Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸೋಲಿಸಲು ಬಂದವರ ನಡುವೆ ಸದ್ದಿಲ್ಲದೇ ಗೆದ್ದು ಮಾರಿಗುಡಿ ಖಜಾಂಚಿಯಾದ ವಿ.ಶಂಕರ್; ಸಾಗರ ಜನರ ಪ್ರೀತಿಯೇ ನನ್ನ ಶ್ರೀರಕ್ಷೆ ಎಂದು ಕೃತಜ್ಞತೆ

29/03/2026 12:06 AM

ಹಿರಿಯರ ಆದರ್ಶದ ಹಾದಿಯಲ್ಲಿ ಮಾರಿಕಾಂಬಾ ತಾಯಿ ಸೇವೆ ಮಾಡಿ: ನೂತನ ಸಮಿತಿಗೆ ಹರತಾಳು ಹಾಲಪ್ಪ ಕಿವಿಮಾತು

28/03/2026 10:10 PM
liver

ನಿಶ್ಶಬ್ದವಾಗಿ ನಿಮ್ಮ ‘ಲಿವರ್’ ಕೊಲ್ಲುವ 3 ಆಹಾರಗಳಿವು ; ವೈದ್ಯರ ಎಚ್ಚರಿಕೆ!

28/03/2026 10:01 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್’ ಆರೋಪಕ್ಕೆ ಅಂಕಿಅಂಶ ಸಹಿತ ಈ ಉತ್ತರ ಕೊಟ್ಟ ‘ಸಚಿವ ರಾಮಲಿಂಗಾರೆಡ್ಡಿ’
KARNATAKA

‘ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್’ ಆರೋಪಕ್ಕೆ ಅಂಕಿಅಂಶ ಸಹಿತ ಈ ಉತ್ತರ ಕೊಟ್ಟ ‘ಸಚಿವ ರಾಮಲಿಂಗಾರೆಡ್ಡಿ’

By kannadanewsnow0926/03/2025 5:24 PM

ಬೆಂಗಳೂರು: ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಉತ್ತರ ಕರ್ನಾಟಕದ ಬಗೆಗಿನ ಆರೋಪಗಳ ಕುರಿತಂತೆ, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು, ಈ ಕೆಳಕಂಡಂತೆ ದಾಖಲೆ ಸಹಿತ ಉತ್ತರ ನೀಡಿದ್ದಾರೆ.

ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಅರವಿಂದ್ ಬೆಲ್ಲದ್ ಅವರೇ, ಉತ್ತರ ಕರ್ನಾಟಕದ ಬಗೆಗಿನ ತಮ್ಮ ಕಾಳಜಿಗೆ ಸ್ಪಂದಿಸುತ್ತಾ, ಈ ಕಾಳಜಿಯು ತಮ್ಮ‌ ಬಿ.ಜೆ.ಪಿ ಸರ್ಕಾರದ ಆಡಳಿತದ ಅವಧಿಯಲ್ಲಿ ತೋರಿದ್ದರೆ, ಉತ್ತರ ಕರ್ನಾಟಕದ ಜನರಿಗೆ ಸಾಕಷ್ಟು ಸಾರಿಗೆ ಸೌಲಭ್ಯವನ್ನು ನೀಡಿ, ಸಮಗ್ರ ಅಭಿವೃದ್ಧಿ ಕಾರ್ಯವನ್ನು ಮಾಡಬಹುದಿತ್ತೇನೋ. ಸಾರಿಗೆ ಸಂಸ್ಥೆಗಳನ್ನು ಅಧೋಗತಿಗೆ ತಂದು ನಷ್ಟಕ್ಕೆ ಸಿಲುಕಿಸಿ ಹೋಗಿರುವ ತಮ್ಮ ಪಕ್ಷದ ಬಗ್ಗೆ ಕೆಲವೊಷ್ಟು ಸರಿಯಾದ ಮಾಹಿತಿ ಇಟ್ಟುಕೊಳ್ಳಿ, ಟ್ಟೀಟ್ ಮಾಡಲು ಇದು ಸಹಕಾರಿಯಾಗುತ್ತದೆ. ಇಲ್ಲವಾದರೆ ಕೈ ತೋರಿಸಿ ಅವಲಕ್ಷಣ ಮಾಡಿಸಿಕೊಂಡಂತೆ ಆಗುತ್ತದೆ ಎಂದಿದ್ದಾರೆ.

ಯಡಿಯೂರಪ್ಪ , ಬೊಮ್ಮಾಯಿ ಆಡಳಿತದಲ್ಲಿ ಬಿಟ್ಟು ಹೋಗಿದ್ದ ರೂ.5900 ಕೋಟಿ‌ ನಷ್ಟ ಹಾಗೂ ಡೀಸೆಲ್ ಹಣ, ಸಿಬ್ಬಂದಿಗಳ ಭವಿಷ್ಯ ನಿಧಿ , ಖರೀದಿ ಸಾಮಾಗ್ರಿಗಳ ಹಣ ಸೇರಿ ಎಲ್ಲಾ ಬಾಕಿ ಗಳನ್ನು ತೀರಿಸುವ ಹೊಣೆಗಾರಿಕೆ ಬಿಟ್ಟು ಹೋಗಿರುವ ತಮ್ಮ ವಿಫಲ ಆಡಳಿತದ ಭಾರವನ್ನು ಹೊತ್ತು ಸಂಸ್ಥೆಗಳನ್ನು ನಾವು ಮುನ್ನಡೆಸುತ್ತಿದ್ದೇವೆ ಎಂಬುದಾಗಿ ತಿಳಿಸಿದ್ದಾರೆ.

@BelladArvind ಅವರೇ, ಉತ್ತರ ಕರ್ನಾಟಕದ ಬಗೆಗಿನ ತಮ್ಮ ಕಾಳಜಿಗೆ ಸ್ಪಂದಿಸುತ್ತಾ, ಈ ಕಾಳಜಿಯು ತಮ್ಮ‌ @BJP4Karnataka ಸರ್ಕಾರದ ಆಡಳಿತದ ಅವಧಿಯಲ್ಲಿ ತೋರಿದ್ದರೆ, ಉತ್ತರ ಕರ್ನಾಟಕದ ಜನರಿಗೆ ಸಾಕಷ್ಟು ಸಾರಿಗೆ ಸೌಲಭ್ಯವನ್ನು ನೀಡಿ, ಸಮಗ್ರ ಅಭಿವೃದ್ಧಿ ಕಾರ್ಯವನ್ನು ಮಾಡಬಹುದಿತ್ತೇನೋ.

ಸಾರಿಗೆ ಸಂಸ್ಥೆಗಳನ್ನು ಅಧೋಗತಿಗೆ ತಂದು ನಷ್ಟಕ್ಕೆ… https://t.co/LmYm7xBEsM

— Ramalinga Reddy (@RLR_BTM) March 26, 2025

ತಮ್ಮ ಪಕ್ಷದ ಆಡಳಿತದ ಅವಧಿಯಲ್ಲಿ ಬಿ.ಎಂ.ಟಿ.ಸಿ‌ ಹೊರತುಪಡಿಸಿ, ಇತರೆ ಸಾರಿಗೆ ಸಂಸ್ಥೆಗಳಲ್ಲಿ‌ ಒಂದೇ ಒಂದು ಹೊಸ ಬಸ್ ಸೇರ್ಪಡೆ ಆಗಿಲ್ಲ. ಒಂದೇ‌ ಒಂದು ನೇಮಕಾತಿ ಮಾಡಿಲ್ಲ. ಡಕೋಟ ಬಸ್ ದಯಪಾಲಿಸಿರುವ ಕೀರ್ತಿ ತಮ್ಮ ಬಿ.ಜೆ‌ಪಿ ಆಡಳಿತಕ್ಕೆ‌ ಸಲ್ಲಬೇಕು. ತಮ್ಮ‌ ಬಿ.ಜೆ.ಪಿ ಪಕ್ಷದ ಆಡಳಿತದ ಅವಧಿಯಲ್ಲಿ, ಬಿ.ಎಂ.ಟಿ.ಸಿ ಯಲ್ಲಿ ಕಾರ್ಯಾಚರಣೆಗೊಳಿಸಿ ಹಳೆಯದಾದ 100 ಬಸ್ಸುಗಳನ್ನು 2022 ರಲ್ಲಿ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯವರಿಗೆ ಕಳುಹಿಸಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಭಾಗದಲ್ಲಿ ಓಡಿಸಿದ್ದು ಮರೆತಿದೆಯೇ ಬೆಲ್ಲದ್ ಅವರೇ? ಎಂದು ಪ್ರಶ್ನಿಸಿದ್ದಾರೆ.

ನಮ್ಮ ಎರಡು ವರ್ಷಕ್ಕೂ ಕಡಿಮೆ ಆಡಳಿತ ಅವಧಿಯಲ್ಲಿ 4956 ಹೊಸ‌ ಬಸ್ಸುಗಳನ್ನು ಸೇರ್ಪಡೆ ಮಾಡಲಾಗಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 856 ಹೊಸ ಬಸ್ಸುಗಳು ,ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 1023 ಹೊಸ ಬಸ್ಸುಗಳನ್ನು ಅಮೋಘವರ್ಷ, ಕಲ್ಯಾಣ ರಥ ಎಂಬ ವಿವಿಧ ಮಾದರಿ ಹಾಗೂ ಹೆಸರಿನಲ್ಲಿ ಕಳೆದ ಎರಡು ವರ್ಷದಲ್ಲಿ ಸೇರ್ಪಡೆಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ನೇಮಕಾತಿ ಸ್ಥಗಿತಗೊಳಿಸಿದ್ದ ತಮ್ಮ‌ ಪಕ್ಷವು, ನಾವು ಅಧಿಕಾರಕ್ಮೆ‌ಬಂದ ಕೂಡಲೇ ಸಾರಿಗೆ ಸಂಸ್ಥೆಗಳಲ್ಲಿ 9000 ಹುದ್ದೆಗಳ ನೇಮಕಾತಿಗೆ ಅನುಮತಿ ನೀಡಿದ್ದು, 2300 ಹುದ್ದೆಗಳಿಗೆ ಈಗಾಗಲೇ ಆದೇಶ ಪತ್ರ ನೀಡಲಾಗಿದ್ದು, 6500 ಹುದ್ದೆಗಳ ನೇಮಕಾತಿ ಪ್ರಗತಿಯಲ್ಲಿದೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ 1609 ಚಾಲಕ/ ನಿರ್ವಾಹಕರಿಗೆ ನೇಮಕಾತಿ ಆದೇಶ ನೀಡಲಾಗಿದ್ದು, ವಾಯವ್ಯ ರಸ್ತೆ ಸಾರಿಗೆ ನಿಗಮದಲ್ಲಿ 2000 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿದೆ ಎಂದಿದ್ದಾರೆ.

ಸಾರಿಗೆ ಸಂಸ್ಥೆಗಳಲ್ಲಿ ಕಳೆದ ಎರಡು ವರ್ಷದಲ್ಲಿ, 1000 ಅನುಕಂಪದ ಆಧಾರದ ನೇಮಕಾತಿ ಮಾಡಲಾಗಿದ್ದು, ಇದರಲ್ಲಿ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 223, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 207 ಅವಲಂಬಿತರಿಗೆ ಹುದ್ದೆ ನೀಡಲಾಗಿದೆ. ಮುಖ್ಯಮಂತ್ರಿಗಳು ಘೋಷಿಸಿರುವ 2000 ಹೊಸ ಬಸ್ಸುಗಳ ಸೇರ್ಪಡೆ ಕೂಡ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳನ್ನು ಒಳಗೊಂಡಂತೆ ಎಂಬುದು‌ ತಮಗೆ ತಿಳಿಯದಿರುವುದು ನಿಜಕ್ಕೂ ವಿಷಾದನೀಯ ಎಂಬುದಾಗಿ ಹೇಳಿದ್ದಾರೆ.

BREAKING NEWS: ರಾಜ್ಯದ ಸಚಿವರಿಗೆ ಹನಿಟ್ರ್ಯಾಪ್ ಕೇಸ್: ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

BIG NEWS : ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ, ರಾಜ್ಯದ 224 ಶಾಸಕರ ಪೈಕಿ ನಾನು ಒಬ್ಬ : ಶಾಸಕ ಶಿವರಾಂ ಹೆಬ್ಬಾರ್

Share. Facebook Twitter LinkedIn WhatsApp Email

Related Posts

ಸೋಲಿಸಲು ಬಂದವರ ನಡುವೆ ಸದ್ದಿಲ್ಲದೇ ಗೆದ್ದು ಮಾರಿಗುಡಿ ಖಜಾಂಚಿಯಾದ ವಿ.ಶಂಕರ್; ಸಾಗರ ಜನರ ಪ್ರೀತಿಯೇ ನನ್ನ ಶ್ರೀರಕ್ಷೆ ಎಂದು ಕೃತಜ್ಞತೆ

29/03/2026 12:06 AM2 Mins Read

ಹಿರಿಯರ ಆದರ್ಶದ ಹಾದಿಯಲ್ಲಿ ಮಾರಿಕಾಂಬಾ ತಾಯಿ ಸೇವೆ ಮಾಡಿ: ನೂತನ ಸಮಿತಿಗೆ ಹರತಾಳು ಹಾಲಪ್ಪ ಕಿವಿಮಾತು

28/03/2026 10:10 PM1 Min Read

ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ವಿಯಾಗಿ ಮುನ್ನಡೆಯಬೇಕು: MLC ಬಲ್ಕಿಶ್ ಬಾನು

28/03/2026 9:46 PM2 Mins Read
Recent News

ಸೋಲಿಸಲು ಬಂದವರ ನಡುವೆ ಸದ್ದಿಲ್ಲದೇ ಗೆದ್ದು ಮಾರಿಗುಡಿ ಖಜಾಂಚಿಯಾದ ವಿ.ಶಂಕರ್; ಸಾಗರ ಜನರ ಪ್ರೀತಿಯೇ ನನ್ನ ಶ್ರೀರಕ್ಷೆ ಎಂದು ಕೃತಜ್ಞತೆ

29/03/2026 12:06 AM

ಹಿರಿಯರ ಆದರ್ಶದ ಹಾದಿಯಲ್ಲಿ ಮಾರಿಕಾಂಬಾ ತಾಯಿ ಸೇವೆ ಮಾಡಿ: ನೂತನ ಸಮಿತಿಗೆ ಹರತಾಳು ಹಾಲಪ್ಪ ಕಿವಿಮಾತು

28/03/2026 10:10 PM
liver

ನಿಶ್ಶಬ್ದವಾಗಿ ನಿಮ್ಮ ‘ಲಿವರ್’ ಕೊಲ್ಲುವ 3 ಆಹಾರಗಳಿವು ; ವೈದ್ಯರ ಎಚ್ಚರಿಕೆ!

28/03/2026 10:01 PM

‘ಮುಖೇಶ್ ಅಂಬಾನಿ’ ಮನೆಯಲ್ಲಿ ಒಂದೇ ಒಂದು ‘AC’ ಕೂಡ ಇಲ್ಲ ; ಯಾಕೆ ಗೊತ್ತಾ?

28/03/2026 9:47 PM
State News
KARNATAKA

ಸೋಲಿಸಲು ಬಂದವರ ನಡುವೆ ಸದ್ದಿಲ್ಲದೇ ಗೆದ್ದು ಮಾರಿಗುಡಿ ಖಜಾಂಚಿಯಾದ ವಿ.ಶಂಕರ್; ಸಾಗರ ಜನರ ಪ್ರೀತಿಯೇ ನನ್ನ ಶ್ರೀರಕ್ಷೆ ಎಂದು ಕೃತಜ್ಞತೆ

By kannadanewsnow0929/03/2026 12:06 AM KARNATAKA 2 Mins Read

ಶಿವಮೊಗ್ಗ: ಜೀವನವೆಂಬುದು ಎಲ್ಲರಿಗೂ ಹೂವಿನ ಹಾಸಿಗೆಯಲ್ಲ. ಕೆಲವರಿಗೆ ಅದು ಸುಡುವ ಕೆಂಡದ ಹಾದಿ. ಆ ಕೆಂಡದ ಮೇಲೆ ನಡೆದು, ಸವಾಲುಗಳನ್ನು…

ಹಿರಿಯರ ಆದರ್ಶದ ಹಾದಿಯಲ್ಲಿ ಮಾರಿಕಾಂಬಾ ತಾಯಿ ಸೇವೆ ಮಾಡಿ: ನೂತನ ಸಮಿತಿಗೆ ಹರತಾಳು ಹಾಲಪ್ಪ ಕಿವಿಮಾತು

28/03/2026 10:10 PM

ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ವಿಯಾಗಿ ಮುನ್ನಡೆಯಬೇಕು: MLC ಬಲ್ಕಿಶ್ ಬಾನು

28/03/2026 9:46 PM

ಬೀದರ್ ನಲ್ಲಿ 40ನೇ ರಾಜ್ಯ ಪತ್ರಕರ್ತರ ಸಮ್ಮೇಳ: ಪೂರ್ವಭಾವಿ ಸಿದ್ಧತಾ ಸಭೆ ನಡೆಸಿದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ

28/03/2026 9:40 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.