Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ‘ಮನಿ ಮ್ಯೂಲ್’ ಆಮಿಷಕ್ಕೆ ಬಲಿಯಾಗಬೇಡಿ : ಬ್ಯಾಂಕ್ ಗ್ರಾಹಕರಿಗೆ `RBI’ ಎಚ್ಚರಿಕೆ!

ಹೈದ್ರಾಬಾದ್ ನಲ್ಲಿ ಮನೆಗೆ ನುಗ್ಗಿ, ಚಾಕುವಿನಿಂದ ಇರಿದು ಖ್ಯಾತ ಯೂಟ್ಯೂಬರ್ ನ ಬರ್ಬರ ಹತ್ಯೆ!

BIG NEWS : ರಾಜ್ಯದಲ್ಲಿ ಉಚಿತ ಬಸ್ ಪಾಸ್ ಪಡೆದ ಮೊದಲ ವಿದ್ಯಾರ್ಥಿ ಇವನೇ ನೋಡಿ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ರಾಜ್ಯದ ಸಾರಿಗೆ ನೌಕರರಿಗೆ ಗುಡ್ ನ್ಯೂಸ್ : `KSRTC’ಯ 1,308 ನೌಕರರಿಗೆ `ಅಂತರ ನಿಗಮ ವರ್ಗಾವಣೆ’ ಭಾಗ್ಯ.!
KARNATAKA

BREAKING : ರಾಜ್ಯದ ಸಾರಿಗೆ ನೌಕರರಿಗೆ ಗುಡ್ ನ್ಯೂಸ್ : `KSRTC’ಯ 1,308 ನೌಕರರಿಗೆ `ಅಂತರ ನಿಗಮ ವರ್ಗಾವಣೆ’ ಭಾಗ್ಯ.!

By kannadanewsnow57

ಬೆಂಗಳೂರು : ನೌಕರರ ಕೋರಿಕೆ‌ ಮೇರೆಗೆ ಕೆಎಸ್ಆರ್ ಟಿಸಿ ಅಂತರ ನಿಗಮ ವರ್ಗಾವಣೆಯಲ್ಲಿ ಒಟ್ಟು 1308 ನೌಕರರಿಗೆ ವರ್ಗಾವಣೆ ಸೌಲಭ್ಯ ಕಲ್ಪಿಸಲಾಗಿದೆ‌.

ದರ್ಜೆ-3 ಮೇಲ್ವಿಚಾರಕೇತರ ಮತ್ತು ದರ್ಜೆ-4 ನೌಕರರ 2023ನೇ ಸಾಲಿನ ಅಂತರ ನಿಗಮ ವರ್ಗಾವಣೆ ಪ್ರಕ್ರಿಯೆ ದಿನಾಂಕ: 05-07-2023 ರ ಬೆಳಿಗ್ಗೆ 11:00 ಗಂಟೆಯಿಂದ ಪ್ರಾರಂಭವಾಗಿದ್ದು, ದಿನಾಂಕ:31-12-2023 ರ ಸಂಜೆ 5:30 ರವರೆಗೆ ಆನ್-ಲೈನ್ ಮೂಲಕ ksrtc.org/transfer ರಲ್ಲಿ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಇದೇ ಪ್ರಥಮ ಬಾರಿಗೆ ಶೇ.40ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವ ನೌಕರರು ಹಾಗೂ ತೀವ್ರ ತರಹದ ಅನಾರೋಗ್ಯ (ಹೃದಯ ರೋಗ, ಕ್ಯಾನ್ಸರ್, ಸ್ಪಯಿನಾಲ್ ಕಾರ್ಡ್, ಕಿಡ್ನಿ ವೈಪಲ್ಯ ಹಾಗೂ ಮೆದಳು ಸಂಭಂದಿಸಿದ ಖಾಯಿಲೆಗಳು) ನೌಕರರ ಪ್ರಕರಣಗಳಿಗೆ ಅಂತರ ನಿಗಮ ವರ್ಗಾವಣೆಯ ಶೇ 5 ರಷ್ಟು ಹುದ್ದೆಗಳನ್ನು ಮೀಸಲಿರಿಸಲಾಗಿದೆ.

* ನೌಕರರ ಪತಿ ಅಥವಾ ಪತ್ನಿಯು ಕೇಂದ್ರ ಸರ್ಕಾರ/ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ/ ರಾಜ್ಯ ಸರ್ಕಾರದ ಸ್ವಾಮ್ಯದ ಸಂಸ್ಥೆಯ ಅಧಿಕಾರಿ/ನೌಕರರಾಗಿ ಬೇರೆ ಬೇರೆ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಕರಣಗಳಿಗೆ ಅಂತರ ನಿಗಮ ವರ್ಗಾವಣೆಯ ಶೇ 5 ರಷ್ಟು ಹುದ್ದೆಗಳನ್ನು ಮೀಸಲಿರಿಸಿದ್ದು, ಒಟ್ಟು ಶೇಡಕ 10 ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸಲಾಗಿದೆ.

ಅದರಂತೆ, ಅಂತರ ನಿಗಮ ವರ್ಗಾವಣೆಯ ವಿವರಗಳು ಈ ಕೆಳಗಿನಂತಿವೆ.
1‌.ಅಂತರ ನಿಗಮ ಸಾಮಾನ್ಯ ವರ್ಗದಡಿ ವರ್ಗಾವಣೆಗೊಂಡ ನೌಕರರ ಸಂಖ್ಯೆ – 1175

2.ನೌಕರರ ಪತಿ ಅಥವಾ ಪತ್ನಿಯು ಕೇಂದ್ರ ಸರ್ಕಾರ/ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ/ ರಾಜ್ಯ ಸರ್ಕಾರದ ಸ್ವಾಮ್ಯದ ಸಂಸ್ಥೆಯ ಅಧಿಕಾರಿ/ನೌಕರರಾಗಿ ಬೇರೆ ಬೇರೆ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಕರಣಗಳನ್ನು ಪರಿಗಣಿಸಿ ವರ್ಗಾವಣೆಗೊಂಡಿರುವ ನೌಕರರ ಸಂಖ್ಯೆ – 72

3. ಶೇ.40ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವ ನೌಕರರು ತೀವ್ರ ತರಹದ ಅನಾರೋಗ್ಯ, ಹೃದಯ ರೋಗ, ಕ್ಯಾನ್ಸರ್, ಸ್ಪೈನಲ್ ಕಾರ್ಡ್, ಕಿಡ್ನಿ ವೈಫಲ್ಯ ಹಾಗೂ ಮೆದಳು ಸಂಬಂಧಿಸಿದ ಖಾಯಿಲೆಗಳು) ಪ್ರಕರಣದಲ್ಲಿ ನೌಕರರ ಕೋರಿಕೆ ಪರಿಗಣಿಸಿ ವರ್ಗಾವಣೆಗೊಂಡಿರುವ ನೌಕರರ ಸಂಖ್ಯೆ – 61

ಮೇಲಿನಂತೆ, ದರ್ಜೆ-3 ಮೇಲ್ವಿಚಾರಕೇತರ ಮತ್ತು ದರ್ಜೆ-4 ರ 1,308 ನೌಕರರು ಅಂತರ ನಿಗಮ ವರ್ಗಾವಣೆಗೆ ಅವರ ಕೋರಿಕೆ ಮೇರೆಗೆ ಅರ್ಹರಿರುತ್ತಾರೆ.

ಸದರಿ ಸಂಭವನೀಯ ಅಂತರ ನಿಗಮ ವರ್ಗಾವಣೆ ಪಟ್ಟಿಯನ್ನು ksrtc.karnataka.gov.in ವೆಬ್‌ಸೈಟ್‌ನಲ್ಲಿ ದಿನಾಂಕ: 28.11.2024 ರಂದು ಪ್ರಕಟಿಸಲಾಗಿದೆ.

ಸದರಿ ಪಟ್ಟಿಗೆ ದಿನಾಂಕ: 28.11.2024 ರಿಂದ ದಿನಾಂಕ: 04.12.2024 ರ ಸಂಜೆ 5.30 ರವರೆಗೆ ಲಿಖಿತ ಆಕ್ಷೇಪಣೆ ಸಲ್ಲಿಸಲು ನೌಕರರಿಗೆ ಅವಕಾಶವನ್ನು ನೀಡಲಾಗಿದೆ.

BREAKING: Good news for state transport employees: 1300 KSRTC employees get 'inter-corporation transfer'
Share. Facebook Twitter LinkedIn WhatsApp Email

Related Posts

ALERT : ‘ಮನಿ ಮ್ಯೂಲ್’ ಆಮಿಷಕ್ಕೆ ಬಲಿಯಾಗಬೇಡಿ : ಬ್ಯಾಂಕ್ ಗ್ರಾಹಕರಿಗೆ `RBI’ ಎಚ್ಚರಿಕೆ!

1 Min Read

BIG NEWS : ರಾಜ್ಯದಲ್ಲಿ ಉಚಿತ ಬಸ್ ಪಾಸ್ ಪಡೆದ ಮೊದಲ ವಿದ್ಯಾರ್ಥಿ ಇವನೇ ನೋಡಿ

2 Mins Read

BIG NEWS : ಬೆಂಗಳೂರಲ್ಲಿ ಕಸದ ಟೆಂಡರ್ ನಲ್ಲಿ ಸಾವಿರಾರು ಕೋಟಿ ಅಕ್ರಮ : ಪ್ರಕರಣ ಸಿಬಿಐ ತನಿಖೆಗೆ ವಹಿಸಿ ಎಂದ ಆರ್.ಅಶೋಕ್

1 Min Read
Recent News

ALERT : ‘ಮನಿ ಮ್ಯೂಲ್’ ಆಮಿಷಕ್ಕೆ ಬಲಿಯಾಗಬೇಡಿ : ಬ್ಯಾಂಕ್ ಗ್ರಾಹಕರಿಗೆ `RBI’ ಎಚ್ಚರಿಕೆ!

ಹೈದ್ರಾಬಾದ್ ನಲ್ಲಿ ಮನೆಗೆ ನುಗ್ಗಿ, ಚಾಕುವಿನಿಂದ ಇರಿದು ಖ್ಯಾತ ಯೂಟ್ಯೂಬರ್ ನ ಬರ್ಬರ ಹತ್ಯೆ!

BIG NEWS : ರಾಜ್ಯದಲ್ಲಿ ಉಚಿತ ಬಸ್ ಪಾಸ್ ಪಡೆದ ಮೊದಲ ವಿದ್ಯಾರ್ಥಿ ಇವನೇ ನೋಡಿ

BREAKING : ಉಗ್ರರನ್ನು ಪೋಶಿಸುವವರಿಗೆ ಯಾವ ಕಾರಣಕ್ಕೂ ಸಿಂಧೂ ನದಿ ನೀರು ಬಿಡಲ್ಲ: ರಾಜನಾಥ್ ಸಿಂಗ್ ಖಡಕ್ ಎಚ್ಚರಿಕೆ

State News
KARNATAKA

ALERT : ‘ಮನಿ ಮ್ಯೂಲ್’ ಆಮಿಷಕ್ಕೆ ಬಲಿಯಾಗಬೇಡಿ : ಬ್ಯಾಂಕ್ ಗ್ರಾಹಕರಿಗೆ `RBI’ ಎಚ್ಚರಿಕೆ!

By kannadanewsnow57 KARNATAKA 1 Min Read

ನಿಮ್ಮ ಬ್ಯಾಂಕ್ ಖಾತೆಯನ್ನು ಬಳಸಲು ಅನುಮತಿ ನೀಡಿದರೆ ಸುಲಭವಾಗಿ ಹಣ ಗಳಿಸಬಹುದು ಎಂದು ಯಾರಾದರೂ ನಿಮಗೆ ಆಫರ್ ನೀಡುತ್ತಿದ್ದಾರೆಯೇ? ಹಾಗಿದ್ದರೆ…

BIG NEWS : ರಾಜ್ಯದಲ್ಲಿ ಉಚಿತ ಬಸ್ ಪಾಸ್ ಪಡೆದ ಮೊದಲ ವಿದ್ಯಾರ್ಥಿ ಇವನೇ ನೋಡಿ

BIG NEWS : ಬೆಂಗಳೂರಲ್ಲಿ ಕಸದ ಟೆಂಡರ್ ನಲ್ಲಿ ಸಾವಿರಾರು ಕೋಟಿ ಅಕ್ರಮ : ಪ್ರಕರಣ ಸಿಬಿಐ ತನಿಖೆಗೆ ವಹಿಸಿ ಎಂದ ಆರ್.ಅಶೋಕ್

BREAKING : ಬೆಂಗಳೂರಲ್ಲಿ 27 ಸರ್ಕಾರಿ ಗೋದಾಮುಗಳ ಮೇಲೆ ಲೋಕಾಯುಕ್ತ ದಿಢೀರ್ ದಾಳಿ : ಅಧಿಕಾರಿಗಳು ಕಕ್ಕಾಬಿಕ್ಕಿ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.