ನವದೆಹಲಿ : ತಿರುಪತಿಯ ಇಸ್ಕಾನ್ ದೇವಸ್ಥಾನಕ್ಕೆ ಭಾನುವಾರ ಬಾಂಬ್ ಬೆದರಿಕೆ ಬಂದಿದೆ. ಐಸಿಸ್ ಭಯೋತ್ಪಾದಕರು ದೇವಾಲಯವನ್ನು ಸ್ಫೋಟಿಸುತ್ತಾರೆ ಎಂದು ಬೆದರಿಕೆ ಇಮೇಲ್ ಸ್ವೀಕರಿಸಿದ ಬಗ್ಗೆ ದೇವಾಲಯದ ಅಧಿಕಾರಿಗಳು ಪೊಲೀಸರಿಗೆ ದೂರು ದಾಖಲಿಸಿದ್ದಾರೆ.
ತಿರುಪತಿ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಶೋಧ ನಡೆಸಿದರು. ಇನ್ನು ಸ್ಫೋಟಕಗಳನ್ನ ಪರೀಕ್ಷಿಸಲು ಸ್ಥಳೀಯ ಪೊಲೀಸರು ಬಾಂಬ್ ಸ್ಕ್ವಾಡ್ ಮತ್ತು ಶ್ವಾನ ಘಟಕಗಳು ಧಾಮಿಸಿವೆ. ಆದಾಗ್ಯೂ, ದೇವಾಲಯದ ಆವರಣದಿಂದ ಯಾವುದೇ ಸ್ಫೋಟಕಗಳು ಅಥವಾ ಇತರ ಯಾವುದೇ ಆಕ್ಷೇಪಾರ್ಹ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿಲ್ಲ.
ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸುಲು ಅವರು ಸುದ್ದಿಯನ್ನ ದೃಢಪಡಿಸಿದ್ದು, ಬೆದರಿಕೆಗಳಿಗೆ ಕಾರಣರಾದವರನ್ನ ಗುರುತಿಸಲು ಸೂಕ್ತ ಮತ್ತು ಅಗತ್ಯ ಪ್ರಯತ್ನಗಳು ನಡೆಯುತ್ತಿವೆ ಎಂದು ಭರವಸೆ ನೀಡಿದರು. ಇದು ಮತ್ತೊಂದು ಹುಸಿ ಮೇಲ್ ಎಂದು ಪೊಲೀಸರು ಶಂಕಿಸಿದ್ದಾರೆ.
ಕಳೆದ ಮೂರು ದಿನಗಳಲ್ಲಿ ತಿರುಪತಿಗೆ ಬಂದ ನಾಲ್ಕನೇ ಹುಸಿ ಮೇಲ್ ಇದಾಗಿದೆ.
ಬಿವೈ ವಿಜಯೇಂದ್ರ ವಿರುದ್ಧ ಸಿಡಿದೆದ್ದ ಶಾಸಕ ರಮೇಶ್ ಜಾರಕಿಹೊಳಿ: ಉಪ ಚುನಾವಣೆಯಲ್ಲಿ ಪ್ರಚಾರ ಮಾಡದಿರಲು ನಿರ್ಧಾರ
ಬೆಂಗಳೂರಿನಲ್ಲಿ ‘ಮೆಡಿಕವರ್ ಆಸ್ಪತ್ರೆ’ಯಿಂದ ಪಾರ್ಶ್ವವಾಯು ಜಾಗೃತಿ ಕಾರ್ಯಕ್ರಮ
ಸಚಿವ ಜಮೀರ್ ಅಹ್ಮದ್ ಆಧುನಿಕ ಟಿಪ್ಪು ಸುಲ್ತಾನ್ ಆಗಲು ಹೊರಟಿದ್ದಾರೆ: ಆರ್ ಅಶೋಕ್ ಕಿಡಿ