Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪ್ರತಿದಿನ ‘ಮೊಟ್ಟೆ’ ತಿಂದರೆ ಏನಾಗುತ್ತೆ ಗೊತ್ತಾ.?

05/07/2025 10:11 PM

ಭಾರತದ ಶಕ್ತಿ ಅನಾವರಣ ; ಚೀನಾ, ಅಮೆರಿಕ ಹಿಂದಿಕ್ಕಿ ಇತಿಹಾಸ ನಿರ್ಮಾಣ, ವಿಶೇಷ ಸ್ಥಾನಮಾನ

05/07/2025 10:07 PM

BREAKING : ಮೊದಲ ‘NC ಕ್ಲಾಸಿಕ್ 2025’ರಲ್ಲಿ 86.18 ಮೀಟರ್ ಎಸೆತದೊಂದಿಗೆ ‘ಚಿನ್ನ’ ಗೆದ್ದ ‘ನೀರಜ್ ಚೋಪ್ರಾ’

05/07/2025 9:12 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಎಲ್ಲಾ ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ : ಸರ್ಕಾರದಿಂದ ಮಹತ್ವದ ಆದೇಶ.!
KARNATAKA

BIG NEWS : ರಾಜ್ಯದ ಎಲ್ಲಾ ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ : ಸರ್ಕಾರದಿಂದ ಮಹತ್ವದ ಆದೇಶ.!

By kannadanewsnow5703/12/2024 5:34 AM

ಬೆಂಗಳೂರು : 2023-24 ಸಾಲಿಗೆ ಮಾನ್ಯತೆ ನವೀಕರಣ ಪಡೆಯದ ಖಾಸಗಿ ಅನುದಾನಿತ/ಅನುದಾನರಹಿತ ಪ್ರಾಥಮಿಕ/ಪ್ರೌಢಶಾಲೆಗಳಿಗೆ ಕರ್ನಾಟಕ ಶಿಕ್ಷಣ ಕಾಯ್ದೆ-1983 ಮತ್ತು ಆ‌ರ್.ಟಿ.ಇ ನಿಯಮ-2012ರ ಅಡಿಯಲ್ಲಿ ಪ್ರಥಮ ಮಾನ್ಯತೆ/ಮಾನ್ಯತೆ ನವೀಕರಣವನ್ನು ಪಡೆಯಲು ಅವಕಾಶ ನೀಡುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ 2023-24ನೇ ಸಾಲಿಗೆ ಮಾನ್ಯತೆ ನವೀಕರಣ ಪಡೆಯಲು ಖಾಸಗಿ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಮಾನ್ಯತೆ ಕೋರಿ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಲು ಉಲ್ಲೇಖ(6) ಮತ್ತು (7) ಅವಕಾಶ ನೀಡಿ ಸುತ್ತೋಲೆ ನೀಡಲಾಗಿತ್ತು. ಆದಾಗ್ಯೂ ಕೆಲವು ಶಾಲೆಗಳು 2023-24ನೇ ಸಾಲಿನಲ್ಲಿ ನೀಡಿದ ಕಾಲಾವಧಿಯಲ್ಲಿ ಮಾನ್ಯತೆ ಪಡೆಯಲು ವಿಫಲರಾಗಿದ್ದು, ಅವಕಾಶ ಕೋರಿದ ಹಿನ್ನೆಲೆಯಲ್ಲಿ ಅಂತಹ ಶಾಲೆಗಳಿಗೆ ಉಲ್ಲೇಖ(8) ರ ಸರ್ಕಾರದ ಪತ್ರದಂತೆ 2023- 24ನೇ ಸಾಲಿಗೆ ಮಾನ್ಯತೆ/ಮಾನ್ಯತೆ ನವೀಕರಣ ಪಡೆಯಲು ಖಾಸಗಿ ಅನುದಾನಿತ/ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಮುಂದಿನ ವರ್ಷಗಳಲ್ಲಿ ನಿಗದಿತ ಅವಧಿಯಲ್ಲಿ ಕಡ್ಡಾಯವಾಗಿ ಮಾನ್ಯತೆ ನವೀಕರಣ ಮಾಡಿಕೊಳ್ಳುವ ಮತ್ತು ಆ ರೀತಿ ಮಾನ್ಯತೆ ನವೀಕರಣ ಮಾಡಿಕೊಳ್ಳಲು ವಿಫಲವಾಗುವ ಶಾಲೆಗಳ ನೋಂದಣಿ ರದ್ದುಪಡಿಸುವ ಮತ್ತು ಮಾನ್ಯತೆಯನ್ನು ಹಿಂಪಡೆಯುವ ಷರತ್ತಿಗೊಳಪಡಿಸಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಒಂದು ಬಾರಿಗೆ ಮಾತ್ರ 2023-24 ನೇ ಸಾಲಿನ ಮಾನ್ಯತೆ ನವೀಕರಣಕ್ಕೆ ಮಾತ್ರ ಅವಕಾಶ ನೀಡಲು ಸರ್ಕಾರವು ಅನುಮತಿ ನೀಡಿರುತ್ತಾರೆ.

ಅದರಂತೆ ಕರ್ನಾಟಕ ಶಿಕ್ಷಣ ಕಾಯ್ದೆ-1983 ರ ಸೆಕ್ಷನ್-36 ಮತ್ತು ಕರ್ನಾಟಕ ಶಿಕ್ಷಣ ಸಂಸ್ಥೆಗಳು( ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಾನ್ಯತೆ) ನಿಯಮಗಳು 1999 ರ ನಿಯಮ-3ರಂತೆ ಹಾಗೂ ಉಲ್ಲೇಖ(3) ರ ಸೆಕ್ಷನ್-18 ಹಾಗೂ ಉಲ್ಲೇಖ(4)ರ ನಿಯಮ-11 ರಂತೆ ಎಲ್ಲಾ ಶಾಲೆಗಳು ನಿಗದಿತ ಅವಧಿಯಲ್ಲಿ ನಿಯಮಾನುಸಾರ ಎಲ್ಲಾ ಅಗತ್ಯ ಮಾಹಿತಿ/ದಾಖಲೆಗಳೊಂದಿಗೆ ಪ್ರಥಮ ಮಾನ್ಯತೆ/ ಮಾನ್ಯತೆ ನವೀಕರಣಕ್ಕೆ ಪ್ರಸ್ತಾವನೆ ಸಲ್ಲಿಸಿ ಮಾನ್ಯತೆ ಪಡೆಯುವುದು ಕಡ್ಡಾಯವಾಗಿರುತ್ತದೆ, ಯಾವುದೇ ಶಾಲೆಯು ಮಾನ್ಯತೆ ಪಡೆಯದೇ ನಡೆಯುತ್ತಿದ್ದಲ್ಲಿ ಅಂತಹ ಶಾಲೆಯ ವಿರುದ್ಧ ನಿಯಮಾನುಸಾರ ಕ್ರಮ ವಹಿಸುವುದು ಸಕ್ಷಮ ಪ್ರಾಧಿಕಾರದ ಜವಾಬ್ದಾರಿಯಾಗಿರುತ್ತದೆ. ಉಳಿದಂತೆ ಉಲ್ಲೇಖ(1) ರಿಂದ (7)ರ ಎಲ್ಲಾ ಅಧಿಸೂಚನೆ/ಸುತ್ತೋಲೆಗಳ ಎಲ್ಲಾ ಅಂಶಗಳು ಯಥಾವತ್ತಾಗಿ ಮುಂದುವರೆಯುತ್ತವೆ.

ಮುಂದುವರೆದು, 2023-24ನೇ ಸಾಲಿನಲ್ಲಿ ಮಾನ್ಯತೆ ನವೀಕರಣ ಪಡೆಯದ ಖಾಸಗಿ ಶಾಲೆಗಳು ಪ್ರಸ್ತುತ 2023-24ನೇ ಸಾಲಿಗೆ ಮಾನ್ಯತೆ ನವೀಕರಣ ಪಡೆಯುವ ಸಂಬಂಧ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಿದಲ್ಲಿ ಅಂತಹ ಶಾಲೆಗಳಿಗೆ ಎಲ್ಲಾ ಮಾನದಂಡಗಳನ್ನು ಪೂರೈಸಿದಲ್ಲಿ ಮಾತ್ರ ಆ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ನಿಯಮಗಳಂತೆ ಗರಿಷ್ಟ 05 ವರ್ಷಗಳಿಗೆ ಮಾತ್ರ ಮಾನ್ಯತೆ ನವೀಕರಣ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಮುಂದುವರೆದು ಉಲ್ಲೇಖ- 7ರ ಸುತ್ತೋಲೆಯಂತೆ 2017-18 ರ ಪೂರ್ವದಲ್ಲಿ ನೋಂದಣಿ ಪಡೆದು ನಡೆಸಲಾಗುತ್ತಿರುವ ಖಾಸಗಿ ಅನುದಾನಿತ/ ಅನುದಾನರಹಿತ ಶಾಲೆಗಳಿಗೆ ಮಾತ್ರ ಅನ್ವಯಿಸುವಂತೆ ಕಟ್ಟಡ ಸುರಕ್ಷತಾ ಪ್ರಮಾಣ ಪತ್ರ, ಅಗ್ನಿ ಸುರಕ್ಷತಾ ಸಮಾಪನ ಪತ್ರ, ಶಾಲಾ ನಿವೇಶನವು ಶೈಕ್ಷಣಿಕ ಉದ್ದೇಶಕ್ಕಾಗಿ ಭೂ ಪರಿವರ್ತನಾ ಆದೇಶ ಹಾಗೂ ಅನುಮೋದಿತ ಕಟ್ಟಡ ನಕ್ಷೆಗಳನ್ನು ಒಂದು ವರ್ಷದೊಳಗೆ ಸಕ್ಷಮ ಪ್ರಾಧಿಕಾರದಿಂದ ಪಡೆದು ಸಲ್ಲಿಸುವ ಬಗ್ಗೆ ಶಾಲಾ ಆಡಳಿತ ಮಂಡಳಿಗಳು ಅಫಿಡವಿಟ್ ಅನ್ನು ಸಲ್ಲಿಸಿದಲ್ಲಿ ಸದರಿ ದಾಖಲೆಗಳಿಗೆ ಮಾತ್ರ ವಿನಾಯ್ತಿ ನೀಡಿ ಅಂತಹ ಶಾಲೆಗಳಿಗೆ ಷರತ್ತುಬದ್ಧವಾಗಿ ಒಂದು ವರ್ಷಕ್ಕೆ ಮಾತ್ರ ಮಾನ್ಯತೆ ನವೀಕರಿಸಲು ಸೂಚಿಸಿದೆ.

2023-24ನೇ ಸಾಲಿನ ಮಾನ್ಯತೆ ಪಡೆಯದಿರುವ ಶಾಲೆಗಳಿಗೆ ಸದರಿ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಿರಸ್ಕಾರಕ್ಕೆ ಅವಕಾಶ ನೀಡದಂತೆ ಎಲ್ಲಾ ಅಗತ್ಯ ಮಾಹಿತಿ/ದಾಖಲೆಗಳೊಂದಿಗೆ ತಂತ್ರಾಂಶದಲ್ಲಿ ನಿಗದಿತ ಅಂತಿಮ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಮಾನ್ಯತೆ/ಮಾನ್ಯತೆ ನವೀಕರಣ ಪಡೆಯಲು ಸಕ್ಷಮ ಪ್ರಾಧಿಕಾರಿಗಳು ಸೂಚನೆ ನೀಡುವುದು. ಈ ಅವಧಿಯ ನಂತರ ತಮ್ಮ ವ್ಯಾಪ್ತಿಯ ಯಾವುದೇ ಶಾಲೆ 2023-24 ನೇ ಸಾಲಿನ ಮಾನ್ಯತೆ ನವೀಕರಣ ಪಡೆಯದೇ ಇದ್ದಲ್ಲಿ ಅಂತಹ ಶಾಲೆಯ ವಿರುದ್ಧ ಸರ್ಕಾರದ ಪತ್ರ ಮತ್ತು ನಿಯಮಗಳನುಸಾರ ಅಗತ್ಯ ಕ್ರಮ ವಹಿಸಲು ಸೂಚಿಸಿದೆ.

BIG NEWS : ರಾಜ್ಯದ ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ : ಸರ್ಕಾರದಿಂದ ಮಹತ್ವದ ಆದೇಶ.! BIG NEWS: Renewal of recognition of private schools in the state: Govt issues order
Share. Facebook Twitter LinkedIn WhatsApp Email

Related Posts

BREAKING : ಮೊದಲ ‘NC ಕ್ಲಾಸಿಕ್ 2025’ರಲ್ಲಿ 86.18 ಮೀಟರ್ ಎಸೆತದೊಂದಿಗೆ ‘ಚಿನ್ನ’ ಗೆದ್ದ ‘ನೀರಜ್ ಚೋಪ್ರಾ’

05/07/2025 9:12 PM1 Min Read

BREAKING: ಶಿವಮೊಗ್ಗದಲ್ಲಿ ನಾಗರ ವಿಗ್ರಹವನ್ನೇ ಚರಂಡಿಗೆ ಎಸೆದು ದುಷ್ಕೃತ್ಯ

05/07/2025 9:05 PM1 Min Read

‘IAS, IPS ಹುದ್ದೆ’ ನಿರೀಕ್ಷೆಯಲ್ಲಿರುವವರಿಗೆ ಗುಡ್ ನ್ಯೂಸ್: ‘UPSC ಉಚಿತ ತರಬೇತಿ’ಗೆ ಅರ್ಜಿ ಆಹ್ವಾನ | IAS Officer

05/07/2025 8:58 PM1 Min Read
Recent News

ಪ್ರತಿದಿನ ‘ಮೊಟ್ಟೆ’ ತಿಂದರೆ ಏನಾಗುತ್ತೆ ಗೊತ್ತಾ.?

05/07/2025 10:11 PM

ಭಾರತದ ಶಕ್ತಿ ಅನಾವರಣ ; ಚೀನಾ, ಅಮೆರಿಕ ಹಿಂದಿಕ್ಕಿ ಇತಿಹಾಸ ನಿರ್ಮಾಣ, ವಿಶೇಷ ಸ್ಥಾನಮಾನ

05/07/2025 10:07 PM

BREAKING : ಮೊದಲ ‘NC ಕ್ಲಾಸಿಕ್ 2025’ರಲ್ಲಿ 86.18 ಮೀಟರ್ ಎಸೆತದೊಂದಿಗೆ ‘ಚಿನ್ನ’ ಗೆದ್ದ ‘ನೀರಜ್ ಚೋಪ್ರಾ’

05/07/2025 9:12 PM

BREAKING: ಶಿವಮೊಗ್ಗದಲ್ಲಿ ನಾಗರ ವಿಗ್ರಹವನ್ನೇ ಚರಂಡಿಗೆ ಎಸೆದು ದುಷ್ಕೃತ್ಯ

05/07/2025 9:05 PM
State News
INDIA

BREAKING : ಮೊದಲ ‘NC ಕ್ಲಾಸಿಕ್ 2025’ರಲ್ಲಿ 86.18 ಮೀಟರ್ ಎಸೆತದೊಂದಿಗೆ ‘ಚಿನ್ನ’ ಗೆದ್ದ ‘ನೀರಜ್ ಚೋಪ್ರಾ’

By KannadaNewsNow05/07/2025 9:12 PM INDIA 1 Min Read

ಬೆಂಗಳೂರು : ಬೆಂಗಳೂರಿನ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಇಂದು ನಡೆದ ನೀರಜ್ ಚೋಪ್ರಾ ಕ್ಲಾಸಿಕ್ 2025ರ ಮೊದಲ ಆವೃತ್ತಿಯಲ್ಲಿ ಚಿನ್ನ ಗೆಲ್ಲುವ…

BREAKING: ಶಿವಮೊಗ್ಗದಲ್ಲಿ ನಾಗರ ವಿಗ್ರಹವನ್ನೇ ಚರಂಡಿಗೆ ಎಸೆದು ದುಷ್ಕೃತ್ಯ

05/07/2025 9:05 PM

‘IAS, IPS ಹುದ್ದೆ’ ನಿರೀಕ್ಷೆಯಲ್ಲಿರುವವರಿಗೆ ಗುಡ್ ನ್ಯೂಸ್: ‘UPSC ಉಚಿತ ತರಬೇತಿ’ಗೆ ಅರ್ಜಿ ಆಹ್ವಾನ | IAS Officer

05/07/2025 8:58 PM

ವೃತ್ತಿಪರ ತರಬೇತಿ ಪಡೆಯಲು ಅರ್ಜಿ ಆಹ್ವಾನ

05/07/2025 8:52 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.