Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕಾಮೋತ್ತೇಜಕ, ಲೈಂಗಿಕ ಜೀವನವನ್ನು ಉತ್ತಮಗೊಳಿಸುವ 7 ಅದ್ಭುತ ಆಹಾರಗಳಿವು

03/05/2026 9:21 PM

ಸಂತೋಷದಾಯಕ ಲೈಂಗಿಕ ಜೀವನಕ್ಕೆ ‘ಫೋರ್‌ಪ್ಲೇ’ ಏಕೆ ಮುಖ್ಯ? ಇಲ್ಲಿವೆ ಪ್ರಮುಖ ಕಾರಣಗಳು

03/05/2026 9:18 PM

ಕಾರಿನ ಒಳಗಿನ ಕೆಟ್ಟ ವಾಸನೆಯಿಂದ ಮುಕ್ತಿ ಬೇಕೇ? ಈ 5 ಸುಲಭ ಉಪಾಯಗಳನ್ನು ಅನುಸರಿಸಿ!

03/05/2026 9:09 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವೈದ್ಯರು ಹಾಗೂ ಸಿಬ್ಬಂದಿಗಳು ‘ಕೇಂದ್ರ ಸ್ಥಾನ’ದಲ್ಲೇ ವಾಸ್ತವ್ಯ ಕಡ್ಡಾಯ, ತಪ್ಪಿದ್ರೆ ಶಿಸ್ತುಕ್ರಮ: ರಾಜ್ಯ ಸರ್ಕಾರ ಆದೇಶ
KARNATAKA

ವೈದ್ಯರು ಹಾಗೂ ಸಿಬ್ಬಂದಿಗಳು ‘ಕೇಂದ್ರ ಸ್ಥಾನ’ದಲ್ಲೇ ವಾಸ್ತವ್ಯ ಕಡ್ಡಾಯ, ತಪ್ಪಿದ್ರೆ ಶಿಸ್ತುಕ್ರಮ: ರಾಜ್ಯ ಸರ್ಕಾರ ಆದೇಶ

By kannadanewsnow0903/01/2025 5:15 AM

ಬೆಂಗಳೂರು: ರಾಜ್ಯ ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಂತ ವೈದ್ಯರು ಹಾಗೂ ಸಿಬ್ಬಂದಿಗಳು ಕೇಂದ್ರ ಸ್ಥಾನದಲ್ಲೇ ಕಡ್ಡಾಯವಾಗಿ ವಾಸ್ತವ್ಯ ಇರಬೇಕು. ಈ ನಿಯಮ ಮೀರಿದ್ರೇ ಅಂತವರ ವಿರುದ್ಧ ಶಿಸ್ತುಕ್ರಮ ಜರುಗಿಸುವುದಾಗಿ ರಾಜ್ಯ ಸರ್ಕಾರ ಖಡಕ್ ಆದೇಶವನ್ನು ಹೊರಡಿಸಿದೆ.

ಇಂದು ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಅದರಲ್ಲಿ  ರಾಜ್ಯ ಸರ್ಕಾರವು ತನ್ನ ಆರೋಗ್ಯ ನೀತಿ ಪ್ರಕಾರ ವಿವಿಧ ಹಂತಗಳಲ್ಲಿ ಅಂದರೆ ಉಪ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು/ಜಿಲ್ಲಾ ಆಸ್ಪತ್ರೆಗಳ ಮೂಲಕ ಸಾರ್ವಜನಿಕರಿಗೆ ಆರೋಗ್ಯ ಸೇವೆಗಳನ್ನು ಒದಗಿಸಲಾಗುತ್ತಿದೆ. ಈ ದಿಶೆಯಲ್ಲಿ ಆರೋಗ್ಯ ಸೇವೆಗಳ ಕನಿಷ್ಠ ಅವಶ್ಯಕ ಕಾರ್ಯಕ್ರಮಗಳಾದ ರೋಗನಿರೋಧಕ ಸೇವೆಗಳು, ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮ ಸಾಂಕ್ರಾಮಿಕ/ಅಸಾಂಕ್ರಾಮಿಕ ರೋಗಗಳ ನಿವಾರಣೆ ಮತ್ತು ನಿರ್ಮೂಲನ ಕಾರ್ಯಕ್ರಮಗಳು, ಪರಿಸರ ಸ್ವಚ್ಛತೆ, ಪೌಷ್ಠಿಕ ಆಹಾರ ಸೇವನೆ, ಆರೋಗ್ಯ ಶಿಕ್ಷಣ ಮತ್ತು ಶಾಲಾ ಆರೋಗ್ಯ ಸೇವೆಗಳು, ಪ್ರಯೋಗಾಲಯ ಸೇವೆಗಳು ಹಾಗೂ ಇನ್ನೂ ಅನೇಕ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಒದಗಿಸಲಾಗುತ್ತಿದೆ ಎಂದಿದ್ದಾರೆ.

ಮೇಲ್ಕಂಡ ಇಲಾಖೆಯ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಹಾಗೂ ತುರ್ತು ಸೇವೆಗಳನ್ನು ಸಕಾಲದಲ್ಲಿ ಒದಗಿಸುವ ಸಲುವಾಗಿ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ವಸತಿ ಗೃಹಗಳನ್ನು ಕಲ್ಪಿಸಲಾಗಿರುತ್ತದೆ. ವಸತಿ ಗೃಹ ಲಭ್ಯವಿಲ್ಲದ ಕಡೆ ಕೇಂದ್ರ ಸ್ಥಾನದಲ್ಲಿ ವಾಸಿಸಲು HRA ಸೌಲಭ್ಯವನ್ನು ನೀಡಲಾಗುತ್ತಿರುತ್ತದೆ. ವೈದ್ಯರು ಹಾಗೂ ಸಿಬ್ಬಂದಿಗಳು ಸರ್ಕಾರ ಒದಗಿಸಿದ ನಿಯೋಜಿತ ವಸತಿ ಗೃಹಗಳಲ್ಲಿ ವಾಸ್ತವ್ಯವಿರದೇ ಕಟ್ಟಡಗಳು ಶಿಥಿಲಗೊಂಡು ದುರಸ್ತಿ ಮಾಡದಷ್ಟು ಹಾಳಾಗುತ್ತಿದ್ದು, ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟಾಗುತ್ತಿರುತ್ತದೆ. ವಿದ್ಯುಚ್ಛಕ್ತಿ ಬಿಲ್‌ಗಳನ್ನು ನಿಯಮಿತವಾಗಿ ಭರಿಸದೇ ಹೆಚ್ಚಿನ ಬಾಕಿ ಉಳಿಸಿಕೊಂಡಿರುವುದು ಸಹ ಗಮನಕ್ಕೆ ಬಂದಿರುತ್ತದೆ ಎಂದು ತಿಳಿಸಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತುರ್ತು ಸೇವೆ ವ್ಯಾಪ್ತಿಗೆ ಒಳಪಡುತ್ತಿದ್ದು ವೈದ್ಯರು ಹಾಗೂ ಸಿಬ್ಬಂದಿಗಳು ಕೇಂದ್ರ ಸ್ಥಾನದಲ್ಲಿ ವಾಸವಿರದೇ ಇರುವುದರಿಂದ ಸಾರ್ವಜನಿಕರು ಸಕಾಲದಲ್ಲಿ ವೈದ್ಯಕೀಯ ತುರ್ತು ಸೇವೆ ಪಡೆಯಲು ವಂಚಿತರಾಗುತ್ತಿದ್ದು, ಈ ಬಗ್ಗೆ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು, ಜನಪ್ರತಿನಿಧಿಗಳು ಹಾಗೂ ಮಾಧ್ಯಮಗಳಿಂದ ಪದೇ ಪದೇ ಅನೇಕ ಮನವಿ/ದೂರುಗಳು ಸ್ವೀಕೃತವಾಗುತ್ತಿದೆ ಹಾಗೂ ಇದರೊಂದಿಗೆ ವಸತಿ ಗೃಹ ಒದಗಿಸಿರುವ ಉದ್ದೇಶ ವಿಫಲವಾಗುತ್ತಿದೆ. ಕೇಂದ್ರ ಸ್ಥಾನದಲ್ಲಿ ಲಭ್ಯವಿಲ್ಲದಿರುವುದರಿಂದ ಸಾರ್ವಜನಿಕರಿಗೆ ಚಿಕಿತ್ಸೆಯನ್ನು ಸಕಾಲದಲ್ಲಿ ನೀಡದೇ ಹಲವಾರು ಸಾವು, ನೋವುಗಳು ಸಂಭವಿಸುತ್ತಿದ್ದು, ಸಾರ್ವಜನಿಕರಲ್ಲಿ ಇಲಾಖೆಯ ಬಗ್ಗೆ ಋಣಾತ್ಮಕ ಭಾವನೆ ಉಂಟಾಗುತ್ತಿದೆ ಎಂದು ಹೇಳಿದ್ದಾರೆ.

ಉಲ್ಲೇಖಿತ ಸುತ್ತೋಲೆಯಲ್ಲಿ ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಾವಳಿ ನಿಯಮ 1966ರ ನಿಯಮ 19ರ ಪ್ರಕಾರ ಪ್ರತಿ ಸರ್ಕಾರಿ ನೌಕರರು ತನ್ನ ಕರ್ತವ್ಯ ನಿರ್ವಹಣೆಗಾಗಿ ಸರ್ಕಾರ ನೀಡಿರುವ ಸವಲತ್ತುಗಳನ್ನು ಸೂಕ್ತವಾಗಿ ಉಪಯೋಗಿಸಿಕೊಳ್ಳುವುದು ಆದ್ಯ ಕರ್ತವ್ಯವಾಗಿರುತ್ತದೆ ಹಾಗೂ ಅದೇ ನಿಯಮಾವಳಿಗಳ ನಿಯಮ 3 (ii)ರ ಪ್ರಕಾರ ಸರ್ಕಾರಿ ನೌಕರನು ಯಾವಾಗಲೂ ಸರ್ಕಾರಿ ನೌಕರನಿಗೆ ತಕ್ಕದಲ್ಲದಂತಹ ಯಾವುದೇ ಕಾರ್ಯವನ್ನು ಮಾಡುವಂತಿಲ್ಲ. ಇಲ್ಲವಾದಲ್ಲಿ ಅದು ದುರ್ನಡತೆಯಾಗುತ್ತದೆ ಹಾಗೂ ತತ್ಪರಿಣಾಮವಾಗಿ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಆಫೀಲು) ನಿಯಮಗಳ ಪ್ರಕಾರ ಶಿಸ್ತು ಕ್ರಮಕ್ಕೆ ಒಳಗಾಗುತ್ತಾರೆ ಎಂದು ತಿಳುವಳಿಪಡಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.

ಆದ್ದರಿಂದ, ಮೇಲ್ಕಂಡ ನಿಯಮಗಳನ್ನು ಸಂಬಂಧಪಟ್ಟ ವೈದ್ಯರು/ಸಿಬ್ಬಂದಿಗಳ ಗಮನಕ್ಕೆ ತರುತ್ತಾ, ಸರ್ಕಾರವು ಕಲ್ಪಿಸಿರುವ ಸರ್ಕಾರಿ ಸೌಕರ್ಯವನ್ನು ಸೂಕ್ತವಾಗಿ ಉಪಯೋಗಿಸಿಕೊಂಡು ಕಡ್ಡಾಯವಾಗಿ ವಸತಿ ಗೃಹ/ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಹೂಡುವುದು ಹಾಗೂ ಸಾರ್ವಜನಿಕರ ತುರ್ತು ಸೇವೆಯಲ್ಲಿ ಯಾವುದೇ ಲೋಪವಾಗದಂತೆ ಕರ್ತವ್ಯವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕೇಂದು ಈ ಮೂಲಕ ತಿಳಿಸಲಾಗಿದೆ. ತಪ್ಪಿದಲ್ಲಿ ಸಂಬಂಧಪಟ್ಟ ವೈದ್ಯರು/ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮಜರುಗಿಸಲಾಗುವುದು ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ.

ವರದಿ: ವಸಂತ ಬಿ ಈಶ್ವರಗೆರೆ

Share. Facebook Twitter LinkedIn WhatsApp Email

Related Posts

ಪದ್ಮಶ್ರೀ ಪುರಸ್ಕೃತ ಅಂಕೇಗೌಡ ದಂಪತಿಗಳ ಸಾಧನೆ ಅಪಾರ: ಸಂಸದ ಜಿ.ಕುಮಾರನಾಯಕ್

03/05/2026 8:36 PM2 Mins Read

ಮದ್ದೂರು ತಾಲೂಕು ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಬ್ಯಾಡರಹಳ್ಳಿ ಅಂಕೇಗೌಡ ಆಯ್ಕೆ

03/05/2026 8:34 PM1 Min Read

BREAKING: KPSC ಭ್ರಷ್ಟಾಚಾರ ತಡೆಗೆ ಮಹತ್ವದ ಕ್ರಮ: ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಸದನ ಸಮಿತಿ ರಚನೆ

03/05/2026 7:15 PM1 Min Read
Recent News

ಕಾಮೋತ್ತೇಜಕ, ಲೈಂಗಿಕ ಜೀವನವನ್ನು ಉತ್ತಮಗೊಳಿಸುವ 7 ಅದ್ಭುತ ಆಹಾರಗಳಿವು

03/05/2026 9:21 PM

ಸಂತೋಷದಾಯಕ ಲೈಂಗಿಕ ಜೀವನಕ್ಕೆ ‘ಫೋರ್‌ಪ್ಲೇ’ ಏಕೆ ಮುಖ್ಯ? ಇಲ್ಲಿವೆ ಪ್ರಮುಖ ಕಾರಣಗಳು

03/05/2026 9:18 PM

ಕಾರಿನ ಒಳಗಿನ ಕೆಟ್ಟ ವಾಸನೆಯಿಂದ ಮುಕ್ತಿ ಬೇಕೇ? ಈ 5 ಸುಲಭ ಉಪಾಯಗಳನ್ನು ಅನುಸರಿಸಿ!

03/05/2026 9:09 PM

ಭಾರತದಲ್ಲಿ ಹೆಚ್ಚುತ್ತಿದೆ ‘ಸ್ಲೀಪ್ ಡಿವೋರ್ಸ್’ ಕ್ರೇಜ್: ದಂಪತಿಗಳು ಪ್ರತ್ಯೇಕವಾಗಿ ಮಲಗಲು ಬಯಸುತ್ತಿರುವುದೇಕೆ?

03/05/2026 9:01 PM
State News
KARNATAKA

ಪದ್ಮಶ್ರೀ ಪುರಸ್ಕೃತ ಅಂಕೇಗೌಡ ದಂಪತಿಗಳ ಸಾಧನೆ ಅಪಾರ: ಸಂಸದ ಜಿ.ಕುಮಾರನಾಯಕ್

By kannadanewsnow0903/05/2026 8:36 PM KARNATAKA 2 Mins Read

ಮಂಡ್ಯ : ಜಿಲ್ಲೆಯಲ್ಲಿನ ಪುಸ್ತಕದ ಮನೆಯೊಂದು ಜಿಲ್ಲೆ ಮತ್ತು ರಾಜ್ಯವನ್ನು ದಾಟಿ ರಾಷ್ಟ್ರದ ರಾಜಧಾನಿ ದೆಹಲಿವರೆವಿಗೂ ತಲುಪಿರುವುದು ಶ್ಲಾಘನೀಯ ಕಾರ್ಯವೆಂದು…

ಮದ್ದೂರು ತಾಲೂಕು ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಬ್ಯಾಡರಹಳ್ಳಿ ಅಂಕೇಗೌಡ ಆಯ್ಕೆ

03/05/2026 8:34 PM

BREAKING: KPSC ಭ್ರಷ್ಟಾಚಾರ ತಡೆಗೆ ಮಹತ್ವದ ಕ್ರಮ: ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಸದನ ಸಮಿತಿ ರಚನೆ

03/05/2026 7:15 PM

Watch Video: ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಎಳೆನೀರು ತುಂಬಿದ್ದ ಬೊಲೆರೊ ವಾಹನ ಪಲ್ಟಿ: ಭಯಾನಕ ವೀಡಿಯೋ ಇಲ್ಲಿದೆ

03/05/2026 7:10 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.