ಶಿವಮೊಗ್ಗ : ಪೋಷಕರೇ ಎಚ್ಚರ, ಮೈಮೇಲೆ ಬಿಸಿ ಟೀ ಪಾತ್ರೆಯನ್ನು ಮೈಮೇಲೆ ಬೀಳಿಸಿಕೊಂಡು ಮಗು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಜಿಲ್ಲೆ ಹೊಸನಗರ ತಾಲ್ಲೂಕು ಹಿರೀಮನೆ ನಿವಾಸಿ ರಾಜೇಶ್, ಅಶ್ವಿನಿ ದಂಪತಿಯ ಮಗು 2 ವರ್ಷದ ಮಗು ಕುದಿಸಿಟ್ಟಿದ್ದ ಟೀ ಪಾತ್ರೆಯನ್ನ ಮೈಮೇಲೆ ಬೀಳಿಸಿಕೊಂಡು ಗಂಭೀರವಾಗಿ ಗಾಯಗೊಂಡಿತ್ತು. ಕೂಡಲೇ ಮಗುವನ್ನು ಗುವನ್ನು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. 8 ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಗು ಅಥರ್ವ ಇಂದು ಮೃತಪಟ್ಟಿದೆ.
ಅಥರ್ವ ತಾಯಿ ಪಾತ್ರೆಯಲ್ಲಿ ಟೀ ಕಾಸಿಟ್ಟಿದ್ದರು. ಇದನ್ನ ತಿಳಿಯದ ಮಗು ಪಾತ್ರೆಯನ್ನ ಮೈಮೇಲೆ ಬೀಳಿಸಿಕೊಂಡಿದೆ. ಪರಿಣಾಮ ಮಗುವಿನ ಬಾಯಿಂದ ಹೊಟ್ಟೆಯವರಿಗೆ ಸುಟ್ಟ ಗಾಯವಾಗಿತ್ತು.