದು, ಗಡಿಭಾಗದ ನಾಗರಿಕರನ್ನು ಗುರಿಯಾಗಿಸಿ ಪಾಕಿಸ್ತಾನ ಇದೀಗ ಮತ್ತೆ ಶಲ್ ದಾಳಿ ನಡೆಸಿದೆ. ಈ ಒಂದು ದಾಳಿಯಲ್ಲಿ ಹಲವು ನಾಗರೀಕರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡವರನ್ನು ಸ್ಥಳೀಯರು ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದಾರೆ.