Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಶಾಸಕ ಭೈರತಿ ಬಸವರಾಜ್ ಗೆ ಹೃದಯ ಸಮಸ್ಯೆ : ಜಯದೇವ ಆಸ್ಪತ್ರೆಗೆ ದಾಖಲು!

14/02/2026 5:22 AM

BREAKING : ಬ್ಯಾಡಗಿ ಶಾಸಕ ಬಸವರಾಜ್ ಶಿವಣ್ಣನವರ್ ಗೆ ‘ಲಘು ಹೃದಯಾಘಾತ’ : 2 ಸ್ಟಂಟ್ ಅಳವಡಿಕೆ!

14/02/2026 5:15 AM

ಯಾವುದೇ ಕದ್ದು ವಸ್ತುಗಳಿರಲಿ ಪೊಲೀಸರು ಕೇಳಿದಾಗ ಒಪ್ಪಿಸಲೇಬೇಕು ನಿರಾಕರಿಸುವ ಹಕ್ಕಿಲ್ಲ : ಹೈಕೋರ್ಟ್ ಆದೇಶ

14/02/2026 5:06 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರೈತರೇ ಗಮನಿಸಿ : ಈ ಸಂಖ್ಯೆಗೆ ಕರೆ ಮಾಡಿ ಸಂಚಾರಿ ಪಶು ಚಿಕಿತ್ಸಾ ಘಟಕಗಳ ಸದುಪಯೋಗ ಪಡೆದುಕೊಳ್ಳಿ.!
KARNATAKA

ರೈತರೇ ಗಮನಿಸಿ : ಈ ಸಂಖ್ಯೆಗೆ ಕರೆ ಮಾಡಿ ಸಂಚಾರಿ ಪಶು ಚಿಕಿತ್ಸಾ ಘಟಕಗಳ ಸದುಪಯೋಗ ಪಡೆದುಕೊಳ್ಳಿ.!

By kannadanewsnow5711/03/2025 7:11 AM

ಗ್ರಾಮೀಣ ಪ್ರದೇಶಗಳು, ಗುಡ್ಡಗಾಡು ಸ್ಥಳಗಳು ಹಾಗೂ ಕಟ್ಟಕಡೆಯ ಗಡಿಭಾಗದ ಪ್ರದೇಶಗಳ ರೈತರ ಅನುಕೂಲಕ್ಕಾಗಿಯೇ ಸರ್ಕಾರ ಸಂಚಾರಿ ಪಶು ಚಿಕಿತ್ಸಾ ಘಟಕಗಳನ್ನು ಒದಗಿಸಿದ್ದು, ಜಿಲ್ಲೆಯ ಜಾನುವಾರು ಸಾಕಾಣಿಕೆದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ ಸಂಚಾರಿ ಪಶು ಚಿಕಿತ್ಸಾ ಘಟಕಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತುರ್ತು ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳ ಹಾಗೂ ಗುಡ್ಡಗಾಡು ಸ್ಥಳಗಳಲ್ಲಿನ ಜಾನುವಾರು ಸಾಕಾಣಿಕೆದಾರರ ಅನುಕೂಲಕ್ಕೆಂದೇ ಸರ್ಕಾರ ಸಂಚಾರಿ ಪಶು ಚಿಕಿತ್ಸಾ ಘಟಕಗಳನ್ನು ಪ್ರಾರಂಭಿಸಿ, ಇದಕ್ಕಾಗಿಯೇ ಜಿಲ್ಲೆಯಲ್ಲಿ ಒಟ್ಟು 09 ವಾಹನ ಗಳನ್ನು ಒದಗಿಸಿದ್ದು, ಪ್ರತಿ ವಾಹನವು ಒಬ್ಬರು ಪಶು ವೈದ್ಯರು, ಹಾಗೂ ಅಗತ್ಯ ಔಷಧಿಗಳನ್ನು ಹೊಂದಿದೆ.

ಜಿಲ್ಲೆಯಲ್ಲಿ ಚಳ್ಳಕೆರೆ ತಾಲ್ಲೂಕಿನಲ್ಲಿ 02, ಹಿರಿಯೂರು-02, ಹೊಸದುರ್ಗ-02, ಚಿತ್ರದುರ್ಗ-01, ಹೊಳಲ್ಕೆರೆ-01 ಹಾಗೂ ಹೊಸದುರ್ಗ ತಾಲ್ಲೂಕಿನಲ್ಲಿ 01 ಸಂಚಾರಿ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಸಂಚಾರಿ ಪಶು ಚಿಕಿತ್ಸಾ ಘಟಕಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಕ್ಷೇತ್ರಮಟ್ಟದಲ್ಲಿ ಅನುಷ್ಠಾನಗೊಳಿಸಲು ಕ್ರಮವಹಿಸಬೇಕು. ಸಂಚಾರಿ ಕುರಿಗಾಹಿಗಳು, ಗುಡ್ಡಗಾಡಿನಲ್ಲಿ, ಗಡಿಭಾಗದಲ್ಲಿರುವ ಜಾನುವಾರು ಸಾಕಾಣಿಕೆದಾರರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಸಹಾಯವಾಣಿಗೆ ಕರೆ ಮಾಡಿದಲ್ಲಿ ಕೂಡಲೆ ಸ್ಪಂದಿಸುವ ಕೆಲಸ ಆಗಬೇಕು, ಕರೆ ಮಾಡಿದರೂ ಬಂದು ಚಿಕಿತ್ಸೆ ಕೊಡುತ್ತಿಲ್ಲ ಎಂಬ ಯಾವುದೇ ದೂರುಗಳು ಬರಬಾರದು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ರೈತರು ಮತ್ತು ಜಾನುವಾರುಗಳ ಮಾಲೀಕರು ರೋಗಗಳಿಂದ ಬಳಲುತ್ತಿರುವ ಪ್ರಾಣಿಗಳಿಗೆ ಚಿಕಿತ್ಸೆಗೆ ಅನುಕೂಲವಾಗುವಂತೆ ಸಹಾಯವಾಣಿ ಸಂಖ್ಯೆ 1962 ಗೆ ಕರೆ ಮಾಡುವ ಮೂಲಕ ಸಂಚಾರಿ ಪಶು ಚಿಕಿತ್ಸಾಲಯದ ಸೇವೆಯನ್ನು ಬಳಸಿಕೊಂಡು ಮನೆ ಬಾಗಿಲಿನಲ್ಲೇ ಚಿಕಿತ್ಸೆಯ ಸದುಪಯೋಗ ಪಡೆದುಕೊಳ್ಳಬಹುದು ಎಂದು ಹೇಳಿದರು.

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರು ಆಯಾ ತಾಲ್ಲೂಕು ವ್ಯಾಪ್ತಿಯಲ್ಲಿ ಹಾಗೂ ಗ್ರಾಮ ಪಂಚಾಯಿತಿವಾರು ಸಂಚಾರಿ ಪಶು ಚಿಕಿತ್ಸಾ ಘಟಕದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಸಂಚಾರಿ ಕುರಿಗಾಹಿಗಳು ಸಹ ಇದರ ಸದುಪಯೋಗ ಪಡೆದುಕೊಳ್ಳುವಂತೆ ಕ್ರಮವಹಿಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ 9 ಸಂಚಾರಿ ಪಶು ಚಿಕಿತ್ಸಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಸಂಚಾರಿ ಪಶು ಚಿಕಿತ್ಸಾ ವಾಹನಗಳಲ್ಲಿ (ಅಂಬುಲೆನ್ಸ್) ಏಜೆನ್ಸಿಯವರಿಂದ ನೇಮಕಗೊಂಡ ಪಶುವೈದ್ಯಾಧಿಕಾರಿಗಳು, ಸಹಾಯಕರು ಹಾಗೂ ವಾಹನ ಚಾಲಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಂಚಾರಿ ಘಟಕಗಳು ಭಾನುವಾರದಂದೂ ಕೂಡ ಕಾರ್ಯ ನಿರ್ವಹಿಸುತ್ತವೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಕುಮಾರ್ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಂದ್ರಶೇಖರ್ ಕಂಬಾಳಿಮಠ, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ.ಕಾಳೇಸಿಂಘೆ, ಸೇರಿದಂತೆ ಪಶುಪಾಲನಾ ಮತ್ತು ಪಶೈವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

Attention farmers: Call this number and take advantage of mobile veterinary treatment units!
Share. Facebook Twitter LinkedIn WhatsApp Email

Related Posts

BIG NEWS : ಶಾಸಕ ಭೈರತಿ ಬಸವರಾಜ್ ಗೆ ಹೃದಯ ಸಮಸ್ಯೆ : ಜಯದೇವ ಆಸ್ಪತ್ರೆಗೆ ದಾಖಲು!

14/02/2026 5:22 AM1 Min Read

BREAKING : ಬ್ಯಾಡಗಿ ಶಾಸಕ ಬಸವರಾಜ್ ಶಿವಣ್ಣನವರ್ ಗೆ ‘ಲಘು ಹೃದಯಾಘಾತ’ : 2 ಸ್ಟಂಟ್ ಅಳವಡಿಕೆ!

14/02/2026 5:15 AM1 Min Read

ಯಾವುದೇ ಕದ್ದು ವಸ್ತುಗಳಿರಲಿ ಪೊಲೀಸರು ಕೇಳಿದಾಗ ಒಪ್ಪಿಸಲೇಬೇಕು ನಿರಾಕರಿಸುವ ಹಕ್ಕಿಲ್ಲ : ಹೈಕೋರ್ಟ್ ಆದೇಶ

14/02/2026 5:06 AM2 Mins Read
Recent News

BIG NEWS : ಶಾಸಕ ಭೈರತಿ ಬಸವರಾಜ್ ಗೆ ಹೃದಯ ಸಮಸ್ಯೆ : ಜಯದೇವ ಆಸ್ಪತ್ರೆಗೆ ದಾಖಲು!

14/02/2026 5:22 AM

BREAKING : ಬ್ಯಾಡಗಿ ಶಾಸಕ ಬಸವರಾಜ್ ಶಿವಣ್ಣನವರ್ ಗೆ ‘ಲಘು ಹೃದಯಾಘಾತ’ : 2 ಸ್ಟಂಟ್ ಅಳವಡಿಕೆ!

14/02/2026 5:15 AM

ಯಾವುದೇ ಕದ್ದು ವಸ್ತುಗಳಿರಲಿ ಪೊಲೀಸರು ಕೇಳಿದಾಗ ಒಪ್ಪಿಸಲೇಬೇಕು ನಿರಾಕರಿಸುವ ಹಕ್ಕಿಲ್ಲ : ಹೈಕೋರ್ಟ್ ಆದೇಶ

14/02/2026 5:06 AM

127 ಕೋಟಿ ವೆಚ್ಚದಲ್ಲಿ ಶಿಂಷಾ ಎಡ ದಂಡೆಯ ಕೆರೆ, ನಾಲೆಗಳ ಆಧುನೀಕರಣ: ಮದ್ದೂರು ಶಾಸಕ ಕೆ.ಎಂ.ಉದಯ್

13/02/2026 10:43 PM
State News
KARNATAKA

BIG NEWS : ಶಾಸಕ ಭೈರತಿ ಬಸವರಾಜ್ ಗೆ ಹೃದಯ ಸಮಸ್ಯೆ : ಜಯದೇವ ಆಸ್ಪತ್ರೆಗೆ ದಾಖಲು!

By kannadanewsnow0514/02/2026 5:22 AM KARNATAKA 1 Min Read

ಬೆಂಗಳೂರು : ನ್ಯಾಯಾಲಯದ ಸೂಚನೆ ಹಿನ್ನೆಲೆಯಲ್ಲಿ ಹೃದಯ ಸಮಸ್ಯೆ ಕಾಣಿಸಿಕೊಂಡ ಸಂಬಂಧ ಭಾರತಿ ನಗರದ ರೌಡಿ ಶಿವಪ್ರಕಾಶ್ ಆಲಿಯಾಸ್ ಬಿಕ್ಷು…

BREAKING : ಬ್ಯಾಡಗಿ ಶಾಸಕ ಬಸವರಾಜ್ ಶಿವಣ್ಣನವರ್ ಗೆ ‘ಲಘು ಹೃದಯಾಘಾತ’ : 2 ಸ್ಟಂಟ್ ಅಳವಡಿಕೆ!

14/02/2026 5:15 AM

ಯಾವುದೇ ಕದ್ದು ವಸ್ತುಗಳಿರಲಿ ಪೊಲೀಸರು ಕೇಳಿದಾಗ ಒಪ್ಪಿಸಲೇಬೇಕು ನಿರಾಕರಿಸುವ ಹಕ್ಕಿಲ್ಲ : ಹೈಕೋರ್ಟ್ ಆದೇಶ

14/02/2026 5:06 AM

127 ಕೋಟಿ ವೆಚ್ಚದಲ್ಲಿ ಶಿಂಷಾ ಎಡ ದಂಡೆಯ ಕೆರೆ, ನಾಲೆಗಳ ಆಧುನೀಕರಣ: ಮದ್ದೂರು ಶಾಸಕ ಕೆ.ಎಂ.ಉದಯ್

13/02/2026 10:43 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.