ನವದೆಹಲಿ : ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿರುವ ಬೆನ್ನಲ್ಲೇ ಅಮೆರಿಕದ ಕೆಲವು ಮತ ಕೇಂದ್ರಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ.
ಅಧ್ಯಕ್ಷಿಯ ಚುನಾವಣೆ ನಡುವೆ ಕೆಲವು ಮತ ಕೇಂದ್ರಗಳಿಗೆ ಕಿಡಿಗೇಡಿಗಳು ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇ ಕಳುಹಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹಲವಾರು ರಾಜ್ಯಗಳಲ್ಲಿನ ಮತದಾನ ಸ್ಥಳಗಳಿಗೆ ಬಾಂಬ್ ಬೆದರಿಕೆಗಳ ಬಗ್ಗೆ ವರದಿಯಾಗಿದ್ದು, ಅವುಗಳಲ್ಲಿ ಅನೇಕವು ರಷ್ಯಾದ ಇಮೇಲ್ ಡೊಮೇನ್ಗಳಿಂದ ಹುಟ್ಟಿಕೊಂಡಿವೆ. ಇಲ್ಲಿಯವರೆಗೆ ಯಾವುದೇ ಬೆದರಿಕೆಗಳು ವಿಶ್ವಾಸಾರ್ಹವೆಂದು ನಿರ್ಧರಿಸಲಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.