ಬೆಂಗಳೂರು: ಗ್ಯಾರಂಟಿ ಯೋಜನೆಗಳನ್ನು “ದಿವಾಳಿಯ ರೇವಡಿ“ ಎಂದು ಲೇವಡಿ ಮಾಡಿದ್ದರು. ನಂತರ ತಾವೇ ”ಮೋದಿ ಕಿ ಗ್ಯಾರಂಟಿ“ ಎನ್ನುತ್ತಾ ಗ್ಯಾರಂಟಿ ಪದವನ್ನು ಕದ್ದರು. ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಬೊಬ್ಬೆ ಹೊಡೆದರು, ಝಾರ್ಖಂಡ್ ಚುನಾವಣೆಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಕರ್ನಾಟಕ ಮಾದರಿಯನ್ನು ಅನುಸರಿಸಿದ್ದಾರೆ ಎಂಬುದಾಗಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ಧಾಳಿ ನಡೆಸಿದ್ದಾರೆ.
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಗೋಸುಂಬೆ ಗುಣದ ಬಿಜೆಪಿಯವರ ಡಬಲ್ ಸ್ಟ್ಯಾಂಡರ್ಡ್ ಬುದ್ದಿ ಹಲವು ಬಾರಿ ಸಾಬೀತಾಗಿದೆ. ಈಗ ಮತ್ತೊಂದು ನಿದರ್ಶನ ಸಿಕ್ಕಿದೆ. ಗ್ಯಾರಂಟಿ ಯೋಜನೆಗಳನ್ನು “ದಿವಾಳಿಯ ರೇವಡಿ“ ಎಂದು ಲೇವಡಿ ಮಾಡಿದ್ದರು. ನಂತರ ತಾವೇ ”ಮೋದಿ ಕಿ ಗ್ಯಾರಂಟಿ“ ಎನ್ನುತ್ತಾ ಗ್ಯಾರಂಟಿ ಪದವನ್ನು ಕದ್ದರು. ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಬೊಬ್ಬೆ ಹೊಡೆದರು, ಝಾರ್ಖಂಡ್ ಚುನಾವಣೆಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಕರ್ನಾಟಕ ಮಾದರಿಯನ್ನು ಅನುಸರಿಸಿದ್ದಾರೆ ಎಂದಿದ್ದಾರೆ.
ಕೆಲವೇ ಗಂಟೆಗಳ ಹಿಂದೆ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ದ ಪ್ರಧಾನಿ ಮೋದಿಯವರು ಈಗ ಅದೇ ಗ್ಯಾರಂಟಿ ಮಾದರಿಯನ್ನು ಅನುಸರಿಸಿದ್ದನ್ನು ಹಿಪಾಕ್ರಸಿ ಎನ್ನಬೇಕೋ, ನಿರ್ಲಜ್ಜತನ ಎನ್ನಬೇಕೋ? ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಯಥಾವತ್ ನಕಲು ಮಾಡಿ ಝಾರ್ಖಂಡ್ ಚುನಾವಣೆಯ ಪ್ರಣಾಳಿಕೆ ತಯಾರಿಸಿರುವ ಬಿಜೆಪಿಯ ಈ ನಡೆಯ ಬಗ್ಗೆ ಪ್ರಹ್ಲಾದ್ ಜೋಶಿ ಅವರ ಪ್ರತಿಕ್ರಿಯೆ ಏನು? ಗ್ಯಾರಂಟಿಗಳನ್ನು ನಕಲು ಮಾಡಿರುವ ಬಗ್ಗೆ ಬಿಜೆಪಿ ನಾಯಕರ ಪ್ರತಿಕ್ರಿಯೆ ಕೇಳುವ ಕುತೂಹಲ ಹೆಚ್ಚಿದೆ ನನ್ನಲ್ಲಿ ಎಂದು ತಿಳಿಸಿದ್ದಾರೆ.
ಗೋಸುಂಬೆ ಗುಣದ ಬಿಜೆಪಿಯವರ ಡಬಲ್ ಸ್ಟ್ಯಾಂಡರ್ಡ್ ಬುದ್ದಿ ಹಲವು ಬಾರಿ ಸಾಬೀತಾಗಿದೆ. ಈಗ ಮತ್ತೊಂದು ನಿದರ್ಶನ ಸಿಕ್ಕಿದೆ.
ಗ್ಯಾರಂಟಿ ಯೋಜನೆಗಳನ್ನು “ದಿವಾಳಿಯ ರೇವಡಿ“ ಎಂದು ಲೇವಡಿ ಮಾಡಿದ್ದರು.
ನಂತರ ತಾವೇ ”ಮೋದಿ ಕಿ ಗ್ಯಾರಂಟಿ“ ಎನ್ನುತ್ತಾ ಗ್ಯಾರಂಟಿ ಪದವನ್ನು ಕದ್ದರು.ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ… pic.twitter.com/yotOGMfG9I
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) November 4, 2024
ಚದುರಂಗ ಆಡಿದವರು ಮುಳುಗಿ ಹೋಗಿದ್ದಾರೆ, ಕೆಲಸದ ಆಧಾರದ ಮೇಲೆ ಜನರು ತೀರ್ಮಾನ: ಡಿಸಿಎಂ ಡಿಕೆಶಿ
GOOD NEWS: ಮಾಜಿ ಸೈನಿಕರ ಮಕ್ಕಳ ವಿದ್ಯಾಭ್ಯಾಸದ ಶಿಷ್ಯವೇತನ ಹಾಗೂ ಆರ್ಥಿಕ ಅನುದಾನಕ್ಕಾಗಿ ಅರ್ಜಿ ಆಹ್ವಾನ