ಮನಿಲಾ: ದಕ್ಷಿಣ ಫಿಲಿಪೈನ್ಸ್ನ ಜನರಲ್ ಸ್ಯಾಂಟೋಸ್ ನಗರದಲ್ಲಿ ಸೋಮವಾರ ಸಂಭವಿಸಿದ 7.8 ತೀವ್ರತೆಯ ಪ್ರಬಲ ಭೂಕಂಪಕ್ಕೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಎಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಭೂಕಂಪದ ತೀವ್ರತೆಗೆ ಹಲವು ಕಟ್ಟಡಗಳು ನೆಲಸಮಗೊಂಡಿದ್ದು, ಇಡೀ ಪ್ರದೇಶದಲ್ಲಿ ಸುನಾಮಿ ಭೀತಿ ಎದುರಾಗಿದೆ. ಮೊದಲ ಭೂಕಂಪ ಸಂಭವಿಸಿದ ಕೇವಲ ಎರಡು ಗಂಟೆಗಳ ಬಳಿಕ ಅದೇ ಪ್ರದೇಶದಲ್ಲಿ 6.1 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಎಸ್ (USGS) ತಿಳಿಸಿದೆ.
ಹೆಚ್ಚಿದ ಸಾವು-ನೋವಿನ ಆತಂಕ
ಜನರಲ್ ಸ್ಯಾಂಟೋಸ್ನ ವಿಪತ್ತು ನಿರ್ವಹಣಾ ಮುಖ್ಯಸ್ಥ ಅಗ್ರಿಪಿನೋ ದಾಸೇರಾ ಅವರು ಮಾತನಾಡಿ, “ಅಧಿಕಾರಿಗಳು ಸ್ಥಳದಲ್ಲಿ ಹಾನಿಯ ಪ್ರಮಾಣವನ್ನು ಪರಿಶೀಲಿಸುತ್ತಿದ್ದು, ಸಾವಿನ ಸಂಖ್ಯೆಯನ್ನು ಇನ್ನೂ ಖಚಿತಪಡಿಸಿಕೊಳ್ಳಲಾಗುತ್ತಿದೆ” ಎಂದು ಹೇಳಿದ್ದಾರೆ.
ಭೂಕಂಪದ ಬೆನ್ನಲ್ಲೇ ಫಿಲಿಪೈನ್ಸ್ ಕರಾವಳಿಯಲ್ಲಿ ಸುಮಾರು 3 ಅಡಿ ಎತ್ತರದ ಸುನಾಮಿ ಅಲೆಗಳು ಅಪ್ಪಳಿಸಿದ್ದು, ಫಿಲಿಪೈನ್ಸ್ ಮತ್ತು ಇಂಡೋನೇಷ್ಯಾ ಸರ್ಕಾರಗಳು ಕರಾವಳಿ ನಿವಾಸಿಗಳಿಗೆ ಸುರಕ್ಷಿತ ಹಾಗೂ ಎತ್ತರದ ಪ್ರದೇಶಗಳಿಗೆ ತೆರಳುವಂತೆ ಸೂಚಿಸಿವೆ.
ಫಿಲಿಪೈನ್ಸ್ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಜೂನಿಯರ್ ಅವರು ಮಿಂಡನಾವೊದ ಪೀಡಿತ ಪ್ರದೇಶಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. “ಕೂಡಲೇ ಎತ್ತರದ ಪ್ರದೇಶಗಳಿಗೆ ತೆರಳಿ, ಕಾಯಬೇಡಿ. ನೀವು ಹಿಂದೆ ಬಿಟ್ಟು ಬರುವ ವಸ್ತುಗಳಿಗಿಂತ ನಿಮ್ಮ ಜೀವ ಅಮೂಲ್ಯವಾದುದು” ಎಂದು ಅವರು ಜನರಲ್ಲಿ ಮನವಿ ಮಾಡಿದ್ದಾರೆ.
ವಿವಿಧ ದೇಶಗಳಲ್ಲಿ ಸುನಾಮಿ ಅಲರ್ಟ್
ಇಂಡೋನೇಷ್ಯಾ: ಕಾಲಿಮಂತನ್ ಮತ್ತು ಸುಲಾವೆಸಿ ಭಾಗಗಳಲ್ಲಿ 3 ಮೀಟರ್ವರೆಗೂ ಸುನಾಮಿ ಅಲೆಗಳು ಏಳುವ ಸಾಧ್ಯತೆ ಇದ್ದು, ಮನಾಡೋ, ಗೊರೊಂಟಾಲೊ ಮತ್ತು ಸಾಂಗಿಹೆ ದ್ವೀಪಗಳ ನಿವಾಸಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಸೂಚಿಸಲಾಗಿದೆ.
ಫಿಲಿಪೈನ್ಸ್: ಫಿಲಿಪೈನ್ಸ್ನ ಜ್ವಾಲಾಮುಖಿ ಮತ್ತು ಭೂಕಂಪನ ಸಂಸ್ಥೆ (PHIVOLCS) ಈಗಾಗಲೇ 1.4 ಮೀಟರ್ ಎತ್ತರದ ಸುನಾಮಿ ಅಲೆಗಳನ್ನು ದಾಖಲಿಸಿದೆ.
ಜಪಾನ್ ಮತ್ತು ಮಲೇಷ್ಯಾ: ಜಪಾನ್ ತನ್ನ ಪೆಸಿಫಿಕ್ ಕರಾವಳಿ ಪ್ರದೇಶದಲ್ಲಿ 1 ಮೀಟರ್ ಎತ್ತರದ ಸುನಾಮಿ ಅಲೆಗಳ ಮುನ್ನೆಚ್ಚರಿಕೆ ನೀಡಿದೆ. ಮಲೇಷ್ಯಾದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.
ನೆಲಸಮಗೊಂಡ ವಾಣಿಜ್ಯ ಸಂಕೀರ್ಣಗಳು
ಭೂಕಂಪದ ಭೀಕರತೆಗೆ ಕಟ್ಟಡಗಳು ಕುಸಿದು ಬಿದ್ದಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಜನರಲ್ ಸ್ಯಾಂಟೋಸ್ ನಗರದಲ್ಲಿದ್ದ ಪ್ರಸಿದ್ಧ ‘ಜೋಲಿಬೀ’ ಫಾಸ್ಟ್ ಫುಡ್ ರೆಸ್ಟೋರೆಂಟ್ ಹೊಂದಿದ್ದ ಶಾಪಿಂಗ್ ಮಾಲ್ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಕರಾವಳಿ ಪ್ರದೇಶಗಳಲ್ಲಿ ತುರ್ತು ರಕ್ಷಣಾ ಕಾರ್ಯಗಳು ಮುಂದುವರಿದಿವೆ.
BUILDING COLLAPSES IN GENSAN AFTER 7.8 EARTHQUAKE
LOOK: Structural damage is seen in General Santos after a severe 7.8-magnitude earthquake hit on Monday morning.
Power outages have been reported across the city, and multiple aftershocks continue to be recorded.
📷 PIA SarGen… pic.twitter.com/w4ryymAlWr
— NewsWatch Plus PH (@newswatchplusph) June 8, 2026
🇵🇭 Devastating scenes from General Santos, Philippines
High school and university buildings have collapsed after a powerful earthquake struck the city.
Prayers for the victims and rescuers on the ground.
Source: @TabzLIVE / Writer: Oliver https://t.co/3FraWamy9L pic.twitter.com/GXbZbmbAWB
— Mario Nawfal (@MarioNawfal) June 8, 2026








