ಧಾರವಾಡ : ಮುಡಾ ಹಗರಣಕ್ಕೆ ಸಂಬಂಧ ಪಟ್ಟಂತೆ ಇಂದು ಧಾರವಾಡ ಹೈಕೋರ್ಟ್ ಪೀಠದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ ಜಾರಿ ನಿರ್ದೇಶನಲಯ ಸಮಂತ್ ಚಾರಿ ಮಾಡಿದ್ದು ಈ ಒಂದು ಸಮಾಂತರದ್ದುಗೊಳಿಸುವಂತೆ ಸಿಎಂ ಪತ್ನಿ ಪಾರ್ವತಿ ಅವರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದೀಗ ಇಂದು ಧಾರವಾಡ ಹೈಕೋರ್ಟ್ ಪೀಠದಲ್ಲಿ ಸಿಎಂ ಪತ್ನಿ ಪಾರ್ವತಿ ಅವರ ರಿಟ್ ಅರ್ಜಿ ವಿಚಾರಣೆ ನಡೆಯಲಿದೆ.
ಹೌದು ಮುಡಾ ಕೇಸ್ ಕುರಿತು ಇಡಿ ಸಮನ್ಸ್ ನೀಡಿರುವ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ರಿಟ್ ಅರ್ಜಿ ಸಲ್ಲಿಸಿದ್ದರು. ಧಾರವಾಡದ ಹೈಕೋರ್ಟ್ ಪೀಠದಲ್ಲಿ ಇಂದು ಈ ಒಂದು ಅರ್ಜಿಯ ವಿಚಾರಣೆ ನಡೆಯಲಿದೆ ಸಚಿವ ಭೈರತಿ ಸುರೇಶ್ ಅರ್ಜಿಯೂ ಕೂಡ ಇಂದೇ ವಿಚಾರಣೆ ನಡೆಯಲಿದೆ.
ಮುಡಾ ಸೈಟ್ ಹಂಚಿಕೆ ಸಂಬಂಧ ಚಾರಿ ನಿರ್ದೇಶನಲಯ ಇಬ್ಬರಿಗೂ ಸಮನ್ಸ್ ನೀಡಿತ್ತು. ಇಡಿ ಸಮನ್ಸ್ ರದ್ದು ಕೋರಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ ಅರ್ಜಿ ಸಲ್ಲಿಸಿದರು. ಕಳೆದ ವಿಚಾರಣೆಯ ವೇಳೆ ಇಂದಿನವರೆಗೂ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ನ್ಯಾ ಎಂ ನಾಗಪ್ರಸನ್ನ ಅವರ ಪೀಠದಲ್ಲಿ ಇಂದು ಮತ್ತೆ ರಿಟ್ ಅರ್ಜಿ ವಿಚಾರಣೆ ನಡೆಯಲಿದೆ.