Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಕೆಂಪೇಗೌಡ ಏರ್ಪೋರ್ಟ್ ನಲ್ಲಿ 39.37 ಲಕ್ಷ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಜಪ್ತಿ : ಓರ್ವ ಅರೆಸ್ಟ್!

16/03/2026 3:45 PM

ವಿದ್ಯಾರ್ಥಿಗಳೇ ಭಯ ಬಿಟ್ಟು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ: ಮದ್ದೂರು ಬಿಇಓ ಧನಂಜಯ

16/03/2026 3:35 PM

BIG NEWS: ಸಾಗರದ ಲಿಂಗದಹಳ್ಳಿ ಬಳಿಯಲ್ಲಿ ‘ಲೇಔಟ್’ ಹೆಸರಲ್ಲಿ ‘ಮರಗಳ ಮಾರಣಹೋಮ’

16/03/2026 3:32 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಸಾಲಗಾರರಿಗೆ ಕಿರುಕುಳ, ಮಾನಸಿಕ ಒತ್ತಡ ನೀಡಿದ್ರೆ `ಸುಮೋಟೋ ಕೇಸ್’ : ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳಿಗೆ ಎಚ್ಚರಿಕೆ.!
KARNATAKA

BIG NEWS : ಸಾಲಗಾರರಿಗೆ ಕಿರುಕುಳ, ಮಾನಸಿಕ ಒತ್ತಡ ನೀಡಿದ್ರೆ `ಸುಮೋಟೋ ಕೇಸ್’ : ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳಿಗೆ ಎಚ್ಚರಿಕೆ.!

By kannadanewsnow5722/02/2025 10:38 AM

ದಾವಣಗೆರೆ : ಆರ್ಥಿಕಾಭಿವೃದ್ದಿಗೆ ಮೈಕ್ರೋ ಫೈನಾನ್ಸ್, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಮತ್ತು ಲೇವಾದೇವಿ, ಗಿರಿವಿದಾರರ ಕೊಡುಗೆ ಇದ್ದು ನಿಯಮಬದ್ದವಾಗಿ ವ್ಯವಹಾರ ಮಾಡಿ, ಆದರೆ ಸಾಲಕಟ್ಟಿಸಿಕೊಳ್ಳುವಾಗ ಬಲವಂತದ ಕ್ರಮಕ್ಕೆ ಮುಂದಾಗದೇ ನಿಯಮಬದ್ದವಾಗಿ ವ್ಯವಹರಿಸಬೇಕೆಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸೂಚನೆ ನೀಡಿದರು.

ಅವರು ಶುಕ್ರವಾರ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ನಡೆದ ಮೈಕ್ರೋ ಫೈನಾನ್ಸ್, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಮತ್ತು ಲೇವಾದೇವಿ ಹಾಗೂ ಗಿರಿವಿದಾರರೊಂದಿಗೆ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಫೈನಾನ್ಸ್ ಮತ್ತು ಎನ್ ಬಿಎಫ್‍ಸಿ ಹಣಕಾಸು ಸಂಸ್ಥೆಯವರು ಗ್ರಾಮಾಂತರ ಪ್ರದೇಶ ಸೇರಿದಂತೆ ನಗರ ಪ್ರದೇಶದಲ್ಲಿ ಸಾಲವನ್ನು ನೀಡಿವೆ. ಆದರೆ ಸಾಲ ವಸೂಲಾತಿಯಲ್ಲಿ ನಿಯಮ ಮೀರಿ ಘಾಸಿಯಾಗುವಂತೆ ವಸೂಲಾತಿ ಮಾಡಿದ್ದರಿಂದ ಮನಃನೊಂದು ಆತ್ಮಹತ್ಯೆ ಪ್ರಕರಣಗಳು ರಾಜ್ಯದಲ್ಲಿ ಕಂಡು ಬಂದಿದ್ದರಿಂದ ಅಮಾನವೀಯ ಕ್ರಮಗಳ ನಿಯಂತ್ರಣಕ್ಕಾಗಿ ಸರ್ಕಾರ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಿದೆ.

ಕಾಯ್ದೆಯನ್ವಯ ಎಲ್ಲಾ ಹಣಕಾಸು ಸಂಸ್ಥೆಯವರು ಮಾರ್ಚ್ 12 ರೊಳಗಾಗಿ ಆಯಾ ಜಿಲ್ಲಾಧಿಕಾರಿಗಳಿಂದ ನೊಂದಣಿ ಮಾಡಿಸಿಕೊಂಡು ನಿಯಮಬದ್ದವಾಗಿ ವ್ಯವಹಾರ ಮಾಡಲು ಆದೇಶ ಮಾಡಲಾಗಿದೆ. ಈ ಸುಗ್ರೀವಾಜ್ಞೆ ಎಲ್ಲಾ ಫೈನಾನ್ಸ್ ಸಂಸ್ಥೆಯವರಿಗೆ ಮಾಹಿತಿ ಇದ್ದು ನೊಂದಣಿಗೆ ಮುಂದಾಗಬೇಕೆಂದು ಸೂಚನೆ ನೀಡಿದರು.

ಹೊಸ ಕಾಯ್ದೆಯಡಿ ಸಾಲ ನೀಡಿಕೆಯ ಎಲ್ಲಾ ಒಡಂಬಡಿಕೆ ಪತ್ರಗಳನ್ನು ಸ್ಥಳೀಯ ಭಾಷೆ ಕನ್ನಡದಲ್ಲಿ ಮುದ್ರಣ ಮಾಡಿ ಎಲ್ಲಾ ಷರತ್ತುಗಳ ಸಂಪೂರ್ಣ ವಿವರ ಸಾಲ ಪಡೆಯುವವರಿಗೆ ಮಾಹಿತಿ ನೀಡಬೇಕು. ಸಾಮಥ್ರ್ಯವನ್ನಾಧರಿಸಿ ಸಾಲ ನೀಡಬೇಕು, ಫೈನಾನ್ಸ್ ನವರು ಯಾವುದೇ ಅಡಮಾನಗಳನ್ನು ಪಡೆಯದೇ ಸಾಲ ನೀಡಬೇಕು, ಸಾಲ ಪಡೆಯುವಾಗ ಅನೇಕ ಸಹಿಯನ್ನು ಪಡೆಯುವುದು, ಸಾಲ ತೀರಿಸಿದ್ದರೂ ಇನ್ನೂ ಕಂತುಗಳು ಬಾಕಿ ಇವೆ, ಸಾಲ ಕಟ್ಟದಿದ್ದಾಗ ಅವರ ಮನೆ ಬಾಗಿಲಿಗೆ ತೆರಳಿ ಅವಾಚ್ಯ ಶಬ್ದಗಳಿಂದ ನಿಂದಿಸುವುದು ಕಾನೂನಿನಲ್ಲಿ ಅವಕಾಶ ಇಲ್ಲ ಎಂದರು.

ನಾನ್ ಬ್ಯಾಂಕಿಂಗ್ ಹಣಕಾಸು ಸಂಸ್ಥೆಯವರು ವಾಹನಗಳ ಮೇಲೆ ಸಾಲ ನೀಡಿ ಅವರು ಒಂದು ಕಂತು ಕಟ್ಟಲು ವಿಫಲವಾದರೂ ವಾಹನ ವಶಕ್ಕೆ ಪಡೆದು ಬೇರೆಯವರಿಗೆ ಮಾರಾಟ ಮಾಡಿರುವ ಅನೇಕ ಪ್ರಕರಣಗಳಿವೆ. ಆದರೆ ಯಾವುದೇ ಸಂಸ್ಥೆಗಳಿಗೆ ಸೀಜ್ ಮಾಡುವ ಅಧಿಕಾರ ಇಲ್ಲ, ನ್ಯಾಯಾಲಯದ ಮೂಲಕ ಮುಟ್ಟುಗೋಲಿಗೆ ಆದೇಶ ಪಡೆದ ನಂತರವೇ ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಿ ಹರಾಜು ಮೂಲಕ ವಿಲೆ ಮಾಡಬಹುದು. ಓರ್ವ ಸಂಸ್ಥೆ ಟ್ರ್ಯಾಕ್ಟರ್‍ಗೆ ಸಾಲ ನೀಡಿದ್ದು ರೈತ 7 ಲಕ್ಷದಲ್ಲಿ 5 ಲಕ್ಷ ಸಾಲವನ್ನು ಮರುಪಾವತಿಸಿದ್ದರೂ ಅದನ್ನು ವಶಕ್ಕೆ ಪಡೆದು ಬೇರೆಯವರಿಗೆ ಮಾರಾಟ ಮಾಡಿದ ಪ್ರಕರಣ ದಾವಣಗೆರೆಯಲ್ಲಿ ಕಂಡುಬಂದಿದೆ. ಆ ಸಂಸ್ಥೆಯಿಂದಲೇ ರೈತನಿಗೆ ಟ್ರ್ಯಾಕ್ಟರ್ ಕೊಡಿಸುವ ಕೆಲಸವನ್ನು ಮಾಡಲಾಗುತ್ತದೆ ಎಂದ ಅವರು ಯಾವುದೇ ಹಣಕಾಸು ಸಂಸ್ಥೆಯಾಗಿರಲಿ, ಈ ಜಿಲ್ಲೆಯಲ್ಲಿ ವ್ಯವಹರಿಸುತ್ತಿದ್ದಲ್ಲಿ ಪ್ರಾದೇಶಿಕ ಕಚೇರಿ ಹೊಂದುವುದು ಕಡ್ಡಾಯವಾಗಿದೆ ಎಂದರು.

ಸಾಲಗಾರರಿಗೆ ಕಿರುಕುಳ, ಮಾನಸಿಕ ಒತ್ತಡ ನೀಡಿದಲ್ಲಿ ಪೊಲೀಸ್ ಉಪ ಅಧೀಕ್ಷಕರ ಮೂಲಕ ಸುಮೋಟೋ ಪ್ರಕರಣ ದಾಖಲಿಸುವ ಅಧಿಕಾರ ಕಾಯಿದೆಯಲ್ಲಿದೆ. ತಪ್ಪಿತಸ್ಥರೆಂದು ಕಂಡುಬಂದಲ್ಲಿ 10 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ದಂಡವಿರುತ್ತದೆ. ಒಂದು ವೇಳೆ ಸಾಲ ವಸೂಲಾತಿಯಾಗುತ್ತಿಲ್ಲವೆಂದರೆ ಅದನ್ನು ಸಂಸ್ಥೆಯ ಕಾನೂನು ಚೌಕಟ್ಟಿನಲ್ಲಿ ವಸೂಲಾತಿಗೆ ಕ್ರಮ ವಹಿಸಬೇಕು, ಮಾನಸಿಕ, ದೈಹಿಕ ಹಿಂಸೆಗೆ ಅವಕಾಶವಿಲ್ಲ ಎಂದರು.

ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಮಾತನಾಡಿ ಸುಗ್ರೀವಾಜ್ಞೆಯಲ್ಲಿ ಬಹಳ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿದೆ. ನಿಯಮಬದ್ದ ಹಾಗೂ ಪಾರದರ್ಶಕವಾಗಿ ವ್ಯವಹಾರ ಮಾಡಲು ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ ನಿಯಮ ಮೀರಿ ವಸೂಲಾತಿ ಕ್ರಮ ಕೈಗೊಳ್ಳುವಂತಿಲ್ಲ, ಹೊಸ ಕಾನೂನಿನ ಅವಕಾಶಗಳ ದುರ್ಬಳಕೆ ಮಾಡಿಕೊಂಡಲ್ಲಿ ಫೈನಾನ್ಸ್ ಸಂಸ್ಥೆಯವರು ಸಹ ಹತ್ತಿರದ ಠಾಣೆಗೆ ಮಾಹಿತಿ ನೀಡಬಹುದಾಗಿದೆ ಎಂದರು.
ಸಭೆಯಲ್ಲಿ ಸಹಕಾರ ಸಂಘಗಳ ಉಪನಿಬಂಧಕರಾದ ಮಧು ಶ್ರೀನಿವಾಸ್ ಲೇವಾದೇವಿ, ಗಿರಿವಿದಾರರ ಮತ್ತು ಚಿಟ್ಸ್ ಫಂಡ್‍ಗಳ ವ್ಯವಹಾರದ ಬಗ್ಗೆ ಮತ್ತು ನಿಯಮಗಳ ಬಗ್ಗೆ ಮಾತನಾಡಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಎಂ.ಸಂತೋಷ್, ಮಂಜುನಾಥ್ ಹಾಗೂ ಫೈನಾನ್ಸ್ ಸಂಸ್ಥೆಯವರು ಉಪಸ್ಥಿತರಿದ್ದರು.

BIG NEWS: Microfinance staff warned of 'suo motu case' if borrowers are harassed mentally stressed
Share. Facebook Twitter LinkedIn WhatsApp Email

Related Posts

BREAKING : ಕೆಂಪೇಗೌಡ ಏರ್ಪೋರ್ಟ್ ನಲ್ಲಿ 39.37 ಲಕ್ಷ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಜಪ್ತಿ : ಓರ್ವ ಅರೆಸ್ಟ್!

16/03/2026 3:45 PM1 Min Read

ವಿದ್ಯಾರ್ಥಿಗಳೇ ಭಯ ಬಿಟ್ಟು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ: ಮದ್ದೂರು ಬಿಇಓ ಧನಂಜಯ

16/03/2026 3:35 PM2 Mins Read

BIG NEWS: ಸಾಗರದ ಲಿಂಗದಹಳ್ಳಿ ಬಳಿಯಲ್ಲಿ ‘ಲೇಔಟ್’ ಹೆಸರಲ್ಲಿ ‘ಮರಗಳ ಮಾರಣಹೋಮ’

16/03/2026 3:32 PM3 Mins Read
Recent News

BREAKING : ಕೆಂಪೇಗೌಡ ಏರ್ಪೋರ್ಟ್ ನಲ್ಲಿ 39.37 ಲಕ್ಷ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಜಪ್ತಿ : ಓರ್ವ ಅರೆಸ್ಟ್!

16/03/2026 3:45 PM

ವಿದ್ಯಾರ್ಥಿಗಳೇ ಭಯ ಬಿಟ್ಟು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ: ಮದ್ದೂರು ಬಿಇಓ ಧನಂಜಯ

16/03/2026 3:35 PM

BIG NEWS: ಸಾಗರದ ಲಿಂಗದಹಳ್ಳಿ ಬಳಿಯಲ್ಲಿ ‘ಲೇಔಟ್’ ಹೆಸರಲ್ಲಿ ‘ಮರಗಳ ಮಾರಣಹೋಮ’

16/03/2026 3:32 PM

BREAKING : ಸಿಲೆಂಡರ್ ಗ್ರಾಹಕರಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ : ‘PNG’ ಇದ್ದರೆ, ‘LPG’ ಸರೆಂಡರ್ ಮಾಡುವುದು ಕಡ್ಡಾಯ

16/03/2026 3:21 PM
State News
KARNATAKA

BREAKING : ಕೆಂಪೇಗೌಡ ಏರ್ಪೋರ್ಟ್ ನಲ್ಲಿ 39.37 ಲಕ್ಷ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಜಪ್ತಿ : ಓರ್ವ ಅರೆಸ್ಟ್!

By kannadanewsnow0516/03/2026 3:45 PM KARNATAKA 1 Min Read

ಬೆಂಗಳೂರು : ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 39.37 ಲಕ್ಷ ಮೌಲ್ಯದ ಗಾಂಜಾ ಜಪ್ತಿ…

ವಿದ್ಯಾರ್ಥಿಗಳೇ ಭಯ ಬಿಟ್ಟು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ: ಮದ್ದೂರು ಬಿಇಓ ಧನಂಜಯ

16/03/2026 3:35 PM

BIG NEWS: ಸಾಗರದ ಲಿಂಗದಹಳ್ಳಿ ಬಳಿಯಲ್ಲಿ ‘ಲೇಔಟ್’ ಹೆಸರಲ್ಲಿ ‘ಮರಗಳ ಮಾರಣಹೋಮ’

16/03/2026 3:32 PM

BREAKING: ಕನ್ನಡದ ಖ್ಯಾತ ಸಾಹಿತಿ ‘ಅಮರೇಶ ನುಗಡೋಣಿ’ಗೆ ‘ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’

16/03/2026 3:20 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.