ಬೆಂಗಳೂರು : ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರು ಉಪಚುನಾವಣೆಯಲ್ಲಿ ಸಂಡೂರಿನಲ್ಲಿ ಸೋಲಲು ಶ್ರೀರಾಮುಲು ಅವರೇ ಕಾರಣ ಎಂದು ಹೇಳಿಕೆ ನೀಡಿದ್ದರಿಂದ ಸಹಜವಾಗಿ ಶ್ರೀರಾಮುಲು ಅವರು ಬೇಸರ ವ್ಯಕ್ತಪಡಿಸಿ ಪಕ್ಷ ತೊರೆಯುತ್ತೇನೆ ಎಂದು ಹೇಳಿಕೆ ನೀಡಿದ್ದರು. ಈಗ ಇವರ ಒಂದು ಮುನಿಸ್ಸಿಗೆ ಹೈಕಮಾಂಡ್ ಎಂಟ್ರಿ ಆಗಿದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಫೋನ್ ಕರೆ ಮಾಡಿ ಮನವೊಲಿಕೆಗೆ ಮುಂದಾಗಿದ್ದಾರೆ.
ಹೌದು ಶ್ರೀರಾಮುಲು ಮುನಿಸನ್ನು ತಣಿಸಲು ಇದೀಗ ಹೈಕಮಾಂಡ್ ಎಂಟ್ರಿ ಆಗಿದೆ. ರಾಮುಲುಗೆ ಕರೆ ಮಾಡಿ ಮನವೊಲಿಕೆಗೆ ಜೆಪಿ ನಡ್ಡಾ ಇದೀಗ ಪ್ರಯತ್ನಿಸಿದ್ದಾರೆ.ದೆಹಲಿಗೆ ಬನ್ನಿ ಎಂದು ಜೆಪಿ ನಡ್ಡಾ ಶ್ರೀರಾಮುಲು ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಕೋರ್ ಕಮಿಟಿ ಸಭೆಯಲ್ಲಿ ಆಗಿದ್ದರ ಬಗ್ಗೆ ಮನವರಿಕೆ ಮಾಡಿದ್ದಾರೆ.ಜೆಪಿ ನಡ್ಡಾಗೆ ಶ್ರೀರಾಮುಲು ಸಭೆಯಲ್ಲಿ ಏನೇನಾಯಿತು ಎಂಬುದರ ಕುರಿತು ಸಂಪೂರ್ಣವಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ.ಪಕ್ಷ ಬಿಡುವ ಬಗ್ಗೆ ಹಾಗೂ ಪಕ್ಷದ ವಿರುದ್ಧವಾಗಿ ಏನು ಮಾತನಾಡಬೇಡಿ. ಯಾವುದೇ ಆತುರದ ನಿರ್ಧಾರ ಮಾಡಬೇಡಿ ಎಂದು ಜೆಪಿ ನಡ್ಡಾ ಶ್ರೀರಾಮುಲು ಅವರಿಗೆ ಮನವಿ ಮಾಡಿದ್ದಾರೆ.