ಬಾಗಲಕೋಟೆ : ಬಾಗಲಕೋಟೆಯಲ್ಲಿ ಬೆಳ್ಳಂ ಬೆಳಿಗ್ಗೆ ಬೈಕ್, ಕಾರು, ಟಾಟಾಏಸ್ ನಡುವೆ ಭೀಕರವಾದಂತ ಸರಣಿ ಅಪಘಾತವಾಗಿದ್ದು, ಸ್ಥಳದಲ್ಲೇ ಮೂವರು ಸಾವನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರು ಬಳಿ ನಡೆದಿದೆ.
ಟಾಟಾ ಏಸ್ ವಾಹನ, ಕಾರು, 2 ಬೈಕ್ ಗಳ ನಡುವೆ ಡಿಕ್ಕಿ ಸಂಭವಿಸಿ ಘಟನೆಯಲ್ಲಿ ಬೈಕ್, ಕಾರು ಹಾಗೂ ಟಾಟಾ ಏಸ್ ನಲ್ಲಿದ್ದತಂಹ ಒಟ್ಟು ಮೂವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.ಅಪಘಾತದ ಕುರಿತು ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.