ವಿಜಯಪುರ : ಬಿಜೆಪಿಯವರು ಬಸವಣ್ಣನವರನ್ನ ಮನುಸ್ಮೃತಿಗೆ ಒಯ್ದು ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ. ನಿಮ್ಮ ಅಸ್ಮಿತೆ ನಿಮಗೆ ಎಷ್ಟು ಪ್ರಮುಖವೋ ನಮ್ಮ ಅಸ್ಮಿತೆ ನಮಗೂ ಅಷ್ಟೇ ಪ್ರಮುಖವಾಗಿದೆ.ನಮ್ಮ ಸ್ಮೃತಿಯನ್ನು ತಿರುಚಲು ಏನಾದರೂ ಪ್ರಯತ್ನಪಟ್ಟರೆ, ನಿಮ್ಮ ಮನುಸ್ಮೃತಿಯಲ್ಲಿ ಏನಿದೆ ಎಂದು ಬಹಿರಂಗ ಮಾಡುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರಿಗೆ ಬೃಹತ್ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಬಹಿರಂಗ ಎಚ್ಚರಿಕೆ ನೀಡಿದರು.
ಬಿಜೆಪಿಯವರು ಬಸವಾದಿ ಶರಣರ ವಚನ ತಿರುಚಲು ಹೊರಟಿದ್ದಾರೆ. ಬಸವಣ್ಣ ಅವರನ್ನು ಒಯ್ದು ಮನುವಾದದ ಮನುಸ್ಮೃತಿಗೆ ಹಚ್ಚಲಿದ್ದಾರೆ. ವೇದ ಆಗಮಗಳ ಮೂಗು ಕೊಯಿ ಎಂದು ವಚನದಲ್ಲಿ ಹೇಳಿದ್ದಾರೆ.ಆದರೆ ಈಗ ಅದೇ ವಚನಗಳನ್ನು ತಿದ್ದಲು ಹೊರಟಿದ್ದಾರೆ. ಅವರ ವೇದಗಳು ಹಾಗೂ ಸ್ಮೃತಿ ಬಗ್ಗೆ ನಾನು ಮಾತನಾಡುವುದಿಲ್ಲ. ಬಿಎಲ್ ಸಂತೋಷ್ ಅವರೇ ನಿಮಗೆ ವೇದ ಮತ್ತು ಸ್ಮೃತಿಗಳೇ ಪ್ರಮುಖ ಹಾಗೆಯೇ ನಮ್ಮ ಸ್ಮೃತಿಯು ನಮಗೆ ಪ್ರಮುಖ ಎಂದರು.
ಸ್ಮೃತಿ ನಿಮಗೆ ತಾಯಿ ಇದ್ದಂತೆ. ನಮ್ಮ ಸ್ಮೃತಿ ನಮಗೆ ತಾಯಿ ಇದ್ದಂತೆ. ನಮ್ಮ ಸ್ಮೃತಿಯ ಬಗ್ಗೆ ಆಟವಾಡಬೇಡಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ಗೆ ಸಚಿವ ಎಂಬಿ ಪಾಟೀಲ್ ಬಹಿರಂಗ ಎಚ್ಚರಿಕೆ ನೀಡಿದ್ದಾರೆ. ಬೇರೆಯವರ ಸ್ಮೃತಿ ಜೊತೆಗೆ ಹಸ್ತಕ್ಷೇಪ ಆಟ ಆಡುವುದನ್ನು ಬಿಡಬೇಕು. ಇಲ್ಲದಿದ್ದರೆ ನಿಮ್ಮ ಮನುಸ್ಮೃತಿಯಲ್ಲಿ ಏನಿದೆ ಅಂತ ಬಹಿರಂಗ ಮಾಡುತ್ತೇನೆ. ನಿಮ್ಮ ಮನುಸ್ಮೃತಿ ಬಗ್ಗೆ ಪುಸ್ತಕ ಮುದ್ರಣ ಮಾಡುತ್ತೇನೆ. ಆದರೆ ಅದು ನಮಗೆ ಬೇಕಾಗಿಲ್ಲ ಎಂದು ವಿಜಯಪುರದಲ್ಲಿ ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟಿಲ್ ಎಚ್ಚರಿಕೆ ನೀಡಿದರು.
ನಮ್ಮ ಅಸ್ಮಿತೆಗೆ ಕೈ ಹಾಕಿ ತಿರುಚಲು ಹೋಗಬೇಡಿ. ನಮ್ಮ ಆಸ್ಮಿತೆ ಸತ್ಯವಿದೆ ನಿಮ್ಮ ಸುಳ್ಳು ಅಸ್ಮಿತೆ ಜನರ ಮುಂದೆ ಇಡಬೇಕಾಗುತ್ತದೆ. ಇಂತಹ ಕೆಟ್ಟ ಕೆಲಸಕ್ಕೆ ಕೈ ಹಾಕಬೇಡಿ ಎಂದು ಮನವಿ ಮಾಡುತ್ತೇನೆ. ನಿಮ್ಮ ಅಸ್ಮಿತೆ ವೇದ ಉಪನಿಷತ್ ಬಗ್ಗೆ ನಮಗೆ ಗೌರವವಿದೆ. ಬಿ ಎಲ್ ಸಂತೋಷ್ ಅವರೇ ನೀವು ಭಗವದ್ಗೀತೆ ಪ್ರಚಾರ ಮಾಡಿ. ಆದರೆ ಬೇರೆಯವರ ಅಸ್ಮಿತೆಗೆ ಆಟವಾಡಬೇಡಿ. ಇದನ್ನು ಬಿಟ್ಟು ನಮ್ಮ ಸ್ವಾಮೀಜಿಗಳು ಹೋರಾಟಕ್ಕೆ ಬಂದಿದ್ದಾರೆ.
ವೇದ ಉಪನಿಷತ್ ಭಗವದ್ಗೀತೆ ಬಗ್ಗೆ ಗೌರವಿಸುವೆ ಆ ಕುರಿತು ಅಭಿಯಾನ ಮಾಡಲಿ ನಾವು ಸಪೋರ್ಟ್ ಮಾಡುತ್ತೇವೆ ಆದರೆ ನಮ್ಮ ಅಸ್ಮಿತೆ ತಿರುಚಲಿಕ್ಕೆ ಹೋಗಿ ಆಟವಾಡಿದರೆ ಬಿಡುವುದಿಲ್ಲ ಬಸವಾದಿ ಶರಣರ ವಚನಗಳನ್ನು ತಿದ್ದುತ್ತಿರುವ ಬಗ್ಗೆ ಎಂಬಿ ಪಾಟೀಲ್ ಆಕ್ರೋಶ ಹೊರಹಾಕಿದರು.