ಕೊಪ್ಪಳ : ಕೊಪ್ಪಳ ಜಿಲ್ಲೆಯಲ್ಲಿ 7 ನೇ ತರಗತಿ ಪಾಸ್ ಆಗಿದ್ದರೂ ಭಾಷಾ ವಿಷಯಗಳಲ್ಲಿ ಮಕ್ಕಳು ವೀಕ್ ಆಗಿದ್ದಾರೆ. 7,000 ಮಕ್ಕಳಿಗೆ ಓದಲು, ಬರೆಯಲು ಬಾರದೇ ಇರುವುದು ಪತ್ತೆಯಾಗಿದೆ.
ಹೌದು, ಕೊಪ್ಪಳ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಗಳಿಂದ ಪ್ರೌಢಶಾಲೆಗಳಿಗೆ ಪ್ರವೇಶ ಪಡೆಯುವ ಸಂದರ್ಭದಲ್ಲಿ ಭಾಷಾ ವಿಷಯದಲ್ಲಿ ವಿದ್ಯಾರ್ಥಿಗಳಿಗೆ ಓದಲು, ಬರೆಯಲು ಬರುತ್ತಿಲ್ಲ. ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಮಕ್ಕಳು ಪ್ರವೇಶ ಪಡೆದುಕೊಂಡಿದ್ದಾರೆ. ಹೈಸ್ಕೂಲ್ ಪ್ರವೇಶ ಸಂದರ್ಭದಲ್ಲಿ ಮಕ್ಕಳನ್ನು ಪರೀಕ್ಷಿಸಿದಾಗ ಈ ವಿಚಾರ ಪತ್ತೆಯಾಗಿದೆ. ಕಳೆದ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಪರೀಕ್ಷೆ ನಡೆಸಿದಾಗ ಕನ್ನಡ ಓದಲು, ಬರೆಯಲು ಬಾರದೇ ಇರುವುದು ಪತ್ತೆಯಾಗಿದೆ. ಈ ಕಾರಣಕ್ಕೆ ಎಸ್ಎಸ್ಎಲ್ಸಿಯಲ್ಲಿ ಫಲಿತಾಂಶ ಕಡಿಮೆ ಬರುತ್ತಿದೆ ಎಂದು ಶಿಕ್ಷಕರು ಹೇಳಿದ್ದಾರೆ.
ಕೊಪ್ಪಳ ಜಿಲ್ಲೆಯ ಎಲ್ಲಾ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರಿಗೆ ಕೊಪ್ಪಳ ಡಿಡಿಪಿಐ ಶ್ರೀಶೈಲ ಬಿರಾದಾರ ಪತ್ರ ಬರೆದು 7ನೇ ತರಗತಿ ಮಕ್ಕಳಿಗೆ ಓದಲು ಬರೆಯಲು ಬರುವಂತೆ ನೋಡಿಕೊಳ್ಳಿ. ಮಕ್ಕಳು ನಿಗದಿತ ಗುರಿ ತಲುಪದೇ ಇದ್ದರೆ ನಿಮ್ಮ ವಾರ್ಷಿಕ ಬಡ್ತಿಗೆ ತಡೆ ನೀಡಲಾಗುವುದು ಎಂದು ಶಿಕ್ಷಣ ಇಲಾಖೆ ನೋಟಿಸ್ ನೀಡಿದೆ.