ಪಂಜಾಬ್ : ಭಾರತ ಮತ್ತು ಪಾಕಿಸ್ತಾನದ ಮಧ್ಯ ಯುದ್ಧದ ಉದ್ವಿಗ್ನತೆ ತೀವ್ರವಾಗಿದ್ದು, ಇದರ ಮಧ್ಯೆ ನಿನ್ನೆ ಆಪರೇಷನ್ ಸಿಂಧೂರ್ ಮೂಲಕ ಉಗ್ರರ ನೆಲೆಗಳನ್ನು ಭಾರತೀಯ ಸೇನೆ ನಾಶಮಾಡಿದೆ. ಇದೀಗ ಅಕ್ರಮವಾಗಿ ಭಾರತಕ್ಕೆ ನುಸುಳಲು ಯತ್ನಿಸಿದ್ದ ಪಾಕಿಸ್ತಾನ ಪ್ರಜೆಯನ್ನು ಬಿಎಸ್ಎಫ್ ಯೋಧರು ಗುಂಡಿಕ್ಕಿ ಹತ್ಯೆಗೈದಿದ್ದಾರೆ.
ಭಾರತಕ್ಕೆ ನುಸುಳಲು ಯತ್ನಿಸಿದವನಿಗೆ ಗುಂಡಿಕ್ಕಿ ಬಿಎಸ್ಎಫ್ ಯೋದರು ಅಂತರಾಷ್ಟ್ರೀಯ ಗಡಿ ಫಿರೋಜ್ ಪುರ ಬಳಿ ಪಾಕಿಸ್ತಾನ ಪ್ರಜೆಯನ್ನು ಇದೀಗ ಗುಂಡಿಕ್ಕಿ ಹತ್ಯೆಗೈದಿದೆ. ಪಂಜಾಬ್ ನ ಫಿರೋಜ್ ಪುರ ಬಳಿ ನುಸುಳುಕೋರನ ಹತ್ತೆಯಾಗಿದೆ ರಾತ್ರಿ 2:30 ಸುಮಾರಿಗೆ ಗಡಿ ನುಸುಳಲು ಪ್ರಯತ್ನಿಸಿದ್ದ. ನುಸುಳುಕೋರನನ್ನು ತಡೆಯಲು ಬಿಎಸ್ಎಫ್ ಯೋಧರು ಯತ್ನಿಸಿದ್ದರು. ನಿಲ್ಲುವಂತೆ ಎಚ್ಚರಿಕೆ ನೀಡಿದ್ದ ಗಡಿ ಭದ್ರತಾ ಪಡೆ, ಬಿಎಸ್ಎಫ್ ಸಿಬ್ಬಂದಿ ಸೂಚನೆಯನ್ನು ನಿರ್ಲಕ್ಷಿಸಿ ಪಾಕಿಸ್ತಾನ ಪ್ರಜೆ ಮುನ್ನುಗ್ಗಿದ್ದಾನೆ. ಈ ವೇಳೆ ಬಿಎಸ್ಎಫ್ ನುಸುಳುಕೋರನಿಗೆ ಗುಂಡಿಕ್ಕಿದಿದ್ದಾರೆ.