ಬೆಂಗಳೂರು : ಬೆಂಗಳೂರಲ್ಲಿ ಕಾವೇರಿ ನೀರಿನ ದರ ಹೆಚ್ಚಳ ಕುರಿತು ಇಂದು ಬಿಬಿಎಂಪಿ ಹಾಗು BWSSB ಅಧಿಕಾರಿಗಳ ಜೊತೆಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಭೆ ನಡೆಸಿದರು ಸಭೆಯಲ್ಲಿ ಕಾವೇರಿ ನೀರಿನ ದರ ಏರಿಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಈ ವಿಚಾರವಾಗಿ BWSSB ಅಧ್ಯಕ್ಷ ರಾಮ್ ಪ್ರಸಾತ್ ಅವರು ಇಡೀ ದೇಶದಲ್ಲಿ ಬೆಂಗಳೂರಲ್ಲೇ ನೀರಿನ ದರ ಕಡಿಮೆ ಇದೆ.ಜಲ ಮಂಡಳಿಗೆ ನಷ್ಟ ಆಗುತ್ತಿದೆ ಹಾಗಾಗಿ ದರ ಏರಿಕೆ ಅನಿವಾರ್ಯ ಎಂದು ತಿಳಿಸಿದರು.
ಡಿಸಿಎಂ ಡಿಕೆ ಶಿವಕುಮಾರ್ ಅವರ ಜೊತೆ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಡಿಯುವ ನೀರಿನ ಅದರ ಹೆಚ್ಚಳ ಅನಿವಾರ್ಯ ಎಂದು ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಮನವರಿಕೆ ಮಾಡಿದ್ದೇವೆ. ಡಿಸಿಎಂ ಡಿಕೆ ಶಿವಕುಮಾರ್ ಜೊತೆ ಸಭೆಯ ಬಳಿಕ BWSSB ಚೇರ್ಮನ್ ಡಾ.ರಾಮಪ್ರಸಾತ್ ಮನೋಹರ್ ಅವರು ಹೇಳಿಕೆ ನೀಡಿದರು.
ಜಲ ಮಂಡಳಿಯಿಂದ 120 ಕೋಟಿ ರೂಪಾಯಿ ಆದಾಯ ಬರುತ್ತಿದೆ. ಆದರೆ 180 ರಿಂದ 210 ಕೋಟಿ ರೂಪಾಯಿ ಖರ್ಚಾಗುತ್ತಿದೆ. ಇದರಲ್ಲಿ 70 ಕೋಟಿ ರೂಪಾಯಿ ವಿದ್ಯುತ್ ಗೆ ಖರ್ಚಾಗುತ್ತಿದೆ. ಇದರಿಂದ ನಮ್ಮ ಜಲ ಮಂಡಳಿಗೆ ನಷ್ಟ ಆಗುತ್ತಿದೆ. ಮುಂದಿನ ದಿನಗಳಲ್ಲಿ 1 ಸಾವಿರ ಕೋಟಿ ನಷ್ಟ ಆಗುತ್ತದೆ. ಇದನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮನವರಿಕೆ ಮಾಡಿದ್ದೇವೆ. ಆದಾಯ ಮೂಲ ನೋಡಬೇಕು.ಇಡೀ ದೇಶದಲ್ಲಿ ಬೆಂಗಳೂರಲ್ಲೇ ನೀರಿನ ದರ ಕಡಿಮೆ ಇದೆ ಹೀಗಾಗಿ ದರ ಏರಿಕೆ ಅನಿವಾರ್ಯ ವೆಂದು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಮನವರಿಕೆ ಮಾಡಿದ್ದೇವೆ.