Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಕುಡಿದು ವಾಹನ ಚಾಲನೆ: ಕ್ಯಾಲಿಫೋರ್ನಿಯಾದಲ್ಲಿ ಪಾಪ್ ತಾರೆ ಬ್ರಿಟ್ನಿ ಸ್ಪಿಯರ್ಸ್ ಅರೆಸ್ಟ್

05/03/2026 10:04 PM

‘ಆಧಾರ್ ಕಾರ್ಡ್’ನಲ್ಲಿ ಮತ್ತೊಂದು ಬಿಗ್ ಅಪ್ಡೇಟ್ ; ‘UIDAI’ ಮಹತ್ವದ ಘೋಷಣೆ!

05/03/2026 9:59 PM

​’ಪ್ರಜಾ ಸಮರ’ ಪತ್ರಿಕೆಯ ನೂತನ ಮುದ್ರಣಾಲಯಕ್ಕೆ ಚಾಲನೆ: ಅಕ್ಷರ ಲೋಕದ ಹೊಸ ಪಯಣಕ್ಕೆ ಮುನ್ನುಡಿ

05/03/2026 9:56 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಜನತೆಗೆ ಗಮನಕ್ಕೆ: ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ ತಜ್ಞ ವೈದ್ಯರಿಂದ ಸಲಹೆ ಪಡೆಯಲು ಸಹಾಯವಾಣಿ ಆರಂಭ
KARNATAKA

ರಾಜ್ಯದ ಜನತೆಗೆ ಗಮನಕ್ಕೆ: ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ ತಜ್ಞ ವೈದ್ಯರಿಂದ ಸಲಹೆ ಪಡೆಯಲು ಸಹಾಯವಾಣಿ ಆರಂಭ

By kannadanewsnow0920/11/2024 7:22 PM

ಬೆಂಗಳೂರು: ರಾಜ್ಯದ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ ಶಸ್ತ್ರ ಚಿಕಿತ್ಸೆಗೆ ಸಂಬಂಧಿಸಿದಂತೆ ತಜ್ಞ ವೈದ್ಯರಿಂದ ಸಲಹೆ ಪಡೆಯಲು ಸರ್ಕಾರದಿಂದ ಸಹಾಯವಾಣಿ ಸಂಖ್ಯೆಯನ್ನು ಆರಂಭಿಸಲಾಗಿದೆ.

ರೋಗಿಗಳು ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಂದರ್ಭದಲ್ಲಿ ತಜ್ಞ ವೈದ್ಯರಿಂದ ಉಚಿತವಾಗಿ ಎರಡನೇ ಅಭಿಪ್ರಾಯ ಪಡೆಯಲು ಅನುಕೂಲವಾಗುವಂತೆ ದೇಶದಲ್ಲಿಯೇ ಮೊದಲ ಬಾರಿಗೆ ಸಹಾಯವಾಣಿ ಪ್ರಾರಂಭಿಸಲಾಗಿದೆ. 1800 4258 330 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ತಿಳಿಸಿದ್ದಾರೆ.

ರೋಗಿಗಳು ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಂದರ್ಭದಲ್ಲಿ ತಜ್ಞ ವೈದ್ಯರಿಂದ ಉಚಿತವಾಗಿ ಎರಡನೇ ಅಭಿಪ್ರಾಯ ಪಡೆಯಲು ಅನುಕೂಲವಾಗುವಂತೆ ದೇಶದಲ್ಲಿಯೇ ಮೊದಲ ಬಾರಿಗೆ ಸಹಾಯವಾಣಿ ಪ್ರಾರಂಭಿಸಲಾಗಿದೆ. 1800 4258 330 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ತಿಳಿಸಿದ್ದಾರೆ.… pic.twitter.com/MlI7yhgoPq

— DIPR Karnataka (@KarnatakaVarthe) November 20, 2024

ರೋಗಿಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಆತ್ಮವಿಶ್ವಾಸ ತುಂಬುವತ್ತ ನೂತನ ಕಾರ್ಯಕ್ರಮ ಜಾರಿಗೆ ತರಲಾಗಿದೆ.  ಶಸ್ತ್ರಚಿಕಿತ್ಸೆಗಳ ಕುರಿತು ಉಚಿತವಾಗಿ ಎರಡನೇ ವೈದ್ಯಕೀಯ ಅಭಿಪ್ರಾಯ ಪಡೆಯಲು ವೇದಿಕೆಯನ್ನು ಆರೋಗ್ಯ ಇಲಾಖೆ ಕಲ್ಪಿಸಿದೆ. ಸರ್ಜರಿ ಅವಶ್ಯಕತೆ ಇದೆಯೋ, ಇಲ್ಲವೋ ಹಾಗೂ ಪರ್ಯಾಯ ಚಿಕಿತ್ಸಾ ವಿಧಾನಗಳು ಏನು? ಎಂಬುದರ ಬಗ್ಗೆ ತಜ್ಞ ವೈದ್ಯರಿಂದ ಸಲಹೆ ಸಿಗಲಿದೆ.

ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ

ಅನಾರೋಗ್ಯ ಪೀಡಿತರಾಗಿ ಶಸ್ತ್ರ ಚಿಕಿತ್ಸೆ ಬಗ್ಗೆ ಸೂಚಿಸಿದಾಗ, ಮತ್ತಷ್ಟು ಉಚಿತ ಸಲಹೆಗಾಗಿ 1800 4258 330 ಸಹಾಯವಾಣಿಗೆ ಕರೆ ಮಾಡಿ
ತಜ್ಞ ವೈದ್ಯರ ಸಲಹೆ ಪಡೆಯಿರಿ. ಆರೋಗ್ಯ ಇಲಾಖೆಯ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ವತಿಯಿಂದ ದಿನದ 24/7 ಗಂಟೆ ಕಾರ್ಯ ನಿರ್ವಹಿಸುವ ಸಹಾಯವಾಣಿ ಇದಾಗಿರುತ್ತದೆ.

ಪ್ರಾಥಮಿಕ ಹಂತದಲ್ಲಿ TKR/THR ಚಿಕಿತ್ಸಾ ವಿಧಾನಗಳಿಗೆ ಎರಡನೇ ವೈದ್ಯಕೀಯ ಅಭಿಪ್ರಾಯ ಲಭ್ಯವಿದೆ. ಮೊಣಕಾಲು ಕೀಲು ಬದಲಿ, ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳು ಹಾಗೂ ಇನ್ನಿತರೇ ಕ್ಲಿಷ್ಟಕರ ಸಮಸ್ಯೆಗಳ ಕುರಿತು ನುರಿತ ವೈದ್ಯರಿಂದ ಎರಡನೇ ಅಭಿಪ್ರಾಯ ಪಡೆಯಬಹುದಾಗಿದೆ.

ಸಾರ್ವಜನಿಕರು ಅಥವಾ ರೋಗಿಗಳು ಪರಿಣಿತ ಶಸ್ತ್ರಚಿಕಿತ್ಸಕರೊಂದಿಗೆ ಸಂಪರ್ಕ ಸಾಧಿಸಬಹುದು, ಪ್ರಶ್ನೆಗಳನ್ನು ಕೇಳಬಹುದು, ಚಿಕಿತ್ಸಾ ಯೋಜನೆಗಳ ಕುರಿತು ಎರಡನೇ ಅಭಿಪ್ರಾಯವನ್ನು ಪಡೆಯಬಹುದು.

ವಾಟ್ಸಾಪ್ ಮೂಲಕವೂ ತಜ್ಞ ವೈದ್ಯರಿಗೆ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಿ ರೋಗ ನಿರ್ಣಯ ಮತ್ತು ಶಸ್ತ್ರಚಿಕಿತ್ಸೆಯ ಬಗೆಗಿನ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ. ಶಸ್ತ್ರಚಿಕಿತ್ಸೆ ಒಳಪಡುವ ಅವಶ್ಯಕತೆ ಅಥವಾ ಇತರೆ ಯಾವುದೇ ಗೊಂದಲ, ಸಂದೇಹಗಳನ್ನು ನಿವಾರಿಸಿಕೊಳ್ಳಬಹುದು. ರೋಗ ಮತ್ತು ಚಿಕಿತ್ಸೆ, ಶಸ್ತ್ರಚಿಕಿತ್ಸಾ ಆಯ್ಕೆಗಳ ಬಗ್ಗೆ ಖಾತ್ರಿಪಡಿಸಿಕೊಳ್ಳಬಹುದು. ಯೋಜನೆಯಲ್ಲಿ ಮೊಣಕಾಲು ಮತ್ತು ಸೊಂಟ (Hip) ಸಮಸ್ಯೆಗಳನ್ನು ಹೊಂದಿರುವ ರೋಗಿಗಳಿಗೆ ಸಾಕ್ಷ್ಯ ಆಧಾರಿತ ಮಾರ್ಗದರ್ಶನವನ್ನು ಒದಗಿಸುವ ಗುರಿಯನ್ನು ಹೊಂದಲಾಗಿದೆ.

ಲಭ್ಯವಿರುವ ಅತ್ಯುತ್ತಮ ಚಿಕಿತ್ಸಾ ಆಯ್ಕೆಯ ಬಗ್ಗೆ ಪ್ರಬುದ್ಧ ನಿರ್ಧಾರವನ್ನು ತೆಗೆದುಕೊಳ್ಳಲು ರೋಗಿಗಳಿಗೆ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಸಲಹೆಯನ್ನು ಪಡೆಯಬಹುದಾಗಿದೆ.

ವಿದೇಶಿ ವ್ಯಾಸಂಗದ ನಿರೀಕ್ಷೆಯಲ್ಲಿದ್ದವರಿಗೆ ಗಮನಕ್ಕೆ: ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

BREAKING : ಭಾರತವನ್ನು ‘ಹಿಂದೂ ರಾಷ್ಟ್ರ’ ವನ್ನಾಗಿ ಮಾಡಲು ನಾವು ಬಿಡಲ್ಲ : ಯತೀಂದ್ರ ಸಿದ್ದರಾಮಯ್ಯ ವಿವಾದ!

Share. Facebook Twitter LinkedIn WhatsApp Email

Related Posts

​’ಪ್ರಜಾ ಸಮರ’ ಪತ್ರಿಕೆಯ ನೂತನ ಮುದ್ರಣಾಲಯಕ್ಕೆ ಚಾಲನೆ: ಅಕ್ಷರ ಲೋಕದ ಹೊಸ ಪಯಣಕ್ಕೆ ಮುನ್ನುಡಿ

05/03/2026 9:56 PM1 Min Read

BREAKING: ಗುವಾಟಿಯಲ್ಲಿ ರೇಡಾರ್ ಸಂಪರ್ಕ ಕಳೆದುಕೊಂಡು ಸುಖೋಯ್-30 MKI ಯುದ್ಧ ವಿಮಾನ ನಾಪತ್ತೆ | Su-30 MKI fighter aircraft

05/03/2026 9:32 PM1 Min Read

ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ: ನಿಮ್ಮ ‘ಮೊಬೈಲ್’ನಲ್ಲಿ ಈ ‘ತುರ್ತು ದೂರವಾಣಿ ಸಂಖ್ಯೆ’ಗಳು ಇರಲಿ

05/03/2026 9:25 PM2 Mins Read
Recent News

BREAKING: ಕುಡಿದು ವಾಹನ ಚಾಲನೆ: ಕ್ಯಾಲಿಫೋರ್ನಿಯಾದಲ್ಲಿ ಪಾಪ್ ತಾರೆ ಬ್ರಿಟ್ನಿ ಸ್ಪಿಯರ್ಸ್ ಅರೆಸ್ಟ್

05/03/2026 10:04 PM

‘ಆಧಾರ್ ಕಾರ್ಡ್’ನಲ್ಲಿ ಮತ್ತೊಂದು ಬಿಗ್ ಅಪ್ಡೇಟ್ ; ‘UIDAI’ ಮಹತ್ವದ ಘೋಷಣೆ!

05/03/2026 9:59 PM

​’ಪ್ರಜಾ ಸಮರ’ ಪತ್ರಿಕೆಯ ನೂತನ ಮುದ್ರಣಾಲಯಕ್ಕೆ ಚಾಲನೆ: ಅಕ್ಷರ ಲೋಕದ ಹೊಸ ಪಯಣಕ್ಕೆ ಮುನ್ನುಡಿ

05/03/2026 9:56 PM

ಇರಾನ್ ಯುದ್ಧ ನೌಕೆ ಮುಳುಗಡೆ ; ರಕ್ಷಣಾ ಕಾರ್ಯಾಚರಣೆಗೆ ಭಾರತೀಯ ವಿಮಾನ, 2 ಯುದ್ಧನೌಕೆಗಳ ನಿಯೋಜನೆ!

05/03/2026 9:45 PM
State News
KARNATAKA

​’ಪ್ರಜಾ ಸಮರ’ ಪತ್ರಿಕೆಯ ನೂತನ ಮುದ್ರಣಾಲಯಕ್ಕೆ ಚಾಲನೆ: ಅಕ್ಷರ ಲೋಕದ ಹೊಸ ಪಯಣಕ್ಕೆ ಮುನ್ನುಡಿ

By kannadanewsnow0905/03/2026 9:56 PM KARNATAKA 1 Min Read

​ರಾಯಚೂರು: ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಹಾಗೂ ಜನಸಾಮಾನ್ಯರ ಧ್ವನಿಯಾಗಿ ಹೊರಹೊಮ್ಮುತ್ತಿರುವ ‘ಪ್ರಜಾ ಸಮರ’ ಪತ್ರಿಕೆಯು ಈಗ ತನ್ನದೇ ಆದ ನೂತನ…

BREAKING: ಗುವಾಟಿಯಲ್ಲಿ ರೇಡಾರ್ ಸಂಪರ್ಕ ಕಳೆದುಕೊಂಡು ಸುಖೋಯ್-30 MKI ಯುದ್ಧ ವಿಮಾನ ನಾಪತ್ತೆ | Su-30 MKI fighter aircraft

05/03/2026 9:32 PM

ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ: ನಿಮ್ಮ ‘ಮೊಬೈಲ್’ನಲ್ಲಿ ಈ ‘ತುರ್ತು ದೂರವಾಣಿ ಸಂಖ್ಯೆ’ಗಳು ಇರಲಿ

05/03/2026 9:25 PM

ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಕುರಿತ ಚರ್ಚೆ ಅಪೂರ್ಣ: ಮತ್ತೊಮ್ಮೆ ಚರ್ಚೆಗೆ ನಿರ್ಧಾರ

05/03/2026 9:19 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.