ಕೇರಳ : ಜಾತ್ರೆಯ ಉತ್ಸವದ ಸಂದರ್ಭದಲ್ಲಿ ಮದವೇರಿದಂತಹ ಆನೆಯೊಂದು ಭೀಕರವಾಗಿ ದಾಳಿ ಮಾಡಿದ್ದು, ಈ ಒಂದು ಘಟನೆಯಲ್ಲಿ ಸುಮಾರು 20ಕ್ಕೂ ಅಧಿಕ ಜನರಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೇರಳದ ಮಲಪ್ಪುರಂದಲ್ಲಿ ನಡೆದಿದೆ.
ಹೌದು ಉತ್ಸವದ ವೇಳೆಗೆ ಆನೆ ಭಯಾನಕ ದಾಳಿ ಮಾಡಿದೆ. ಮದವೇರಿದ ಆನೆಯ ಅಟ್ಟಹಾಸಕ್ಕೆ 20ಕ್ಕೂ ಅಧಿಕ ಮಂದಿಗೆ ಗಾಯವಾಗಿದ್ದು, ಕೇರಳದ ಮಲಂಪ್ಪುರಂದಲ್ಲಿ ಈ ಒಂದು ಘಟನೆ ನಡೆದಿದೆ ಎನ್ನಲಾಗಿದೆ. ನಿನ್ನೆ ಪುತಿಯಂಗಡಿ ಉತ್ಸವದ ವೇಳೆ ಈ ಒಂದು ಅವಘಡ ಸಂಭವಿಸಿದೆ. ಉತ್ಸವಕ್ಕಾಗಿ ಐದು ಆನೆಗಳು ಸಾಲುಗಟ್ಟಿ ನಿಂತಿದ್ದವು.ಈ ವೇಳೆ ಏಕಾಏಕಿ ಒಂದು ಆನೆಗೆ ಮದುವೇರಿದ್ದು ದಾಳಿ ಮಾಡಿದೆ. ಆನೆ ದಾಳಿ ಮಾಡುತ್ತಿದ್ದಂತೆ ಜನರು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ.