Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪ್ರಯಾಣಿಕರಿಗೆ ಶಾಕ್: ಪಶ್ಚಿಮ ಏಷ್ಯಾ ಯುದ್ಧದ ಎಫೆಕ್ಟ್, ಏರ್ ಇಂಡಿಯಾದ 2,500 ವಿಮಾನಗಳು ರದ್ದು!

22/03/2026 10:01 AM

ಕಲ್ಬುರ್ಗಿಯ : ಮನೆಯಲ್ಲಿಯೇ ಮೊಬೈಲ್ ಬಿಟ್ಟು ಪಿಡಬ್ಲ್ಯೂಡಿ ಇಂಜಿನಿಯರ್ ನಾಪತ್ತೆ : ದೂರು ದಾಖಲು!

22/03/2026 10:00 AM

ಇಂಧನ ಬಿಕ್ಕಟ್ಟಿನ ನಡುವೆ ಗುಡ್ ನ್ಯೂಸ್: ಅಮೆರಿಕದಿಂದ LPG ಹೊತ್ತ ‘ಪೈಕ್ಸಿಸ್ ಪಯೋನಿಯರ್’ ಮಂಗಳೂರಿಗೆ ಆಗಮನ

22/03/2026 9:51 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದ ‘ಸರ್ಕಾರಿ ನೌಕರ’ರು: ಫೆ.7ರಂದು ‘OPS ಜಾರಿ’ಗೆ ಆಗ್ರಹಿಸಿ ಧರಣಿ
KARNATAKA

BIG NEWS: ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದ ‘ಸರ್ಕಾರಿ ನೌಕರ’ರು: ಫೆ.7ರಂದು ‘OPS ಜಾರಿ’ಗೆ ಆಗ್ರಹಿಸಿ ಧರಣಿ

By kannadanewsnow0920/01/2025 5:15 AM

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಸರ್ಕಾರಿ ನೌಕರರು ಸಿಡಿದೆದ್ದಿದ್ದಾರೆ. ರಾಜ್ಯದಲ್ಲಿ ಎನ್ ಪಿಎಸ್ ರದ್ದುಗೊಳಿಸಿ ಓಪಿಎಸ್ ಜಾರಿಗೊಳಿಸುವಂತೆ ಒತ್ತಾಯಿಸಿ ಓಪಿಎಸ್ ಹಕ್ಕೊತ್ತಾಯ ಧರಣಿಗೆ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಈ ಕುರಿತಂತೆ ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತಾರಾಮ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ದಿನಾಂಕ:13.10.2022 ರಿಂದ ಒಂದು ತಿಂಗಳು OPS ಸಂಕಲ್ಪ ಯಾತ್ರೆಯನ್ನು ಹಾಗೂ 14 ದಿನಗಳ ಕಾಲ OPS ಜಾರಿಗಾಗಿ ಫ್ರೀಡಂ ಪಾರ್ಕ್‌ನಲ್ಲಿ ಅಹೋ ರಾತ್ರಿ ಧರಣಿ ನಡೆಸಲಾಗಿತ್ತು ಹಾಗೂ ಜನವರಿ ತಿಂಗಳಿಂದ ಮೂರು ತಿಂಗಳ ಕಾಲ Vote for OPS ಅಭಿಯಾನವನ್ನು ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು NPS ಯೋಜನೆಯನ್ನು ರದ್ದುಗೊಳಿಸುವ ಭರವಸೆಯನ್ನು ತನ್ನ ಪುಣಾಳಿಕೆಯಲ್ಲಿ ಸೇರಿಸಲಾಗಿತ್ತು ಎಂಬುದಾಗಿ ತಿಳಿಸಿದ್ದಾರೆ.

ಮುಂದುವರೆದು, ಮಾನ್ಯ ಮುಖ್ಯಮಂತ್ರಿಯವರು ಅಧಿಕಾರ ವಹಿಸಿಕೊಂಡ ತಕ್ಷಣ ನಮ್ಮ ಸಂಘದ ಪದಾಧಿಕಾರಿಗಳೊಂದಿಗೆ ದಿನಾಂಕ:13.06.2023 ರಂದು ಗ್ರಹ ಕಛೇರಿ ಕೃಷ್ಣಾದಲ್ಲಿ ಮಾನ್ಯ ಮುಖ್ಯಮಂತ್ರಿಯವರು ಸಭೆ ನಡೆಸಿ ಭರವಸೆಯನ್ನು ನೀಡಲಾಗಿತ್ತು. ಮುಂದುವರೆದು, ತಾವು ಸಹ ನಮ್ಮ ಸಂಘಟನೆಯೊಂದಿಗೆ ಸಭೆ ನಡೆಸಿ NPS ಯೋಜನೆಯನ್ನು ರದ್ದುಗೊಳಿಸುವ ಕುರಿತು ಕ್ರಮಕೈಗೊಳ್ಳುವುದಾಗಿ ಎಂದಿದ್ದಾರೆ.

ಮುಖ್ಯಮಂತ್ರಿಯವರು ದಿನಾಂಕ:06.01.2024 ರಂದು ಸಂಘದ ಪದಾಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮುಂದಿನ ಸಂಪುಟ ಸಭೆಯಲ್ಲಿ NPS ಯೋಜನೆಯ ರದ್ದತಿಯ ವಿಷಯವನ್ನು ಸಂಪುಟದ ಸಹದ್ಯೋಗಿಗಳೊಂದಿಗೆ ಚರ್ಚಿಸಿ, ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದರು. ಆದರೆ ಈ ನಡುವೆ ಕೇಂದ್ರ ಸರ್ಕಾರವು NPS ಬದಲು UPS ಏಕೀಕೃತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ತೀರ್ಮಾನಿಸಿದ್ದು, ಇದನ್ನು ರಾಷ್ಟ್ರಮಟ್ಟದಲ್ಲಿ NMOPS ಮತ್ತು ರಾಜ್ಯದಲ್ಲಿ ನಮ್ಮ ಸಂಘಟನೆಯು ಈ ಪುಸ್ತಾವನೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದು, ನಮ್ಮ ಬೇಡಿಕೆಯು ಕೇವಲ ಹಳೆ ಪಿಂಚಣೆ ಯೋಜನೆಯನ್ನು ಮರುಜಾರಿಗೊಳಿಸುವುದಾಗಿದೆ ಎಂದಿದ್ದಾರೆ.

ಈ ನಡುವೆ ರಾಜ್ಯ ಸರ್ಕಾರವು ಕೆಲವು ರಾಜ್ಯಗಳಲ್ಲಿ OPS ಅನ್ನು ಜಾರಿಗೊಳಿಸಿದ್ದು, ಆ ರಾಜ್ಯಗಳಿಗೆ ಬೇಟಿ ನೀಡಿ ವರದಿ ಪಡೆದು ಪರಿಶೀಲಿಸುವ ಬಗ್ಗೆ ಸಮಿತಿಯನ್ನು ರಚಿಸಿದ್ದು, ಸರ್ಕಾರದ ಈ ಕ್ರಮವನ್ನು ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘವು ವಿರೋಧಿಸಿರುತ್ತದೆ ಎಂಬುದಾಗಿ ತಿಳಿಸಿದ್ದಾರೆ.

ದಿನಾಂಕ:19.01.2025 ರಂದು ಬೆಂಗಳೂರಿನಲ್ಲಿ ನಡೆದ ವಿಶೇಷ ರಾಜ್ಯ ಕಾರ್ಯಕಾರಿಣಿ ಸಭೆಯು “ಕಾಂಗ್ರೆಸ್ ಪಕ್ಷವು ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ, NPS ಯೋಜನೆಯನ್ನು 2025-26ನೇ ಸಾಲಿನ ಆಯವ್ಯಯದಲ್ಲಿ ರದ್ದುಗೊಳಿಸುವ ಭರವಸೆಯು ದೊರಕದೇ ಇದ್ದಲ್ಲಿ, ದಿನಾಂಕ:07.02.2025 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ‘OPS ಹಕ್ಕೊತ್ತಾಯ’ ಧರಣಿ ನಡೆಸಲು ನಡೆಸಲು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿರುತ್ತದೆ.  ವಿಶೇಷ ರಾಜ್ಯ ಕಾರ್ಯಕಾರಿಣಿ ಸಭೆಯ ನಿರ್ಧಾರದ ಹಿನ್ನೆಲೆಯಲ್ಲಿ, 2025-26ನೇ ಸಾಲಿನ ಆಯವ್ಯಯದಲ್ಲಿ ರದ್ದುಗೊಳಿಸುವ ಭರವಸೆಯು ದೊರಕದೇ ಇದ್ದಲ್ಲಿ; ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಿಶ್ಚಿತ ಪಿಂಚಣಿಗೆ ಒತ್ತಾಯಿಸಿ, ದಿನಾಂಕ:07.02.2025 ರಂದು ‘OPS ಹಕ್ಕೊತ್ತಾಯ’ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂಬುದಾಗಿ ಹೇಳಿದ್ದಾರೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

Share. Facebook Twitter LinkedIn WhatsApp Email

Related Posts

ಕಲ್ಬುರ್ಗಿಯ : ಮನೆಯಲ್ಲಿಯೇ ಮೊಬೈಲ್ ಬಿಟ್ಟು ಪಿಡಬ್ಲ್ಯೂಡಿ ಇಂಜಿನಿಯರ್ ನಾಪತ್ತೆ : ದೂರು ದಾಖಲು!

22/03/2026 10:00 AM1 Min Read

ಪ್ರತಿದಿನ 30 ಸೆಕೆಂಡುಗಳ ಕಾಲ ಈ ಚಿತ್ರವನ್ನು ವೀಕ್ಷಿಸಿ. ನಿಮ್ಮ ಮನಸ್ಸಿನಲ್ಲಿರುವ ಎಲ್ಲಾ ಈಡೇರದ ಆಸೆಗಳು ಈಡೇರುತ್ತವೆ.

22/03/2026 9:35 AM3 Mins Read

BREAKING : ಹುಬ್ಬಳ್ಳಿಯಲ್ಲಿ ರಿಲ್ಸ್ ಹುಚ್ಚಾಟಕ್ಕೆ ಬಾಲಕ ಸಾವು ಕೇಸ್ : ಮಗನ ಕೈಗೆ ಕಾರು ಕೊಟ್ಟ ತಂದೆ ಸೇರಿ, ಇಬ್ಬರು ಅರೆಸ್ಟ್!

22/03/2026 9:25 AM1 Min Read
Recent News

ಪ್ರಯಾಣಿಕರಿಗೆ ಶಾಕ್: ಪಶ್ಚಿಮ ಏಷ್ಯಾ ಯುದ್ಧದ ಎಫೆಕ್ಟ್, ಏರ್ ಇಂಡಿಯಾದ 2,500 ವಿಮಾನಗಳು ರದ್ದು!

22/03/2026 10:01 AM

ಕಲ್ಬುರ್ಗಿಯ : ಮನೆಯಲ್ಲಿಯೇ ಮೊಬೈಲ್ ಬಿಟ್ಟು ಪಿಡಬ್ಲ್ಯೂಡಿ ಇಂಜಿನಿಯರ್ ನಾಪತ್ತೆ : ದೂರು ದಾಖಲು!

22/03/2026 10:00 AM

ಇಂಧನ ಬಿಕ್ಕಟ್ಟಿನ ನಡುವೆ ಗುಡ್ ನ್ಯೂಸ್: ಅಮೆರಿಕದಿಂದ LPG ಹೊತ್ತ ‘ಪೈಕ್ಸಿಸ್ ಪಯೋನಿಯರ್’ ಮಂಗಳೂರಿಗೆ ಆಗಮನ

22/03/2026 9:51 AM

ಯುಎಇ ಮೇಲೆ ಇರಾನ್ ಕ್ಷಿಪಣಿ ಮಳೆ: 3 ಕ್ಷಿಪಣಿ, 8 ಡ್ರೋನ್ ಹೊಡೆದುರುಳಿಸಿದ ಸೇನೆ; ಶಾರ್ಜಾ ಕರಾವಳಿಯಲ್ಲಿ ಹಡಗಿನ ಮೇಲೆ ದಾಳಿ

22/03/2026 9:45 AM
State News
KARNATAKA

ಕಲ್ಬುರ್ಗಿಯ : ಮನೆಯಲ್ಲಿಯೇ ಮೊಬೈಲ್ ಬಿಟ್ಟು ಪಿಡಬ್ಲ್ಯೂಡಿ ಇಂಜಿನಿಯರ್ ನಾಪತ್ತೆ : ದೂರು ದಾಖಲು!

By kannadanewsnow0522/03/2026 10:00 AM KARNATAKA 1 Min Read

ಕಲಬುರ್ಗಿ : ಕಲ್ಬುರ್ಗಿ ವಿಭಾಗೀಯ ಕಚೇರಿಯ ಜೆಇ ಸುನಿಲ್ ಹಕ್ಕಿ ಮೊಬೈಲ್ ಅನ್ನು ಮನೆಯಲ್ಲಿ ಬಿಟ್ಟು ನಾಪತ್ತೆಯಾಗಿದ್ದಾರೆ. ಕಳೆದ ಭಾನುವಾರದಿಂದ…

ಪ್ರತಿದಿನ 30 ಸೆಕೆಂಡುಗಳ ಕಾಲ ಈ ಚಿತ್ರವನ್ನು ವೀಕ್ಷಿಸಿ. ನಿಮ್ಮ ಮನಸ್ಸಿನಲ್ಲಿರುವ ಎಲ್ಲಾ ಈಡೇರದ ಆಸೆಗಳು ಈಡೇರುತ್ತವೆ.

22/03/2026 9:35 AM

BREAKING : ಹುಬ್ಬಳ್ಳಿಯಲ್ಲಿ ರಿಲ್ಸ್ ಹುಚ್ಚಾಟಕ್ಕೆ ಬಾಲಕ ಸಾವು ಕೇಸ್ : ಮಗನ ಕೈಗೆ ಕಾರು ಕೊಟ್ಟ ತಂದೆ ಸೇರಿ, ಇಬ್ಬರು ಅರೆಸ್ಟ್!

22/03/2026 9:25 AM

BREAKING : ಬಾಗಲಕೋಟೆಯಲ್ಲಿ ಜೆಡಿಎಸ್ ಗೆ ಬಿಗ್ ಶಾಕ್ : ಬಿಜೆಪಿ ಸೇರೋದಾಗಿ ಡಾ.ದೇವರಾಜ್ ಪಾಟೀಲ್ ಹೇಳಿಕೆ!

22/03/2026 8:52 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.