Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬೆಂಗಳೂರಲ್ಲಿ ಹೈಟೆಕ್ ಕಾರ್ ಡ್ರಿಫ್ಟಿಂಗ್ : ಅಪರಿಚಿತ ಚಾಲಕನ ವಿರುದ್ಧ FIR ದಾಖಲು | Video Viral

21/03/2026 4:34 PM

BIG NEWS : IPL 2026 ಪಂದ್ಯಾವಳಿ : ಚಿನ್ನಸ್ವಾಮಿ ಸ್ಟೇಡಿಯಂ ಜನಜಂಗುಳಿ ನಿಯಂತ್ರಿಸಲು ‘AI’ ಬಳಕೆ

21/03/2026 4:20 PM

Good News ; ಆಭರಣ ಪ್ರಿಯರಿಗೆ ಭರ್ಜರಿ ನ್ಯೂಸ್ ; ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ

21/03/2026 4:08 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನದ ಟರ್ಮಿನಲ್‌-2ಗೆ ಸ್ಕೈಟ್ರಾಕ್ಸ್‌ 5 ಸ್ಟಾರ್‌ ಮಾನ್ಯತೆ
KARNATAKA

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನದ ಟರ್ಮಿನಲ್‌-2ಗೆ ಸ್ಕೈಟ್ರಾಕ್ಸ್‌ 5 ಸ್ಟಾರ್‌ ಮಾನ್ಯತೆ

By kannadanewsnow0910/04/2025 5:56 PM

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಟರ್ಮಿನಲ್‌ 2 ಸ್ಕೈಟ್ರಾಕ್ಸ್‌ “5 ಸ್ಟಾರ್‌ ಮಾನ್ಯತೆ” ಪಡೆದ ಭಾರತದ ಮೊದಲ ಟರ್ಮಿನಲ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಾಗತಿಕವಾಗಿ ಗೌರವಿಸಲ್ಪಡುವ ಸ್ಕೈಟ್ರಾಕ್ಸ್‌ ಮಾನದಂಡಗಳ ಆಧಾರದ ಮೇಲೆ ಈ ಮಾನ್ಯತೆಯನ್ನು ನೀಡಲಾಗಿದೆ. ಜೊತೆಗೆ, ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಎಂಬ ಹಿರಿಮೆಯನ್ನು ಸತತ ಎರಡನೇ ಬಾರಿ ಮುಡಿಗೇರಿಸಿಕೊಳ್ಳುವ ಮೂಲಕ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಮುಖ ಜಾಗತಿಕ ವಿಮಾನಯಾನ ಕೇಂದ್ರವಾಗಿ ಹೊರಹೊಮ್ಮಿದೆ.

ಸ್ಕೈಟ್ರಾಕ್ಸ್ ವಲ್ಡ್‌ ಏರ್‌ಪೋರ್ಟ್‌ ಅವಾರ್ಡ್‌, ವಿಮಾನ ನಿಲ್ದಾಣಗಳ ಶ್ರೇಷ್ಠತೆಯ ಮಾನದಂಡವೆಂದು ಜಾಗತಿಕವಾಗಿ ಹೆಸರುವಾಸಿಯಾಗಿದ್ದು, ಪ್ರಯಾಣಿಕರ ಅನುಭವ ಹೆಚ್ಚಿಸುವಲ್ಲಿ ಉತ್ತಮ ಸಾಧನೆ ಮಾಡಿದ ವಿಮಾನ ನಿಲ್ದಾಣಗಳನ್ನು ಗುರುತಿಸುತ್ತದೆ. ಟರ್ಮಿನಲ್ ವಿನ್ಯಾಸ, ಸ್ವಚ್ಛತೆ, ಭದ್ರತೆ, ಡಿಜಿಟಲ್ ಏಕೀಕರಣ, ಆತಿಥ್ಯ, ಒಳಗೊಳ್ಳುವಿಕೆ ಮತ್ತು ಸುಸ್ಥಿರತೆ ಸೇರಿದಂತೆ 30ಕ್ಕೂ ಹೆಚ್ಚು ವಿಭಾಗಗಳಲ್ಲಿ 800 ಕ್ಕೂ ಹೆಚ್ಚು ಪ್ರಯಾಣಿಕರ ಅಭಿಪ್ರಾಯ, ಲೆಕ್ಕಪರಿಶೋಧನೆಯ ನಂತರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ 2ಗೆ 5 ಸ್ಟಾರ್ ಮಾನ್ಯತೆಯನ್ನು ನೀಡಲಾಗಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಪ್ರಯಾಣಿಕರ ಪ್ರಯಾಣದ ಅನುಭವವನ್ನು ಅತ್ಯುತ್ತಮಗೊಳಿಸುವತ್ತ ಸತತ ಪ್ರಯತ್ನ ನಡೆಸುತ್ತಿದ್ದು, ಸೇವಾ ದಕ್ಷತೆ ಮತ್ತು ಒದಗಿಸುವ ಸೌಕರ್ಯಗಳ ನಡುವೆ ಸಮತೋಲನ ಕಾಯ್ದುಕೊಂಡಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಈ ಪ್ರತಿಷ್ಠಿತ ಮಾನ್ಯತೆಯನ್ನು ಮುಡಿಗೇರಿಸಿಕೊಳ್ಳಲು ಕಾರಣವಾದ ಕೆಲವು ಮಾನದಂಡಗಳು ಹೀಗಿವೆ:

– ವಿಶ್ವ ದರ್ಜೆಯ ಟರ್ಮಿನಲ್ ಅನುಭವ: ಟರ್ಮಿನಲ್‌ 2 ರ ಪರಿಸರ ಸ್ನೇಹಿ ‘ಉದ್ಯಾನವನದಲ್ಲಿ ಟರ್ಮಿನಲ್’ ವಿನ್ಯಾಸ, ಹಸಿರು ವಾತಾವರಣ, ಹೇರಳವಾದ ನೈಸರ್ಗಿಕ ಬೆಳಕು ಮತ್ತು ಪ್ರಕೃತಿ ಸೊಬಗಿನ ನಿರ್ಮಾಣಗಳು ಪ್ರಯಾಣಿಕರಿಗೆ ವಿಶೇಷ ಅನುಭವ ಒದಗಿಸುತ್ತವೆ. ಹಾಗೂ, ಪ್ರಯಾಣಿಕ-ಕೇಂದ್ರಿತ ಮಾರ್ಗ ಶೋಧಕ‌ ಸೌಲಭ್ಯಗಳು (ವೇಫೈಂಡಿಂಗ್) ಯಾವುದೇ ಅಡೆತಡೆಯಿಲ್ಲದೇ ಪ್ರಯಾಣಿಸಲು ಅನುಕೂಲ ಒದಗಿಸುತ್ತದೆ. ಅಷ್ಟೇ ಅಲ್ಲದೆ, ಟರ್ಮಿನಲ್‌ 2ರಲ್ಲಿನ ಕಲೆ ಮತ್ತು ಸಾಂಸ್ಕೃತಿಕ ವಿನ್ಯಾಸವು ಪ್ರಯಾಣಿಕರ ಮನಸೂರೆಗೊಳಿಸುವಂತಿದ್ದು, ಅನನ್ಯ ಆಕರ್ಷಕ ಅನುಭವಕ್ಕೆ ಕಾರಣವಾಗಿದೆ.

*ತಡೆರಹಿತ ಡಿಜಿಟಲ್ ನಾವೀನ್ಯತೆ: ಡಿಜಿ ಯಾತ್ರಾದ ಮೂಲಕ ಬಯೋಮೆಟ್ರಿಕ್ ಪ್ರವೇಶ, ಕೃತಕ ಬುದ್ಧಿಮತ್ತೆ ಚಾಲಿತ ಬಿಎಲ್‌ಆರ್‌ ಪಲ್ಸ್ ಅಪ್ಲಿಕೇಶನ್, ಫಾಸ್ಟ್-ಟ್ಯಾಕ್ಡ್ ವಲಸೆ ಮತ್ತು ಸುಧಾರಿತ ಸರತಿ ಸಾಲು ನಿರ್ವಹಣೆಯೊಂದಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿ ಪ್ರಯಾಣಿಕರು ಹೆಚ್ಚಿನ ಸೇವಾ ದಕ್ಷತೆಯನ್ನು ಪಡೆಯಬಹುದಾಗಿದೆ. ನಡೆಯಬೇಕಾದ ದೂರದ ಮಾಹಿತಿಯ ಸೂಚಕಗಳು ಮತ್ತು ಸ್ವಯಂಚಾಲಿತ ಭದ್ರತಾ ವ್ಯವಸ್ಥೆಗಳು ಡಿಜಿಟಲ್ ಅನುಭವವನ್ನು ಮತ್ತಷ್ಟು ಸುಗಮಗೊಳಿಸುತ್ತದೆ.

* ಪ್ರತಿಯೊಬ್ಬರ ಒಳಗೊಳ್ಳುವಿಕೆ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ದೇಶದ ವಿಮಾನ ನಿಲ್ದಾಣಗಳಲ್ಲೇ ಮೊದಲ ಸಂವೇದನಾ ಕೊಠಡಿಯನ್ನು ಆರಂಭಿಸಿದೆ. ಇದು ಸಂವೇದನಾ ಸೂಕ್ಷ್ಮತೆಗಳನ್ನು ಹೊಂದಿರುವ ಪ್ರಯಾಣಿಕರಿಗೆ ಒತ್ತಡ ಮುಕ್ತ ಅನುಭವವನ್ನು ಒದಗಿಸುತ್ತಿದೆ. ಸಂವೇದನಾ ಆಧಾರಿತ ಸ್ಲೈಡಿಂಗ್ ಬಾಗಿಲುಗಳು, ಆಡಿಯೊ ಪ್ರಾಂಪ್ಟ್‌ಗಳೇ ಮೊದಲಾದ ಸೀಮಿತ ಚಲನಶೀಲ ಪ್ರಯಾಣಿಕ ಸ್ನೇಹಿ ಸೌಲಭ್ಯಗಳು ಸೇರಿದಂತೆ, ಗುಪ್ತ ದಿವ್ಯಾಂಗ ಸನ್‌ಫ್ಲಾವರ್‌ ಲ್ಯಾನ್ಯಾರ್ಡ್ ಕಾರ್ಯಕ್ರಮವು ಅಗತ್ಯವಿರುವ ಪ್ರಯಾಣಿಕರಿಗೆ ಸಹಾಯ ಒದಗಿಸುತ್ತದೆ.

* ಸುಸ್ಥಿರತೆಯ ಹೆಜ್ಜೆಗುರುತು: ಪ್ಲಾಟಿನಂ LEED ಪೂರ್ವ-ಪ್ರಮಾಣೀಕರಣ ಮತ್ತು ಎಸಿಐ 5ನೇ ಹಂತದ ಕಾರ್ಬನ್ ಮಾನ್ಯತೆಯನ್ನು ಹೊಂದಿರುವ ವಿಶ್ವದ ಅತಿದೊಡ್ಡ ಟರ್ಮಿನಲ್ ಆಗಿರುವ ಟರ್ಮಿನಲ್‌ 2, ನವೀಕರಿಸಬಹುದಾದ ಇಂಧನ, ಪರಿಸರ ಸ್ನೇಹಿ ಮೂಲಸೌಕರ್ಯಗಳಿಗೆ ಒತ್ತು ನೀಡಿದೆ.

* ಚಿಲ್ಲರೆ ವ್ಯಾಪಾರ, ಆಹಾರ ಮತ್ತು ಪಾನೀಯ, ಲೌಂಜ್ ಅನುಭವಗಳ ಉತ್ಕೃಷ್ಟತೆ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿ ಪ್ರಯಾಣಿಕರು, ಜಾಗತಿಕ ಮತ್ತು ಸ್ಥಳೀಯ ಬ್ರ್ಯಾಂಡ್‌ಗಳ ಆಯ್ದ ಚಿಲ್ಲರೆ ವ್ಯಾಪಾರ ಮಳಿಗೆಗಳು, ಆಹಾರ ಮತ್ತು ಪಾನೀಯಗಳ ಅನುಭವವನ್ನು ಆನಂದಿಸಬಹುದಾಗಿದೆ. ಜೊತೆಗೆ, ವಿಮಾನ ನಿಲ್ದಾಣದಲ್ಲಿ ಲಭ್ಯವಿರುವ 080 ಲೌಂಜ್‌ಗಳು, ಪ್ರೀಮಿಯಂ ಆತಿಥ್ಯ ಕೊಡುಗೆಗಳು ಮತ್ತು ಸಹಯೋಗಿ ಸಂಸ್ಥೆಗಳು ಪ್ರಯಾಣಿಕರಿಗೆ ಅತ್ಯುತ್ತಮ ದರ್ಜೆಯ ಸೌಕರ್ಯ ಮತ್ತು ಸೇವೆಯನ್ನು ಒದಗಿಸುವ ಗುರಿಯನ್ನು ಹೊಂದಿವೆ.

5 ಸ್ಟಾರ್‌ ಮಾನ್ಯತೆ ಪಡೆದ ಕುರಿತು ಮಾತನಾಡಿದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಎಂಡಿ & ಸಿಇಒ) ಶ್ರೀ ಹರಿ ಮರಾರ್‌ ಅವರು, ” ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ತಡೆರಹಿತ, ನವೀನ ಮತ್ತು ಸುಸ್ಥಿರವಾದ ವಿಶ್ವದರ್ಜೆಯ ಪ್ರಯಾಣದ ಅನುಭವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ.

ಸ್ಕೈಟ್ರಾಕ್ಸ್‌ನಿಂದ ಭಾರತದಲ್ಲೇ ಮೊದಲ 5 ಸ್ಟಾರ್ ಮಾನ್ಯತೆ ಪಡೆದಿರುವುದು ಹಾಗೂ ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಎಂಬ ಹೆಗ್ಗುರುತನ್ನು ಸತತ ಎರಡನೇ ಬಾರಿಗೆ ಗಳಿಸಿರುವುದು ನಮ್ಮ ಪ್ರಯತ್ನಗಳಿಗೆ ದೊರೆತ ಮಾನ್ಯತೆಯಷ್ಟೇ ಅಲ್ಲದೇ, ನಮ್ಮ ತಂಡದ ಉತ್ಸಾಹ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ. ಈ ಮೈಲಿಗಲ್ಲು ಬೆಂಗಳೂರನ್ನು ಜಾಗತಿಕ ವಿಮಾನಯಾನ ವೇದಿಕೆಯಲ್ಲಿ ಮುಂಚೂಣಿಯಲ್ಲಿರಿಸುತ್ತದೆ. ಈ ಸಾಧನೆಗೆ ಕಾರಣವಾದ ನಮ್ಮ ಪ್ರಯಾಣಿಕರು, ಪಾಲುದಾರರು ಮತ್ತು ಉದ್ಯೋಗಿಗಳಿಗೆ, ಅವರ ನಂಬಿಕೆ ಮತ್ತು ಬೆಂಬಲಕ್ಕಾಗಿ ಸದಾ ಕೃತಜ್ಞರಾಗಿರುತ್ತೇವೆ. ಭವಿಷ್ಯದಲ್ಲೂ ಇದೇ ರೀತಿಯಲ್ಲಿ ಪ್ರಯಾಣಿಕರಿಗೆ ಉತ್ತಮ ಅನುಭವ ನೀಡುವ ನಮ್ಮ ಪ್ರಯತ್ನ ಮುಂದುವರೆಯಲಿದೆ” ಎಂದು ತಿಳಿಸಿದರು.

ಈ ಪ್ರತಿಷ್ಠಿತ ಮಾನ್ಯತೆಯನ್ನು ಗಳಿಸುವ ಮೂಲಕ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಜಾಗತಿಕವಾಗಿ ಮೆಚ್ಚುಗೆ ಪಡೆದ 5-ಸ್ಟಾರ್ ಮಾನ್ಯತೆ ಪಡೆದ ವಿಮಾನ ನಿಲ್ದಾಣಗಳ ಟರ್ಮಿನಲ್‌ಗಳ ಸಾಲಿಗೆ ಸೇರ್ಪಡೆಗೊಂಡಂತಾಗಿದೆ.

 ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ವನ್ನು 5 ಸ್ಟಾರ್ ಮಾನ್ಯತೆಯೊಂದಿಗೆ ಪ್ರಮಾಣೀಕರಿಸಲು ಅತೀವ ಸಂತೋಷವೆನಿಸುತ್ತದೆ. ಈ ಅತ್ಯುನ್ನತ ಮಾನ್ಯತೆಯನ್ನು ಸಾಧಿಸಿದ ಭಾರತದ ಮೊದಲ ವಿಮಾನ ನಿಲ್ದಾಣವಾಗಿರುವುದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅತ್ಯುನ್ನತ ಗುಣಮಟ್ಟಕ್ಕೆ ಸಂದ ಮನ್ನಣೆಯಾಗಿದೆ” ಎಂದು ಸ್ಕೈಟ್ರಾಕ್ಸ್‌ನ ಸಿಇಒ ಎಡ್ವರ್ಡ್ ಪ್ಲಾಸ್ಟೆಡ್ ಪ್ರಶಂಸೆ ವ್ಯಕ್ತಪಡಿಸಿದರು.

ಐಪಿಸಿ ಸೆಕ್ಷನ್ ಅಡಿಯಲ್ಲಿ ಮಾನವ ಹಲ್ಲುಗಳು ‘ಅಪಾಯಕಾರಿ ಆಯುಧ’ವಲ್ಲ: ಬಾಂಬೆ ಹೈಕೋರ್ಟ್

ಕೆರೆಯಲ್ಲಿ ಮುಳುಗಿ ತಂದೆ-ಮಗ ಸೇರಿ ಮೂವರು ಜಲಸಮಾಧಿ

Share. Facebook Twitter LinkedIn WhatsApp Email

Related Posts

BREAKING : ಬೆಂಗಳೂರಲ್ಲಿ ಹೈಟೆಕ್ ಕಾರ್ ಡ್ರಿಫ್ಟಿಂಗ್ : ಅಪರಿಚಿತ ಚಾಲಕನ ವಿರುದ್ಧ FIR ದಾಖಲು | Video Viral

21/03/2026 4:34 PM1 Min Read

BIG NEWS : IPL 2026 ಪಂದ್ಯಾವಳಿ : ಚಿನ್ನಸ್ವಾಮಿ ಸ್ಟೇಡಿಯಂ ಜನಜಂಗುಳಿ ನಿಯಂತ್ರಿಸಲು ‘AI’ ಬಳಕೆ

21/03/2026 4:20 PM1 Min Read

BREAKING : ಇಂದು ಅಥವಾ ನಾಳೆ ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಟಿಕೆಟ್ ಘೋಷಣೆ : ರಣದೀಪ್ ಸುರ್ಜೆವಾಲಾ

21/03/2026 4:05 PM1 Min Read
Recent News

BREAKING : ಬೆಂಗಳೂರಲ್ಲಿ ಹೈಟೆಕ್ ಕಾರ್ ಡ್ರಿಫ್ಟಿಂಗ್ : ಅಪರಿಚಿತ ಚಾಲಕನ ವಿರುದ್ಧ FIR ದಾಖಲು | Video Viral

21/03/2026 4:34 PM

BIG NEWS : IPL 2026 ಪಂದ್ಯಾವಳಿ : ಚಿನ್ನಸ್ವಾಮಿ ಸ್ಟೇಡಿಯಂ ಜನಜಂಗುಳಿ ನಿಯಂತ್ರಿಸಲು ‘AI’ ಬಳಕೆ

21/03/2026 4:20 PM

Good News ; ಆಭರಣ ಪ್ರಿಯರಿಗೆ ಭರ್ಜರಿ ನ್ಯೂಸ್ ; ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ

21/03/2026 4:08 PM

BREAKING : ಇಂದು ಅಥವಾ ನಾಳೆ ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಟಿಕೆಟ್ ಘೋಷಣೆ : ರಣದೀಪ್ ಸುರ್ಜೆವಾಲಾ

21/03/2026 4:05 PM
State News
KARNATAKA

BREAKING : ಬೆಂಗಳೂರಲ್ಲಿ ಹೈಟೆಕ್ ಕಾರ್ ಡ್ರಿಫ್ಟಿಂಗ್ : ಅಪರಿಚಿತ ಚಾಲಕನ ವಿರುದ್ಧ FIR ದಾಖಲು | Video Viral

By kannadanewsnow0521/03/2026 4:34 PM KARNATAKA 1 Min Read

ಬೆಂಗಳೂರು : ಎಂ.ಜಿ. ರಸ್ತೆಯ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಇಂದು ಬೆಳಗಿನಜಾವ ಐಷಾರಾಮಿ ಲಾಂಬೊರ್ಗಿನಿ ಕಾರು ಡ್ರಿಫ್ಟಿಂಗ್ ಮಾಡಿ…

BIG NEWS : IPL 2026 ಪಂದ್ಯಾವಳಿ : ಚಿನ್ನಸ್ವಾಮಿ ಸ್ಟೇಡಿಯಂ ಜನಜಂಗುಳಿ ನಿಯಂತ್ರಿಸಲು ‘AI’ ಬಳಕೆ

21/03/2026 4:20 PM

BREAKING : ಇಂದು ಅಥವಾ ನಾಳೆ ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಟಿಕೆಟ್ ಘೋಷಣೆ : ರಣದೀಪ್ ಸುರ್ಜೆವಾಲಾ

21/03/2026 4:05 PM

ಸಿಲಿಂಡರ್, ಪೆಟ್ರೋಲ್, ಡೀಸೆಲ್ ದರ ಏರಿಕೆ ವಿರೋಧಿಸಿ ಪ್ರತಿಭಟನೆ : ಬೆಂಗಳೂರಲ್ಲಿ ವಾಟಾಳ್ ನಾಗರಾಜ್ ಪೊಲೀಸರ ವಶಕ್ಕೆ!

21/03/2026 3:42 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.