ಬೆಂಗಳೂರು : ಜಲರೇಚಕ ಯಂತ್ರಗಾರದಿಂದ ಅಮೃತ್ ಕೊಳವೆ ಮಾರ್ಗಕ್ಕೆ ಜೋಡಣೆ ಕೆಲಸಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ಬುಧವಾರ ರಾತ್ರಿ 9 ರಿಂದ ಗುರುವಾರ ರಾತ್ರಿ 9 ಗಂಟೆವರೆಗೆ ಈ ಕೆಳಗೆ ತಿಳಿಸಿರುವ ಪ್ರದೇಶ ಗಳಲ್ಲಿ ಕಾವೇರಿ ನೀರುಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ಪ್ರಕಟಣೆ ತಿಳಿಸಿದೆ.
ಯಾವ್ಯಾವ ಪ್ರದೇಶಗಳು?
ರಾಜು ಕಾಲೊನಿ, ಇಬ್ರಾಹಿಮ್ ಸ್ಟ್ರೀಟ್-1 ರಿಂದ 9ನೇ ರಸ್ತೆ, ನೋಬಲ್ ಸ್ಕೂಲ್ -1 ಮತ್ತು 2ನೇ ಅಡ್ಡರಸ್ತೆ, ನೂರ್ ಲೇಔಟ್, ಶಾಂಪುರ ರೈಲ್ವೆಗೇಟ್-1 ಮತ್ತು 2ನೇ ಅಡ್ಡರಸ್ತೆ, ವಯಾಲಿಕಾವಲ್ ಲೇಔಟ್-1ರಿಂದ 9ನೇ ಮುಖ್ಯ ರಸ್ತೆ, ಸಂದ್ಯಗಪ್ಪ ಲೇಔಟ್-1ರಿಂದ 3ನೇ ಅಡ್ಡರಸ್ತೆ, ವೀರಣ್ಣ ಪಾಳ್ಯ, ನಾರಾಯಣಸ್ವಾಮಿ ಲೇಔಟ್, ವಯಾಲಿ ಕಾವಲ್ ಲೇಔಟ್ -10 ರಿಂದ 16ನೇ ಅಡ್ಡರಸ್ತೆ, ಪ್ರಕೃತಿ ಲೇಔಟ್, ಆಯಿಲ್ ಮಿಲ್ ರಸ್ತೆ(1 ರಿಂದ 15ನೇ ಕ್ರಾಸ್ ತಗ್ಗು ಪ್ರದೇಶ), 16ರಿಂದ 18ನೇ ಅಡ್ಡರಸ್ತೆ(1 ರಿಂದ 15ನೇ ತಿರುವಿನವರೆಗಿನ ಎತ್ತರದ ಪ್ರದೇಶ), 3ನೇ ಬ್ಲಾಕ್ ಸರ್ವೀಸ್ ರಸ್ತೆ, ಎಚ್.ಆರ್.ಬಿ.ಆರ್ ಲೇಔಟ್, ಹೆಣ್ಣೂರು, ರಾಮಸ್ವಾಮಿ ಪಾಳ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳು.